ರಾಜ್ಯ ಕೃಷಿ ಬೆಲೆ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಕೆ; ಪ್ರಮುಖ ಶಿಫಾರಸ್ಸುಗಳು ಹೀಗಿವೆ?

ಕರ್ನಾಟಕ ಕೃಷಿ ಬೆಲೆ ಆಯೋಗದ ವತಿಯಿಂದ ಕೃಷಿ ಮತ್ತು ತೋಟಗಾರಿಕಾ ಬೆಲೆಗಳ 2019-20 ನೇ ಮತ್ತು 2020 -21 ನೇ ಸಾಲಿನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದರು. 

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದರು.

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದರು.

 • Share this:
  ಬೆಂಗಳೂರು; ಕರ್ನಾಟಕ ಕೃಷಿ ಬೆಲೆ ಆಯೋಗದ ವತಿಯಿಂದ ಕೃಷಿ ಮತ್ತು ತೋಟಗಾರಿಕಾ ಬೆಲೆಗಳ 2019-20 ನೇ ಮತ್ತು 2020 -21 ನೇ ಸಾಲಿನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ತೋಟಗಾರಿಕಾ ಸಚಿವ ನಾರಾಯಣ ಉಪಸ್ಥಿತರಿದ್ದರು.

  ಇದನ್ನು ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ಪತ್ನಿ ಕಾರು ಜಪ್ತಿ!

  ರಾಜ್ಯ ಕೃಷಿ ಬೆಲೆ ವರದಿಯ ಪ್ರಮುಖಾಂಶಗಳು

  • ಎನ್​ಡಿಆರ್​ಎಫ್​ ಅಡಿ ನೈಸರ್ಗಿಕ ವಿಕೋಪಗಳ ವೇಳೆ ಕೃಷಿ, ವಾಣಿಜ್ಯ, ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಹೆಚ್ಚಳಕ್ಕೆ ಶಿಫಾರಸು

  • ಕೃಷಿ ಮತ್ತು ವಾಣಿಜ್ಯ ಬೆಳೆಗಳಿಗೆ ಪ್ರತೀ ಹೆಕ್ಟೇರ್ ಗೆ 50 ಸಾವಿರ ಪರಿಹಾರ ಕೊಡಲು ಶಿಫಾರಸು

  • ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ 1 ಲಕ್ಷ ರೂ ಪರಿಹಾರ ಕೊಡುವಂತೆ ಶಿಫಾರಸು

  • 'ಮುಖ್ಯಮಂತ್ರಿ ಅನ್ನಪೂರ್ಣ' ಯೋಜನೆ ಜಾರಿಗೆ ಶಿಫಾರಸು

  • ಈ ಯೋಜನೆಯಿಂದ ರೈತರಿಗೆ ಬೆಂಬಲ ಬೆಲೆ ಯೋಜನೆಯ ಮೂಲಕ 12 ಸಾವಿರ ಕೋಟಿ ನೆರವು ಸಿಗಲಿದೆ

  • ಹೊಲಕ್ಕೊಂದು ಕೆರೆ ಯೋಜನೆ ಜಾರಿಗೆ ಶಿಫಾರಸು

  • ಪಡಿತರ ವ್ಯವಸ್ಥೆಗೆ ಬೆಂಬಲ ಬೆಲೆ ಯೋಜನೆಯಲ್ಲಿ ಆಹಾರ ಧಾನ್ಯಗಳನ್ನು‌ ಕೊಳ್ಳುವುದು

  • ಪಡಿತರ ಹಂಚಲು ರಾಗಿ, ಅಕ್ಕಿ ವಿತರಣೆಯಿಂದ 200 ಕೋಟಿ ರೂ ಆದಾಯ

  • ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳ‌ ಖರೀದಿಗೆ ಸಂಚಾರಿ ಖರೀದಿ ವ್ಯವಸ್ಥೆ

  • ಆವರ್ತ ನಿಧಿಗೆ 500 ಕೋಟಿ ರೂ. ಒದಗಿಸುವುದು

  • ಕೆಎಂಎಫ್ ಮಾದರಿಯಲ್ಲಿ ರಾಜ್ಯ ತೋಟಗಾರಿಕಾ ಮಾರಾಟ ಮಹಾಮಂಡಳ ಸ್ಥಾಪನೆ

  Published by:HR Ramesh
  First published: