ಕರ್ನಾಟಕದ ನೀರಾವರಿ ಯೋಜನೆಗಳಿಂದ ಗೋವಾಕ್ಕೆ ಹಾನಿ ಇಲ್ಲ: ನ್ಯಾಯಾಧಿಕರಣದ ಮುಂದೆ ಕರ್ನಾಟಕದ ವಾದ


Updated:February 14, 2018, 10:17 AM IST
ಕರ್ನಾಟಕದ ನೀರಾವರಿ ಯೋಜನೆಗಳಿಂದ ಗೋವಾಕ್ಕೆ ಹಾನಿ ಇಲ್ಲ: ನ್ಯಾಯಾಧಿಕರಣದ ಮುಂದೆ ಕರ್ನಾಟಕದ ವಾದ
ಮಹದಾಯಿ ನದಿ

Updated: February 14, 2018, 10:17 AM IST
- ಧರಣೀಶ್ ಬೂಕನಕೆರೆ, ನ್ಯೂಸ್ 18 ಕನ್ನಡ

ನವದೆಹಲಿ(ಫೆ.13): ಮಹದಾಯಿ ನದಿ ನೀರು ವಿವಾದಕ್ಕೆ  ಸಂಬಂಧಿಸಿದಂತೆ ನ್ಯಾಯಾಧಿಕರಣದ ಮುಂದೆ ಇಂದಿನಿಂದ ಕರ್ನಾಟಕ ವಾದ ಆರಂಭವಾಗಿದೆ.  ಮುಂದಿನ 3 ದಿನಗಳ ಕಾಲ ಕರ್ನಾಟಕ ತನ್ನ ವಾದ ಮಂಡಿಸಲಿದೆ. ಮೊದಲ ದಿನ‌ ವಾದ ಮಾಡಿದ ವಕೀಲ ಮೋಹನ್ ಕಾತರಕಿ, ನೀರಿನ ಲಭ್ಯತೆ ಬಗ್ಗೆ ಗೋವಾ ಸರ್ಕಾರ ನೀಡಿದ್ದ ಮಾಹಿತಿಯಲ್ಲೇ ಗೊಂದಲವಿದೆ. ಗೋವಾ ವಾದದ ಪ್ರಕಾರವೇ ಬೇಡಿಕೆಗಿಂತ ನೀರಿನ ಲಭ್ಯತೆ ಹೆಚ್ಚಾಗಿದೆ. ಬೇಡಿಕೆಗಿಂತ ಹೆಚ್ಚು ನೀರು ಲಭ್ಯವಿದೆ ಎನ್ನುವುದಾದರೆ ವಿವಾದವೇ ಇಲ್ಲ. ನ್ಯಾಯಾಧೀಕರಣ ಮೊದಲು ಈ ವಿಷಯ ಬಗೆಹರಿಸಲಿ ಎಂದು ವಾದ ಮಂಡಿಸಿದ್ದಾರೆ.

ಗೋವಾ ಸರ್ಕಾರ, ಕರ್ನಾಟಕದ ಯೋಜನೆಗಳ ಬಗ್ಗೆ  ಪ್ರಶ್ನಿಸುತ್ತಿದೆ. ಕರ್ನಾಟಕದ ಯೋಜನೆಗಳು ಗೋವಾಗೆ ಹಾನಿಕಾರಕವಲ್ಲ. ನ್ಯಾಯಾಧೀಕರಣ ಈ ವಿಷಯವನ್ನೂ ಗಮನಹರಿಸಬೇಕು ಎಂದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ನದಿ ವಿವಾದದ ಉಲ್ಲೇಖವನ್ನ ಮಾಡಿದ ಕಾತರಕಿ, ಅಲ್ಲಿನ‌ ನದಿ ನೀರು ಹಂಚಿಕೆ ಬಗ್ಗೆ ನ್ಯಾಯಾಧೀಕರಣಕ್ಕೆ ವಿವರಿಸಿದ್ದಾರೆ.

ಇದಕ್ಕೂ ಮುನ್ನ, ವಿವಾದಿತ ಪ್ರದೇಶದಲ್ಲಿ ಕಾಮಗಾರಿ ನಡೆಸುತ್ತಿದೆ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಗೋವಾ ಸರ್ಕಾರ ಹಿಂಪಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ಮೊದಲೇ ನಾವು ಹೇಳಿದ್ವಿ. ಈಗ ಅವರಿಗೆ ಗೊತ್ತಾಗಿ ಅವರಾಗಿಯೇ ವಾಪಸ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.

 
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ