ಇಂಜಿನಿಯರ್​ ಆಯ್ತು, ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿದ ಸರ್ಕಾರ; ಸಹಿ ಹಾಕಲು ಡಿಜಿ ನಕಾರ!

ಬುಧವಾರ ಶಾಸಕಿ ಅಂಜಲಿ ನಿಂಬಾಲ್ಕರ್ ಅವರ ಪತಿ ಹೇಮಂತ್ ನಿಂಬಾಲ್ಕರ್ ಅವರನ್ನು ಎಸಿಬಿ ವಿಭಾಗದ ಐಜಿಪಿಯನ್ನಾಗಿ ಬಡ್ತಿ ನೀಡಿ ಅಚ್ಚರಿ ಮೂಡಿಸಿದ್ದ ಮೈತ್ರಿ ಸರ್ಕಾರ, ಇಂದು ಎಸಿಪಿ ಹಾಗೂ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿದೆ. ಆದರೆ, ಈ ಪಟ್ಟಿಗೆ ಸಹಿ ಹಾಕಲು ಡಿಜಿ ಹಾಗೂ ಐಜಿಪಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

MAshok Kumar | news18
Updated:July 11, 2019, 1:21 PM IST
ಇಂಜಿನಿಯರ್​ ಆಯ್ತು, ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿದ ಸರ್ಕಾರ; ಸಹಿ ಹಾಕಲು ಡಿಜಿ ನಕಾರ!
ಪ್ರಾತಿನಿಧಿಕ ಚಿತ್ರ.
  • News18
  • Last Updated: July 11, 2019, 1:21 PM IST
  • Share this:
ಬೆಂಗಳೂರು (ಜುಲೈ.11); ರಾಜ್ಯದ ಮೈತ್ರಿ ಸರ್ಕಾರ ಪ್ರಸ್ತುತ ಡೋಲಾಯಮಾನ ಸ್ಥಿತಿಯಲ್ಲಿದೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸರ್ಕಾರ ಬೀಳುವುದರ ಒಳಗಾಗಿ ಎಲ್ಲಾ ಪ್ರಮುಖ ವರ್ಗಾವಣೆಗಳನ್ನೂ ಮಾಡಿ ಮುಗಿಸಲು ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆಯೇ? ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಸರ್ಕಾರದ ಪ್ರಸ್ತುತ ಕಾರ್ಯವೈಖರಿ.

ಅಮೆರಿಕದಿಂದ ಹಿಂದಿರುಗುತ್ತಿದ್ದಂತೆ ವಿಧಾನಸೌಧಕ್ಕೆ ಧಾವಿಸಿದ ಸಿಎಂ ಕುಮಾರಸ್ವಾಮಿ ಅವಸರ ಅವರಸವಾಗಿ ಪ್ರಮುಖ ಕಡತಗಳ ವಿಲೇವಾರಿ ಮಾಡಿದ್ದರು. ಅಲ್ಲದೆ ಪಿಡಬ್ಲ್ಯೂಡಿ ಇಂಜಿಯನ್ಗಳ ವರ್ಗಾವಣೆ ಪಟ್ಟಿಗೆ ಸಹಿ ಹಾಕಿದ್ದರು. ಸರ್ಕಾರದ ಈ ನಡವಡಿಕೆ ಸಾಮಾನ್ಯವಾಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಕುಮಾರಸ್ವಾಮಿ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೆ, ಇದೀಗ ಇದರ ಬೆನ್ನಿಗೆ ಮೈತ್ರಿ ಸರ್ಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಮುಂದಾಗಿದೆ.

ಇದನ್ನೂ ಓದಿ : ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಅತೃಪ್ತರಿಗೆ ಪಾಠ ಕಲಿಸಬೇಕು; ದೋಸ್ತಿ ನಾಯಕರಿಂದ ಹೊಸ ರಣತಂತ್ರ!

ಬುಧವಾರ ಶಾಸಕಿ ಅಂಜಲಿ ನಿಂಬಾಲ್ಕರ್ ಅವರ ಪತಿ ಹೇಮಂತ್ ನಿಂಬಾಲ್ಕರ್ ಅವರನ್ನು ಎಸಿಬಿ ವಿಭಾಗದ ಐಜಿಪಿಯನ್ನಾಗಿ ಬಡ್ತಿ ನೀಡಿ ಅಚ್ಚರಿ ಮೂಡಿಸಿದ್ದ ಮೈತ್ರಿ ಸರ್ಕಾರ, ಇಂದು ಎಸಿಪಿ ಹಾಗೂ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಿದೆ. ಅಲ್ಲದೆ, ಈ ಪಟ್ಟಿಯನ್ನು ಗೃಹ ಸಚಿವರ ಎಂ.ಬಿ. ಪಾಟೀಲ್ ಆಪ್ತ ಸಹಾಯಕರ ಮೂಲಕ ಡಿಜಿ ಹಾಗೂ ಐಜಿಪಿ ಕಚೇರಿಗೆ ಕಳುಹಿಸಲಾಗಿದೆ.

ಆದರೆ, ಈ ವರ್ಗಾವಣೆ ಪಟ್ಟಿಗೆ ಸಹಿ ಹಾಕಲು ಡಿಜಿ ಹಾಗೂ ಐಜಿಪಿ ಇಬ್ಬರೂ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಡಿಜಿ, ಐಜಿಪಿ ಇಬ್ಬರಿಗೂ ಫೋನಾಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವರ್ಗಾವಣೆ ಪಟ್ಟಿಗೆ ಸಹಿ ಹಾಕುವಂತೆ ತಾಕೀತು ಮಾಡಿದ್ದಾರೆ. ಆದರೆ, ಸರ್ಕಾರ ಬೀಳುವ ಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆ ಸಹಿ ಹಾಕಲು ಇಬ್ಬರೂ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಎಲ್ಲಾ 78 ಶಾಸಕರೂ ನನ್ನ ಆಪ್ತರೇ; ಮಾಧ್ಯಮಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

First published: July 11, 2019, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading