ಪ್ರೇಮ ವಿವಾಹ: ಕರ್ನಾಟಕ, ತೆಲಂಗಾಣ ಸರ್ಕಾರದಿಂದ ನಡೆಯಿತು ಜೋಡಿಯ ಮದುವೆ!

Ganesh Nachikethu
Updated:December 2, 2018, 7:16 PM IST
ಪ್ರೇಮ ವಿವಾಹ: ಕರ್ನಾಟಕ, ತೆಲಂಗಾಣ ಸರ್ಕಾರದಿಂದ ನಡೆಯಿತು ಜೋಡಿಯ ಮದುವೆ!
ಪ್ರಾತಿನಿಧಿಕ ಚಿತ್ರ
  • Share this:
ಬಸವರಾಜ ಕರುಗಲ್

ಕೊಪ್ಪಳ(ಡಿ.01): ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ. ಹಾಗೆಯೇ ಎರಡು ಮನಸ್ಸುಗಳ ಮುದ್ದಾದ ಜೋಡಿಯೊಂದು ಪ್ರೀತಿಯ ಅನುಬಂಧಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇನ್ನೇನು ಈ ಜೋಡಿಯ ಮದುವೆಯಾಗಬೇಕು ಎನ್ನುವಷ್ಟರಲ್ಲಿಯೇ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರೇಮಕ್ಕೆ ಮನೆಯವರು ಅಡ್ಡಿಯಾಗಲಿದ್ದಾರೆ ಎಂದು ಅರಿತ ಪ್ರೇಮಿಗಳು ಕರ್ನಾಟಕ ಪೊಲೀಸರ ಸಮ್ಮುಖದಲ್ಲಿಯೇ ಹಸೆಮಣೆ ಏರಿದ್ದಾರೆ.

ಪೊಲೀಸರು ಸಮ್ಮುಖದಲ್ಲಿಯೇ ಮದುವೆಯಾಗುತ್ತಿರುವ ಪ್ರೇಮಿಗಳು. ನಮ್ಮ ಪ್ರೀತಿಗೆ ಜಯಸಿಕ್ಕಿದೆ ಎಂದು ನಗುನಗುತ್ತಾ ಇರುವ ನವಜೋಡಿಗಳು. ಇವರ ಮುಂದೆಯೇ ಜಗಳವಾಡುತ್ತಿರುವ ವಧು- ವರರ ಕುಟುಂಬ ಸದಸ್ಯರು. ಇದೆಲ್ಲಾ ಕಂಡು ಬಂದಿದ್ದು ಕೊಪ್ಪಳದ ಗಂಗಾವತಿಯಲ್ಲಿ. ಅಂದ ಹಾಗೇ ಪ್ರೇಮಿಗಳ ಮದುವೆಗೆ ಯುವತಿಯ ಕುಟುಂಬಸ್ಥರು ಒಪ್ಪದ ಕಾರಣ, ಈ ಜೋಡಿ ರಾಜ್ಯಪಾಲರ ಮೊರೆ ಹೋಗಿದ್ದರು ಎನ್ನುವ ವದಂತಿ ಹರಿದಾಡುತ್ತಿತ್ತು.

ಆದರೆ, ವದಂತಿ ಬೆನ್ನಲ್ಲೇ ಮನೆಯ ವಿರೋಧದ ನಡೆವೆಯೂ ಸಂದ್ರದಾಯವಾಗಿ ತಮ್ಮಿಚ್ಚೆಯ ಹಾಗೇ ಮದುವೆಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ. ಈ ಪ್ರೇಮಿಗಳ ಮದುವೆಗೆ ಪೊಲೀಸರೇ ಸಾಕ್ಷಿಯಾದರು. ಜಿಲ್ಲೆಯ ಸಿದ್ದಾಪುರ ಗ್ರಾಮದ ನಿರಂಜನಿ ಎನ್ನುವ ಯುವತಿಯನ್ನು ಹೈದ್ರಾಬಾದ್ ಮೂಲದ ವೆಂಕಟ್ ಭಾರ್ಗವ್ ಎಂಬ ಹುಡುಗ ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಯುವತಿಯ ಮನೆಯವರು ಒಪ್ಪದ ಕಾರಣ ಪ್ರೇಮಿಗಳಿಬ್ಬರು ಮಹಿಳಾ ಸಂಘಟನೆಯೊಂದರ ಮೊರೆ ಹೋದರು.

ಇದನ್ನೂ ಓದಿ: ತೀವ್ರಗೊಂಡ ರಾಮಮಂದಿರ ಹೋರಾಟ: ಬೆಂಗಳೂರಿನಲ್ಲಿ ಜನಾಗ್ರಹ ಸಮಾವೇಶ, ಕೇಂದ್ರದ ವಿರುದ್ಧ ವಿಎಚ್​​ಪಿ ಆಕ್ರೋಶ!

ಮಹಿಳಾ ಸಂಘಟನೆಯವರು ಪ್ರಮಿಗಳ ಮದುವೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದರು.ಬಳಿಕ ಗಂಗಾವತಿ ಪೊಲೀಸರೇ ತಮ್ಮ ಸಮ್ಮುಖದಲ್ಲಿ ನವಜೋಡಿಗೆ ಮದವೆ ಮಾಡಿಸಿತು. ನಿರಂಜನಾ ಹಾಗೂ ವೆಂಕಟಭಾರ್ಗವ್ ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕರೆದೊಯ್ದಿದೆ.

ಸುಮಾರು ಎಂಟು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ನಿರಂಜನಾ ತಮ್ಮ ಮನೆಯವರ ಬಳಿ ಆಕೆಯ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾಳೆ. ಆದರೆ, ಕುಟುಂಬಸ್ಥರು ಇದಕ್ಕೆ ಒಪ್ಪದಿದ್ದಾಗ ನಿರಂಜನಾ ಹಾಗೂ ವೆಂಕಟ್ ಭಾರ್ಗವ್ ನಮಗೆ ರಕ್ಷಣೆ ಬೇಕೆಂದು ತೆಲಂಗಾಣ ಹಾಗೂ ಕರ್ನಾಟಕದ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.ಎರಡು ರಾಜ್ಯಗಳ ನಡುವಿನ ಗಂಭೀರ ಪ್ರಕರಣವಾದ ಕಾರಣ ತೆಲಂಗಾಣ ಮಹಿಳಾ ಆಯೋಗ ಪತ್ರವನ್ನು ಅಲ್ಲಿನ ರಾಜ್ಯದ ರಾಜ್ಯಪಾಲರಿಗೆ ರವಾನೆ ಮಾಡಿದೆ. ಇದನ್ನು ನೋಡಿದ ತೆಲಂಗಾಣ ರಾಜ್ಯಪಾಲ ನರಸಿಂಹನ್ ಅವರು, ರಾಜ್ಯದ ಪೊಲೀಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೊಪ್ಪಳ ಎಸ್ಪಿ ಅವರನ್ನು ಕೇಳಿದರೆ, ನಮಗೆ ಇದುವರೆಗೂ ಯಾವುದೇ ಪತ್ರ ತಲುಪಿಲ್ಲ. ನಾವು ಎಲ್ಲಾ ಪ್ರಕರಣಗಳಂತೆಯೇ ಪ್ರೇಮಿಗಳಿಗೆ ಅಡ್ಡಿಯಾಗಬಾರದೆಂದು ಪೊಲೀಸ್ ಬಂದೋಬಸ್ತ್ ನೀಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಎಸ್​ಪಿ ರೇಣುಕಾ ಸುಕುಮಾರ್ ಅವರು.

ಇದನ್ನೂ ಓದಿ: ಮೋದಿ ‘ಬುರೇ ದಿನ್​​’ ಗಯೇ, ರಾಹುಲ್​​ ಪ್ರಧಾನಿಯಾದಲ್ಲಿ ಬರಲಿದೆ ‘ಅಚ್ಚೇ ದಿನ್​​’: ಸಿಧು ನುಡಿ

ಕೊಪ್ಪಳ ಜಿಲ್ಲಾದ್ಯಂತ ಮಾತ್ರ ತೆಲಂಗಾಣ ರಾಜ್ಯಪಾಲರ ಸೂಚನೆಯಂತೆ ಪೊಲೀಸ್ ಭದ್ರತೆಯಲ್ಲಿ ಮದುವೆ ನಡೆಯುತ್ತಿದೆ ಎನ್ನಲಾಗಿದೆ. ಆದ್ರೆ, ಕೊಪ್ಪಳ ಎಸ್ಪಿಯವರು ಮಾತ್ರ ನಮಗೆ ಯಾವುದೇ ಪತ್ರ ಬಂದಿಲ್ಲ ಎನ್ನುತ್ತಿದ್ದಾರೆ. ಏನೇ ಆಗಲಿ ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ನಿಟ್ಟಿಸಿರು ಬಿಟ್ಟು ಮದುವೆಯಾಗಿದಂತೂ ಸತ್ಯ.

---------------
ಬಾಗಲಕೋಟೆಯ ಶೋಭಾಯಾತ್ರೆಯಲ್ಲಿ ಮೊಳಗಿದ ನಿಷೇಧಿತ ಹಾಡು
First published:December 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ