ಉಪಚುನಾವಣೆ ವಾಸ್ತವ ವರದಿ | ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ, ಹೆಸರಿಗಷ್ಟೇ ಜೆಡಿಎಸ್

Karnataka By Elections 2019 Ranebennur Ground Report | ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಹಿರಿಯ ನಾಯಕರಾಗಿರುವ ಕೆ.ಬಿ.ಕೋಳಿವಾಡ ಈ ಚುನಾವಣೆ ಮೂಲಕ ಹಿಂದಿನ ಚುನಾವಣೆ ಸೇಡನ್ನು ತೀರಿಸಿಕೊಳ್ಳಲಿದ್ದಾರಾ ಅಥವಾ ಮತ್ತೆ ಸೋಲಿನ ಕಹಿ ಅನುಭವಿಸಲಿದ್ದಾರೆಯೋ ಎಂಬುದು ಫಲಿತಾಂಶದ ದಿನ ತಿಳಿಯಲಿದೆ.

HR Ramesh | news18-kannada
Updated:November 22, 2019, 8:56 PM IST
ಉಪಚುನಾವಣೆ ವಾಸ್ತವ ವರದಿ | ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ, ಹೆಸರಿಗಷ್ಟೇ ಜೆಡಿಎಸ್
ಕೆ.ಬಿ.ಕೋಳಿವಾಡ ಮತ್ತು ಅರುಣ್ ಕುಮಾರ್ ಪೂಜಾರ
  • Share this:
ಬೆಂಗಳೂರು(ನ.22) : ಶಾಸಕರ ರಾಜೀನಾಮೆಯಿಂದ ತೆರವಾದ 17 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಚುನಾವಣೆಯ ಬಹುತೇಕ ಪ್ರಕ್ರಿಯೆಗಳು ಮುಗಿದಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಈ ಉಪಚುನಾವಣೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಕಾರಣ, ಎಲ್ಲ ಕ್ಷೇತ್ರಗಳು ಹೈವೋಲ್ಟೆಜ್ ಕಣಗಳಾಗಿವೆ. ಅವುಗಳಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರ ಕೂಡ ಪ್ರಮುಖ ಕಣವಾಗಿದ್ದು, ಇಲ್ಲಿನ ಲೆಕ್ಕಾಚಾರ ಹೇಗಿದೆ ಎಂಬ ಪ್ರತ್ಯಕ್ಷ ವರದಿ ಇಲ್ಲಿದೆ.

ರಾಣೇಬೆನ್ನೂರ ಕ್ಷೇತ್ರದ 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಶಂಕರ್ ಅವರು ಕಾಂಗ್ರೆಸ್​ನ ಪ್ರಬಲ ಸ್ಪರ್ಧೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನೇ ಸೋಲಿಸಿದ್ದರು. ಆ ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರು ಆದರು. ಆದರೆ, ಆ ಬಳಿಕ ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಂಕರ್ ಅವರಿಗೆ ಬಿಜೆಪಿ ಭಾರೀ ಶಾಕ್ ನೀಡಿತ್ತು. ಇವರಿಗೆ ಟಿಕೆಟ್ ನೀಡದ ಕಮಲ ಪಕ್ಷ ಅರುಣ್ ಕುಮಾರ್ ಪೂಜಾರ ಅವರಿಗೆ ಟಿಕೆಟ್ ನೀಡಿದೆ.

ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಅರುಣ್ ಕುಮಾರ್ ಪೂಜಾರ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್​ನಿಂದ ಪ್ರಬಲ ಸ್ಪರ್ಧಿಯಾಗಿ ಕೆ.ಬಿ.ಕೋಳಿವಾಡ ಅಖಾಡದಲ್ಲಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಅಷ್ಟೆನು ಪ್ರಬಲವಾಗಿಲ್ಲದ ಜೆಡಿಎಸ್ ಮಲ್ಲಿಕಾರ್ಜು ಹಲಗೇರಿ ಅವರನ್ನು ಕಣಕ್ಕಿಳಿಸಿದೆ.

ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,29,149  ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರು 1,17,041 ಹಾಗೂ 1,12,108 ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿ ಲೆಕ್ಕಾಚಾರಕ್ಕೆ ಬರುವುದಾದರೆ, ಇಲ್ಲಿ ಲಿಂಗಾಯತ ಮತಗಳೇ ಬಹುತೇಕ ನಿರ್ಣಾಯಕವಾಗಲಿವೆ. ಇನ್ನುಳಿದಂತೆ ಕುರುಬ ಮತ್ತು ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವಿನ ತಕ್ಕಡಿಯಾಗಿವೆ. ಲಿಂಗಾಯತರು ಸುಮಾರು 80 ಸಾವಿರ ಮತದಾರರಿದ್ದಾರೆ.  ಕುರುಬರು ಸಮುದಾಯದ ಸುಮಾರು 35 ಸಾವಿರ, ಮುಸ್ಲಿಂ ಸಮುದಾಯದ ಸುಮಾರು 35 ಸಾವಿರ ಹಾಗೂ ದಲಿತರ ಸಮುದಾಯದವರು ಸುಮಾರು 27 ಸಾವಿರ ಮತದಾರರಿದ್ದಾರೆ.

2018 ರ ವಿಧಾನಸಭಾ ಚುನಾವಣೆ ಫಲಿತಾಂಶ ನೋಡುವುದಾದರೆ, ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ಶಂಕರ್ 63,910 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಕೆ.ಬಿ.ಕೋಳಿವಾಡ ಅವರು 59,572 ಮತಗಳನ್ನು ಪಡೆಯುವ ಮೂಲಕ 4338 ಮತಗಳ ಅಂತರದಿಂದ ಪರಾಭವಗೊಂಡು, ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಇನ್ನು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಷಣ್ಮುಖಪ್ಪ ಕೇಲಗಾರ 48,973 ಮತಗಳನ್ನು ಪಡೆದಿದ್ದರು. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಶ್ರೀಪಾದ ಹನುಮಪ್ಪ ಸಾವಕಾರ ಅವರು ಕೇವಲ 1,219 ಮತಗಳನ್ನಷ್ಟೇ ಗಳಿಸಿದ್ದರು.

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಹಿರಿಯ ನಾಯಕರಾಗಿರುವ ಕೆ.ಬಿ.ಕೋಳಿವಾಡ ಈ ಚುನಾವಣೆ ಮೂಲಕ ಹಿಂದಿನ ಚುನಾವಣೆ ಸೇಡನ್ನು ತೀರಿಸಿಕೊಳ್ಳಲಿದ್ದಾರಾ ಅಥವಾ ಮತ್ತೆ ಸೋಲಿನ ಕಹಿ ಅನುಭವಿಸಲಿದ್ದಾರೆಯೋ ಎಂಬುದು ಫಲಿತಾಂಶದ ದಿನ ತಿಳಿಯಲಿದೆ.

ಇದನ್ನು ಓದಿ: ಉಪಚುನಾವಣೆ-19 ವಾಸ್ತವ ವರದಿ | ಜೆಡಿಎಸ್​ ಪ್ರಬಲ ಕೋಟೆಯಾಗಿರುವ ಕೆ.ಆರ್.ಪೇಟೆಯಲ್ಲಿ ಜನರು ಮತ್ತೆ ಪಕ್ಷ ನಿಷ್ಠೆ ತೋರಲಿದ್ದಾರಾ?ಇದನ್ನು ಓದಿ: ಉಪಚುನಾವಣೆ ವಾಸ್ತವ ವರದಿ | ಬಿಜೆಪಿ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ

 

First published: November 22, 2019, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading