Karnataka ULB Election Results: 58 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ULB elections, vote counting today: ಬೆಳಗಾವಿಯ 15 ನಗರಸಂಸ್ಥೆಗಳು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ 58 ನಗರ ಸಂಸ್ಥೆಗಳಿಗೆ ಸೋಮವಾರ ಚುನಾವಣೆ ಆಗಿತ್ತು. ಇಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ.

ಮತದಾನದ ಸಾಂದರ್ಭಿಕ ಚಿತ್ರ

ಮತದಾನದ ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು, ಡಿ. 30: ಸೋಮವಾರ 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಹಾಗೆಯೇ ವಿವಿಧ ನಗರ ಸಂಸ್ಥೆಗಳ 9 ವಾರ್ಡ್​ಗಳ ಉಪಚುನಾವಣೆ ಹಾಗೂ 57 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಕೆಲ ಗಂಟೆಗಳಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

    ಎಂಎಲ್​ಸಿ ಚುನಾವಣೆ (MLC Election) ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯೂ ಆಗಿದೆ. 5 ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 58 ನಗರ ಸಂಸ್ಥೆಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನವಾಗಿತ್ತು. ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದ್ದು ವರದಿಯಾಗಿದೆ.

    ಚುನಾವಣೆಯಾಗಿರುವ 58 ನಗರ ಸಂಸ್ಥೆಗಳಲ್ಲಿ ಬೆಳಗಾವಿಯಲ್ಲೇ ಅತಿ ಹೆಚ್ಚು. ಇಲ್ಲಿ ನಾಲ್ಕು ಪುರಸಭೆ ಮತ್ತು 11 ಪಟ್ಟಣ ಪಂಚಾಯಿತಿ ಸೇರಿ 15 ನಗರ ಸಂಸ್ಥೆಗಳಿಗೆ ಚುನಾವಣೆ ಆಗಿದೆ. ವಿಜಯಪುರದ ಐದು ಪಟ್ಟಣ ಪಂಚಾಯಿತಿಯೂ ಸೇರಿದೆ. ಬೆಳಗಾವಿಯಲ್ಲಿ ಎರಡು ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಸೋಲನುಭವಿಸಿದ್ದ ಬಿಜೆಪಿಗೆ ಈ ನಗರಸಂಸ್ಥೆ ಚುನಾವಣೆ ಪ್ರತಿಷ್ಠೆಯ ಪಣವಾಗಿದೆ.

















































































































































































































































































































































































    ಸಂಜಿಲ್ಲೆಸ್ಥಳೀಯ ಸಂಸ್ಥೆಒಟ್ಟು ವಾರ್ಡ್​ಗಳು
    1ಚಿಕ್ಕಮಗಳೂರುಚಿಕ್ಕಮಗಳೂರು ನಗರಸಭೆ35
    2ತುಮಕೂರುಶಿರಾ ನಗರಸಭೆ31
    3ಗದಗಗದಗ-ಬೆಟಗೇರಿ ನಗರಸಭೆ35
    4ವಿಜಯನಗರಹೊಸಪೇಟೆ ನಗರಸಭೆ35
    5ಬೆಂಗಳೂರು ನಗರಹೆಬ್ಬಗೋಡಿ ನಗರಸಭೆ31
    ಪುರಸಭೆಗಳು
    6ಬೆಂಗಳೂರು ನಗರಜಿಗಣಿ ಪುರಸಭೆ23
    7ಬೆಂಗಳೂರು ನಗರಚಂದಾಪುರ ಪುರಸಭೆ23
    8ಬೆಳಗಾವಿಅಥಣಿ ಪುರಸಭೆ27
    9ಧಾರವಾಡಅಣ್ಣಿಗೇರಿ ಪುರಸಭೆ23
    10ಹಾವೇರಿಬಂಕಾಪೂರ ಪುರಸಭೆ23
    11ರಾಮನಗರಬಿಡದಿ ಪುರಸಭೆ23
    12ದಾವಣಗೆರೆಮಲೆಬನ್ನೂರು ಪುರಸಭೆ23
    13ಉಡುಪಿಕಾಪು ಪುರಸಭೆ23
    14ಬೆಳಗಾವಿಹಾರೋಗೇರಿ ಪುರಸಭೆ23
    15ಬೆಳಗಾವಿಮುನವಳ್ಳಿ ಪುರಸಭೆ23
    16ಬೆಳಗಾವಿಅಗಾರಖುರ್ದು ಪುರಸಭೆ23
    17ಬೆಳಗಾವಿಮುಗಳಖೋಡ ಪುರಸಭೆ23
    18ಕೊಪ್ಪಳಕಾರಟಗಿ ಪುರಸಭೆ23
    19ಬಳ್ಳಾರಿಕರೆಕುಪ್ಪ ಪುರಸಭೆ23
    20ಬಳ್ಳಾರಿಕುರುಗೋಡು ಪುರಸಭೆ23
    21ವಿಜಯನಗರಹಗರಿಬೊಮ್ಮನಹಳ್ಳಿ ಪುರಸಭೆ23
    22ರಾಯಚೂರುಮಸ್ಕಿ ಪುರಸಭೆ23
    23ಯಾದಗಿರಿಕೆಂಭಾವಿ ಪುರಸಭೆ23
    24ಯಾದಗಿರಿಕೆಕ್ಕೇರಾ ಪುರಸಭೆ23
    ಪಟ್ಟಣ ಪಂಚಾಯಿತಿಗಳು
    25ಚಿತ್ರದುರ್ಗನಾಯಕನ ಹಟ್ಟಿ ಪ.ಪಂ.16
    26ದಕ್ಷಿಣಕನ್ನಡವಿಟ್ಲಾ ಪ.ಪಂ.18
    27ದಕ್ಷಿಣ ಕನ್ನಡಕೋಟೆಕಾರು ಪ.ಪಂ.17
    28ಬೆಳಗಾವಿಎಂ.ಕೆ. ಹುಬ್ಬಳ್ಳಿ ಪ.ಪಂ.14
    29ಬೆಳಗಾವಿಕಂಕನವಾಡಿ ಪ.ಪಂ.17
    30ಬೆಳಗಾವಿನಾಗನೂರ ಪ.ಪಂ.17
    31ಬೆಳಗಾವಿಯಕ್ಸಾಂಬ ಪ.ಪಂ.17
    32ಬೆಳಗಾವಿಚೆನ್ನಮ್ಮನ ಕಿತ್ತೂರು ಪ.ಪಂ.18
    33ಬೆಳಗಾವಿಅರಭಾವಿ ಪ.ಪಂ.16
    34ಬೆಳಗಾವಿಐನಾಪುರ ಪ.ಪಂ.19
    35ಬೆಳಗಾವಿಶೇಡಬಾಳ ಪ.ಪಂ.16
    36ಬೆಳಗಾವಿಚಿಂಚಿಲಿ ಪ.ಪಂ.19
    37ಬೆಳಗಾವಿಬೋರಗಾಂವ ಪ.ಪಂ.17
    38ಬೆಳಗಾವಿಕಲ್ಲೋಳಿ ಪ.ಪಂ.16
    39ಬೆಳಗಾವಿಕೂಕನೂರ ಪ.ಪಂ.19
    40ವಿಜಯಪುರನಲತವಾಡ ಪ.ಪಂ.14
    41ವಿಜಯಪುರನಿಡಗುಂದಿ ಪ.ಪಂ.16
    42ವಿಜಯಪುರದೇವರಹಿಪ್ಪರಗಿ ಪ.ಪಂ.17
    43ವಿಜಯಪುರಆಲಮೇಲ ಪ.ಪಂ.19
    44ವಿಜಯಪುರಮನಗೂಳಿ ಪ.ಪಂ.16
    45ವಿಜಯಪುರಕೋಲ್ಹಾರ ಪ.ಪಂ.17
    46ಬಾಗಲಕೋಟೆಕಮತಗಿ ಪ.ಪಂ.16
    47ಬಾಗಲಕೋಟೆಬೆಳಗಲಿ ಪ.ಪಂ.18
    48ಬಾಗಲಕೋಟೆಅಮೀನಗಡ ಪ.ಪಂ.16
    49ಹಾವೇರಿಗುತ್ತಲ ಪ.ಪಂ.18
    50ಉತ್ತರಕನ್ನಡಜಾಲಿ ಪ.ಪಂ.18
    51ಕೊಪ್ಪಳತಾವರೆಗೇರಾ ಪ.ಪಂ.18
    52ಕೊಪ್ಪಳಭಾಗ್ಯನಗರ ಪ.ಪಂ.19
    53ಕೊಪ್ಪಳಕನಕಗಿರಿ ಪ.ಪಂ.17
    54ವಿಜಯನಗರಮರಿಯಮ್ಮನಹಳ್ಳಿ ಪ.ಪಂ.18
    55ರಾಯಚೂರುಕವಿತಾಳ ಪ.ಪಂ.16
    56ರಾಯಚೂರುತುರ್ವಿಹಾಳ ಪ.ಪಂ.14
    57ರಾಯಚೂರುಬಳಗಾನೂರು ಪ.ಪಂ.12
    58ರಾಯಚೂರುಸಿರವಾರ ಪ.ಪಂ.20



    ಇದನ್ನೂ ಓದಿ: Karnataka ULB Elections: ಕೆಲ ಜಿಲ್ಲೆಗಳಲ್ಲಿ ಕೈ ಕೊಟ್ಟ ಮತಯಂತ್ರ: ಡೊಳ್ಳು ಮೇಳದೊಂದಿಗೆ ಮತಗಟ್ಟೆಗೆ ಆಗಮಿಸಿ ಗಮನ ಸೆಳೆದ ಅಭ್ಯರ್ಥಿ!

    ಉಪಚುನಾವಣೆ ನಡೆದಿರುವುದು:

    * ಚಾಮರಾಜನಗರ ನಗರಸಭೆಯ 6ನೇ ವಾರ್ಡ್
    * ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯ 21ನೇ ವಾರ್ಡ್
    * ಉತ್ತರಕನ್ನಡ ಜಿಲ್ಲೆ ದಾಂಡೇಲಿ ನಗರಸಭೆಯ 18ನೇ ವಾರ್ಡ್
    * ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಯ 10ನೇ ವಾರ್ಡ್
    * ಬೆಳಗಾವಿ ಜಿ್ಲಲೆ ಮೂಡಲಗಿ ಪುರಸಭೆಯ 9ನೇ ವಾರ್ಡ್
    * ವಿಜಯಪುರ ಜಿಲ್ಲೆ ಚಡಚಣ ಪ.ಪಂ.ನ 4ನೇ ವಾರ್ಡ್
    * ಕಲಬುರ್ಗಿ ಜಿಲ್ಲೆ ಸೇಡಂ ಪುರಸಭೆಯ 13ನೇ ವಾರ್ಡ್
    * ಹಾವೇರಿ ಜಿಲ್ಲೆ ಹಾನಗಲ್ ಪುರಸಭೆಯ 19ನೇ ವಾರ್ಡ್
    * ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರಸಭೆಯ 9ನೇ ವಾರ್ಡ್.
    Published by:Vijayasarthy SN
    First published: