• Home
  • »
  • News
  • »
  • state
  • »
  • Karnataka Assembly Committees: ಹಳೆ ಕಮಿಟಿಗೆ ಅಧಿಕಾರವಿಲ್ಲ, ಹೊಸ ಕಮಿಟಿ ನೇಮಿಸಿಲ್ಲ! ಸಮಸ್ಯೆ ಪರಿಹರಿಸಬೇಕಿದ್ದ ವಿಧಾನಸಭಾ ಸಮಿತಿಗಳಿಗೇ ಈಗ ಸಮಸ್ಯೆ!

Karnataka Assembly Committees: ಹಳೆ ಕಮಿಟಿಗೆ ಅಧಿಕಾರವಿಲ್ಲ, ಹೊಸ ಕಮಿಟಿ ನೇಮಿಸಿಲ್ಲ! ಸಮಸ್ಯೆ ಪರಿಹರಿಸಬೇಕಿದ್ದ ವಿಧಾನಸಭಾ ಸಮಿತಿಗಳಿಗೇ ಈಗ ಸಮಸ್ಯೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರು ನ್ಯಾಯಾಲಯಗಳ ಮೇಲೆ ಎಷ್ಟು ನಂಬಿಕೆಯನ್ನು ಹೊಂದಿದ್ದಾರೋ ಅಷ್ಟೇ ನಂಬಿಕೆಯನ್ನು ಈ ಸಮಿತಿಗಳು ಹೊಂದಿದ್ದವು. ಸದ್ಯದ ಸಮಿತಿಗಳ ಅವಧಿ ಮುಕ್ತಾಯವಾಗಿರುವುರಿಂದ ಹೊಸದಾಗಿ ಎಲ್ಲಾ ಪ್ರಕ್ರಿಯೆಯನ್ನು ಆರಂಭ ಮಾಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ವಿಧಾನ ಸಭೆಯ (Karnataka Assembly) ಸುಮಾರು 20 ಸಮಿತಿಗಳ (Karnataka Assembly Committees) ಅವಧಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಎದುರು ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಕಾಯುತ್ತಿದ್ದ ಸಾವಿರಾರು ಜನರ ಪರಿಸ್ಥಿತಿ ಪ್ರಶ್ನಾರ್ಥಕವಾಗಿದೆ. ವಿಧಾನ ಸಭೆ (Assembly) ಮತ್ತು ವಿಧಾನ ಪರಿಷತ್​ (Legislative Council) ಎರಡು ಸದನಗಳು ತಮ್ಮದೇ ಆದ ಸಮಿತಿಗಳನ್ನು ಹೊಂದಿರುತ್ತವೆ. ಇವುಗಳು ಜನರು ಆಡಳಿತಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಹರಿಸುವ ಕಾರ್ಯವನ್ನು ಮಾಡುತ್ತವೆ.


ಪ್ರಮುಖವಾಗಿ ಭರವಸೆಗಳ ಸಮಿತಿ, ಸಾರ್ವಜನಿಕ ಖಾತೆಗಳ ಸಮಿತಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಎಸ್​​ಸಿ/ಎಸ್​ಟಿ ಕಲ್ಯಾಣ ಕಮಿಟಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಮಿಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಂಥಾಲಯ ಮತ್ತು ಪಂಚಾಯತ್ ರಾಜ್​ ಸಮಿತಿಗಳು ಪ್ರಮುಖವಾಗಿದೆ.


ಸರ್ಕಾರ ಹಾಗೂ ಜನರ ನಡುವಿನ ಸಂಪರ್ಕ ಕೊಂಡಿಗಳಾಗಿರೋ ಕಮಿಟಿಗಳು


ಈ ಸಮಿತಿಗಳಲ್ಲಿ ಕೆಲವು ಅಂದರೇ, ಎಸ್​​ಸಿ/ಎಸ್​ಟಿ ಕಲ್ಯಾಣ ಕಮಿಟಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಮಿಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಮಿಟಿಗಳು ಸರ್ಕಾರ ನೀಡಿರುವ ಭರವಸೆಗಳು ಈಡೇರಿದೆಯಾ ಅಥವಾ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನೇರವಾಗಿ ಜನರೊಂದಿಗೆ ಸಂಪರ್ಕ ಸಾಧಿಸಿ ವ್ಯವಹರಿಸುತ್ತವೆ. ಆದ್ದರಿಂದ ಈ ಸಮಿತಿಗಳು ಸಮುದಾಯಗಳು ಹಾಗೂ ವ್ಯಕ್ತಿಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಆದರೆ ಇಂತಹ ಸಮಿತಿಗಳನ್ನು ಅಮಾನತುಗೊಳಿಸುವುದರಿಂದ ಸರ್ಕಾರ ಮತ್ತು ಜನರ ನಡುವಿನ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಕೊಂಡಿಗಳು ಕಳಚಿಕೊಂಡಂತಾಗಿದೆ. ಇದರಿಂದ ಜನರ ಸಂಕಷ್ಟಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.


ಜನರು ನ್ಯಾಯಾಲಯಗಳ ಮೇಲೆ ಎಷ್ಟು ನಂಬಿಕೆಯನ್ನು ಹೊಂದಿದ್ದಾರೋ ಅಷ್ಟೇ ನಂಬಿಕೆಯನ್ನು ಈ ಸಮಿತಿಗಳು ಹೊಂದಿದ್ದವು. ಆದರೆ ಸದ್ಯ ಇದ್ದ ಸಮಿತಿಗಳ ಅವಧಿ ಮುಕ್ತಾಯವಾಗಿರುವುರಿಂದ ಹೊಸದಾಗಿ ಸಮಿತಿಗೆ ಬರುವ ಸದಸ್ಯರು ಎಷ್ಟರ ಮಟ್ಟಿಗೆ ಸಮಸ್ಯೆಗಳ ಬಗ್ಗೆ ಗಮನ ಹರಿಸಬಲ್ಲರು ಅಥವಾ ಹೊಸದಾಗಿ ಎಲ್ಲಾ ಪ್ರಕ್ರಿಯೆಯನ್ನು ಆರಂಭ ಮಾಡಬೇಕಾಗಿರುವರಿಂದ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತವೆ. ಅಲ್ಲದೇ ಸಮಸ್ಯೆ ಪರಿಹಾರ ನೀಡಲು ಸಮಯ ಕೂಡ ಹೆಚ್ಚಾಗುತ್ತದೆ. ಸಮಿತಿಗಳನ್ನು ಶೀಘ್ರ ಪುನರ್ ರಚನೆ ಮಾಡದಿದ್ದರೇ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.


council chairman election on 21st december 2022 mrq
ಬೆಳಗಾವಿಯ ಸುವರ್ಣ ಸೌಧ


ವಿಧಾನ ಪರಿಷತ್​​ ಕಮಿಟಿಗಳ ಅವಧಿ ವಿಸ್ತರಣೆ


ಇನ್ನು, ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಮಾತ್ರ ಸಮಯ ಇರುವುದರಿಂದ ಹಾಲಿ ಇರುವ ಸಮಿತಿಗಳನ್ನೇ ಮುಂದುವರಿಸುವುದು ಸೂಕ್ತಕ್ರಮವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಈ ಅವಧಿಯಲ್ಲಿ ಸಮಿತಿಗಳು ನಾಲ್ಕರಿಂದ ಐದು ಸಭೆಗಳನ್ನು ಮಾತ್ರ ಸಾಧ್ಯವಾಗುತ್ತದೆ. ಆದರೆ ಸಮಿತಿಗಳ ಪುನರ್​ ರಚನೆ ಮಾಡಲು ಮುಂದಾದರೇ, ಮತ್ತೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ವಿಧಾನ ಪರಿಷತ್​​ ತನ್ನ ಕಮಿಟಿಗಳ ಅವಧಿಯನ್ನು ವಿಸ್ತರಿಸಿದೆ.


ಈ ಬಗ್ಗೆ ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಶಾಸಕರಿಂದ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ವಿಧಾನಸಭೆ ಸಮಿತಿಗಳ ಅವಧಿ ಮುಗಿದಿರುವುರಿಂದ ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ ಎಂದು ಸ್ವೀಕರ್ ಹೇಳಿದ್ದಾರೆ. ಅಲ್ಲದೇ ಶೀಘ್ರವೇ ಹೊಸ ಕಮಿಟಿಗಳ ರಚನೆ ಪ್ರಕ್ರಿಯೆ ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.


ಬಂಡೇಮಠ ಕೆಎಚ್‌ಬಿ ಲೇಔಟ್ ನಿವಾಸಿಗಳ ಸಮಸ್ಯೆ ಮುಕ್ತಿ


ಈ ಹಿಂದಿನ ಸಮಿತಿಗಳು ಬಂಡೇಮಠ ಕೆಎಚ್‌ಬಿ ಬಡಾವಣೆಯನ್ನು ಬಿಬಿಎಂಪಿಗೆ ವರ್ಗಾಯಿಸುವುದು, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಗತಿ, ಬಿಡಿಎ ಲೇಔಟ್‌ಗಳು, ಬಿಬಿಎಂಪಿ ಪ್ರದೇಶಗಳು ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳ ಅರ್ಜಿಗಳ ವಿಚಾರಣೆಯನ್ನು ಮಾಡುತ್ತಿದ್ದವು.


ಸಮಿತಿಯ ಕಾರ್ಯದ ಬಗ್ಗೆ ಮಾತನಾಡಿರುವ ಬಂಡೇಮಠ ಕೆಎಚ್‌ಬಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಸತೀಶ್ ಮಾತನಾಡಿ, ಕೆಎಚ್‌ಬಿ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸರ್ಕಾರ 2020ರಲ್ಲಿ ವಿಧಾನಸಭೆಗೆ ತಿಳಿಸಿತ್ತು. ಆದರೆ ಆ ಬಳಿಕ ಎರಡು ವರ್ಷ ಕಳೆದರೂ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಬಡಾವಣೆಯ ನಿವಾಸಿಗಳು ತಮ್ಮ ಅರ್ಜಿಗಳನ್ನು ಸಮಿತಿಗೆ ಸಲ್ಲಿಕೆ ಮಾಡಿದ ಕೆಲವೇ ದಿನಗಳಲ್ಲಿ ಪ್ರಕ್ರಿಯೆಗೆ ಚಲಾನೆ ಸಿಕ್ತು. ಇದು ನಿವಾಸಿಗಳಲ್ಲಿ ಭರವಸೆಯನ್ನು ಮುಡಿಸಿತ್ತು. ಆದ್ದರಿಂದ ಸದ್ಯದ ವಿಧಾನಸಭೆಯ ಕೊನೆಯವರೆಗೂ ಇದೇ ಸಮಿತಿಯನ್ನು ಮುಂದುವರಿಸಲು ಸ್ಪೀಕರ್, ಮುಖ್ಯಮಂತ್ರಿ ಮತ್ತು ರಾಜಕೀಯ ಮುಖಂಡರನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.


ಇಂತಹದ್ದೇ ಉದಾಹರಣೆಗಳನ್ನು ನೋಡುವುದಾದರೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯು ಮುಖ್ಯಮಂತ್ರಿಗಳಿಂದ ಹಿಡಿದು ಸಂಸದರು, ಶಾಸಕರು, ಪ್ರತಿಪಕ್ಷದ ನಾಯಕರುಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು, ಅಧಿಕಾರಿ ವರ್ಗಗಳನ್ನು ಮೂಲಭೂತ ಸೌಕರ್ಯಕ್ಕಾಗಿ 2016 ರಿಂದ ನಿರಂತರವಾಗಿ ಭೇಟಿ ಮಾಡಿ, ಕರ್ನಾಟಕ ರೇರಾ ಪ್ರಾಧಿಕಾರದಲ್ಲಿ 2017ರಲ್ಲಿ ದೂರನ್ನು ದಾಖಲಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ.


karnataka government gratuity amount decision
ಕರ್ನಾಟಕ ಹೈಕೋರ್ಟ್​


ನ್ಯಾಯಾಲಕ್ಕೆ ಹೋಗುವ ಮುನ್ನ ಸಮಿತಿಗೆ ಅರ್ಜಿ


ಮೂಲಭೂತ ಸೌಕರ್ಯಗಳನ್ನು ಪಡೆಯಲು ನ್ಯಾಯಾಲಕ್ಕೆ ಹೋಗುವ ಮುನ್ನ ಅಂತಿಮ ಪ್ರಯತ್ನವಾಗಿ ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಫೆಬ್ರವರಿ 2022 ರಲ್ಲಿ ದೂರನ್ನು ದಾಖಲಿಸಿದ್ದರು. ಸಮಿತಿಯು ಪ್ರಾಧಿಕಾರದೊಂದಿಗೆ ಸಾಕಷ್ಟು ವಿಚಾರಣೆ, ಬಡಾವಣೆ ವೀಕ್ಷಣೆ ಮತ್ತು ವಾಸ್ತವಾಂಶ ಅರಿತ ನಂತರ ಕಳೆದ 6-7 ವರ್ಷಗಳಿಂದ ತೆವಳುತ್ತಿದ್ದ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದ್ದರಿಂದ ಕಾಮಗಾರಿಯು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಲು ಮಾನ್ಯ ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯ ಪಾತ್ರ ಬಹುಮುಖ್ಯ ಪಾತ್ರ ವಹಿಸಿತ್ತು. ಇಲ್ಲಿನ ಎಲ್ಲಾ ನಿವೇಶನದಾರರು ಸಮಿಗೆ ಆಭಾರಿಯಾಗಿದ್ದೇವೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್ ತಿಳಿಸಿದ್ದಾರೆ.


ಹಲವು ವರ್ಷಗಳ ಸಮಸ್ಯೆಗೆ ಸಿಕ್ತು ಮುಕ್ತಿ


ಇನ್ನು, ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.)ದ ಪ್ರಧಾನ ಕಾರ್ಯದರ್ಶಿ ಟಿ.ಎಂ. ಸತೀಶ್ ಮಾತನಾಡಿ, ಅರ್ಜಿಗಳ ಸಮಿತಿಯಿಂದ ತುಂಬಾ ಅನುಕೂಲತೆ ಇದೆ. ನಮ್ಮ ಬಂಡೇಮಠ ಕೆ.ಎಚ್.ಬಿ. ಬಡಾವಣೆಯನ್ನು ಬಿಬಿಎಂಪಿಗೆ ನಿಯಮಾನುಸಾರ ಹಸ್ತಾಂತರ ಮಾಡಬೇಕಿತ್ತು. ಈ ಬಗ್ಗೆ 2020ರಲ್ಲಿ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ನೀಡಿದ ಉತ್ತರದಲ್ಲಿ ಬಡಾವಣೆ ಹಸ್ತಾಂತರ ಅಂತಿಮ ಹಂತದಲ್ಲಿದೆ ಎಂದು ತಿಳಿಸಲಾಗಿತ್ತು. ಆದಾಗಿ 2 ವರ್ಷವಾದರೂ ಆಗಿರಲಿಲ್ಲ.


ಆದರೆ ಅರ್ಜಿಗಳ ಸಮಿತಿಗೆ ದೂರು ನೀಡಿದ ತರುವಾಯ ನಮ್ಮ ಸಮಸ್ಯೆ ಬಹುತೇಕ ನಿರ್ಣಾಯಕ ಹಂತಕ್ಕೆ ಬಂದು. ಬಿಬಿಎಂಪಿ ನಮ್ಮ ಬಡಾವಣೆ ಹಸ್ತಾಂತರ ಮಾಡಿಕೊಳ್ಳಲು ಸಮ್ಮತಿಸಿದೆ. ಹಲವಾರು ವರ್ಷಗಳಿಂದ ಮೂಲಸೌಕರ್ಯ ಅಭಿವೃದ್ಧಿ ಆಗದೆ ಸಂಕಷ್ಟದಲ್ಲಿದ್ದ ನಮಗೆ ಈಗ ಆಶಾಭಾವನೆ ಮೂಡಿದೆ. ಇಂತಹ ಸನ್ನಿವೇಶದಲ್ಲಿ ಅರ್ಜಿಗಳ ಸಮಿತಿ ವಿಸರ್ಜನೆ ಸರಿಯಾದ ಕ್ರಮವಲ್ಲ. ಅದನ್ನು ಮುಂದುವರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

Published by:Sumanth SN
First published: