ಡಾ. ಕಸ್ತೂರಿ ರಂಗನ್​​ ವರದಿ ಜಾರಿ ಮಾಡುವ ಮುನ್ನ ಪುನರ್​​ ಪರಿಶೀಲಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ

ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ಜತೆಗೆ ಪ್ರಗತಿಪರ ಸಂಘಟನೆಗಳು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿವೆ. ಹಾಗಾಗಿ ಹಿಂದಿನ ಕಾಂಗ್ರೆಸ್​ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿತ್ತು. ಸಮಿತಿಯ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮೂರನೇ ಅಧಿಸೂಚನೆಗೆ ಆಕ್ಷೇಪಣೆಯೂ ಸಲ್ಲಿಸಿತ್ತು.

news18-kannada
Updated:December 4, 2019, 10:08 PM IST
ಡಾ. ಕಸ್ತೂರಿ ರಂಗನ್​​ ವರದಿ ಜಾರಿ ಮಾಡುವ ಮುನ್ನ ಪುನರ್​​ ಪರಿಶೀಲಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ
ಸಿಎಂ ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು(ಡಿ.04): ಪಶ್ಚಿಮಘಟ್ಟ ಜೀವಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನ ಉಂಟಾಗಲಿದೆ. ಹಾಗಾಗಿ ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಡಾ. ಕಸ್ತೂರಿ ರಂಗನ್‌ ಸಮಿತಿ ನೀಡಿದ ಶಿಫಾರಸ್ಸಿಗೆ ರಾಜ್ಯ ಸರ್ಕಾರದ ಸಮ್ಮತಿ ಇಲ್ಲ ಎಂಬುದನ್ನು ಸಿಎಂ ಬಿಎಸ್​​ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಪ್ರಕಾಶ್​​ ಜಾವಡೇಕರ್​​ಗೆ ಪತ್ರ ಬರೆದಿರುವ ಸಿಎಂ ಬಿ.ಎಸ್​​ ಯಡಿಯೂರಪ್ಪ ಹೀಗೆ ಪ್ರಸ್ತಾಪ ಮಾಡಿದ್ದಾರೆ.

ಕೇಂದ್ರ ಸರ್ಕಾರವೂ ಡಾ. ಕಸ್ತೂರಿ ರಂಗನ್​​ ವರದಿ ಅನುಷ್ಠಾನಕ್ಕೆ ಮುನ್ನ ಸಂಬಂಧಪಟ್ಟ ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಬೇಕು. ವರದಿ ಜಾರಿ ಸಂಬಂಧ ವಿವಿಧ ರಾಜ್ಯಗಳ ಪರಿಣಿತರ ಸಮಿತಿಗಳು ಜನಾಭಿಪ್ರಾಯ ಆಧರಿಸಿ ಸಲ್ಲಿಸಿರುವ ವರದಿ ಬಗ್ಗೆ ಚರ್ಚೆ ನಡೆಸಬೇಕು. ಅಲ್ಲಿಯವರೆಗೂ ಕಸ್ತೂರಿ ರಂಗನ್​​ ವರದಿ ಅನುಷ್ಠಾನಕ್ಕೆ ನಮ್ಮ ಸಹಮತ ಇಲ್ಲ ಎಂದು ಪ್ರಕಾಶ್​​ ಜಾವಡೇಕರ್​​ಗೆ ಬರೆದ ಪತ್ರದಲ್ಲಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಉಲ್ಲೇಖ ಮಾಡಿದ್ದಾರೆ.

ಈಗಾಗಲೇ 56 ಸಾವಿರ ಕಿ.ಮೀ ಪ್ರದೇಶವನ್ನು ಕಾಯ್ದಿರಿಸಿದ ಅರಣ್ಯ ಎಂದು ಘೋಷಿಸಲು ವರದಿ ನೀಡಲಾಗಿದೆ. ಕರ್ನಾಟಕ ಒಂದರಲ್ಲೇ 1/3 ರಷ್ಟು ಪ್ರದೇಶ ಒಳಗೊಂಡಿದೆ. ಈ ಭಾಗದಲ್ಲಿ ಜನಜೀವನ, ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದ ಜನಜೀವನಕ್ಕೆ ತೊಂದರೆ ಆಗಲಿದ್ದು, ಸೂಕ್ತ ಪರಿಹಾರ ನೀಡಬೇಕಾಗುತ್ತದೆ ಎಂದು ವರದಿ ಹೇಳಿದೆ. ಆದರೂ ಯಾವುದೆ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯ ಸರ್ಕಾರವೇ 20 ಸಾವಿರ ಎಸ್​​ಕ್ಯೂ ಅರಣ್ಯ ಪ್ರದೇಶವನ್ನು ಕಾಯ್ದಿರಿಸಿದ ಅರಣ್ಯ ಪ್ರದೇಶವಾಗಿ ಘೋಷಿಸಿಲು ಕಮಿಟಿಗೆ ವರದಿ ನೀಡಿದೆ. ಜೊತೆಗೆ ಅದರಲ್ಲಿ 16 ಸಾವಿರ ಎಸ್​​ಕ್ಯೂ ಪ್ರದೇಶದಲ್ಲಿ ಯಾವುದೇ ಸಾಮಾಜಿಕ ಚಟುವಟಿಕೆ ನಡೆಯುತ್ತಿಲ್ಲ. ಹೀಗಿರುವಾಗ ಮತ್ತೆ ಈಗ ಇನ್ನೂ ಕಟ್ಟಳತೆ ಮಾಡುವ ಅವಶ್ಯಕತೆ ಇಲ್ಲ. ಕಾಯ್ದಿರಿಸದ ಅರಣ್ಯ ಪ್ರದೇಶ ಎಂದು ಘೋಷಿಸಲು ಮುಂದಾಗಿದ್ದು ನಿಜ. ಆದರೆ, ರಾಜ್ಯಕ್ಕೆ ಯಾವುದೇ ಪರಿಹಾರ ನೀಡುವ ಬಗ್ಗೆ ಉಲ್ಲೇಖವಾಗಿಲ್ಲ. ಹೀಗಾಗಿ ಮುಂದಿನ ತೀರ್ಮಾನ ಮಾಡುವ ಮೊದಲು ಮತ್ತೊಮ್ಮೆ ಈ ಬಗ್ಗೆ ಸವಿವರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಮನವಿ ಮಾಡಿದ್ಧಾರೆ.

ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ಜತೆಗೆ ಪ್ರಗತಿಪರ ಸಂಘಟನೆಗಳು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿವೆ. ಹಾಗಾಗಿ ಹಿಂದಿನ ಕಾಂಗ್ರೆಸ್​ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿತ್ತು. ಸಮಿತಿಯ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮೂರನೇ ಅಧಿಸೂಚನೆಗೆ ಆಕ್ಷೇಪಣೆಯೂ ಸಲ್ಲಿಸಿತ್ತು.

ಏನಿದು ಕಸ್ತೂರಿ ರಂಗನ್‌ ವರದಿ?: ಸುಪ್ರೀಂಕೋರ್ಟ್‌ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿತ್ತು. ಈ ಹಿನ್ನೆಲೆಯಲ್ಲಿ 2010ರಲ್ಲಿ ಮಾಧವನ್‌ ಗಾಡ್ಗೀಳ್‌ ಸಮಿತಿ ರಚನೆ ಮಾಡಬೇಕಾಯ್ತು. ಈ ಸಮಿತಿ ನೀಡಿದ ವರದಿ ಕೇಂದ್ರ ಸರ್ಕಾರಕ್ಕೆ ಇಷ್ಟವಾಗದ ಕಾರಣ, ಅಂದಿನ ಮಂತ್ರಿ ನಟರಾಜ್‌ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಈ ಸಮಿತಿಯೂ 173 ಪುಟಗಳ ವರದಿಯೊಂದಿಗೆ 407 ಪುಟಗಳ ವಿಸ್ತೃತ ವರದಿ ಒಟ್ಟು 580 ಪುಟಗಳ ವರದಿ ಕೇಂದ್ರ ಸರ್ಕಾರಕ್ಕೆ ನೀಡಿತ್ತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲು ವೈಕ್ಞಾನಿಕ, ವಸ್ತುನಿಷ್ಠ, ಕಾರ್ಯಸಾಧ್ಯವಾದ ಮಾರ್ಗ ವಿಕಾಸಪಡಿಸಲು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಾಯ ಪಡೆದು ಜೈವಿಕ ಶ್ರೀಮಂತಿಕೆ, ಛಿದ್ರೀಕರಣ, ಜನಸಾಂದ್ರತೆಮ, ಸಂರಕ್ಷಿತ ಪ್ರದೇಶ ದತ್ತಾಂಶವನ್ನು ವರದಿಯಲ್ಲಿ ಉಲ್ಲೇಖಿಸಿತು.

ವರದಿ ಅನುಷ್ಠಾನವಾದರೆ ಸಮಸ್ಯೆಯೇನು?:  ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹೊಂದಿಕೊಂಡಂತೆ ವರದಿಯ ಆಧಾರದಲ್ಲಿ ಅನೇಕ ನಿಬಂಧನೆಗಳು ಕಂಡುಬರುತ್ತದೆ. ಇಲ್ಲಿ ಯಾವುದೇ ದೂರವಾಣಿ ಸಂಪರ್ಕ ಇಲ್ಲ, ಜೊತೆಗೆ ಮೊಬೈಲ್‌ ಸಿಗ್ನಲ್ ಇರುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಹಕ್ಕುಪತ್ರ ಸಿಗುವುದಿಲ್ಲ. ಸರ್ಕಾರದ ಮನೆ, ಪರಿಹಾರ, ಧನಸಹಾಯ ಸಿಗುವುದಿಲ್ಲ, ಡಾಂಬರು ರಸ್ತೆ ಮಾಡುವಂತಿಲ್ಲ, ಕೃಷಿ ಚಟುವಟಿಕೆಗಳಿಗೆ ಕೀಟನಾಶಕಗಳನ್ನು ಬಳಸುವಂತಿಲ್ಲ ಮೊದಲಾದ ನಿಬಂಧನೆಗಳು ಬರಲಿವೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ