2nd PUC Supplementary Exam 2020: ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ

Karnataka 2nd PUC Supplementary Exam 2020 Time Table: ಕೋವಿಡ್ 19 ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನುಸಾರ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್​ ಇಡುವುದು ಕಡ್ಡಾಯವಾಗಿದೆ. ಸಾಮಾಜಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಕೂಡ ಕಡ್ಡಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ದೇಶದ ಬಹುತೇಕ ಕಾರ್ಯಗಳು ಸ್ಥಗಿತಗೊಂಡಿವೆ. ಸಿನಿಮಾ ಥಿಯೇಟರ್​ಗಳು ಓಪನ್​ ಆಗದೆ ಸುಮಾರು 5 ತಿಂಗಳು ಕಳೆದಿದೆ. ಈ ಮಧ್ಯೆ, ಪ್ರಮುಖ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು, ಎಸ್​​ಎಸ್​ಎಲ್​ಸಿಯ ಎಲ್ಲಾ ಪರೀಕ್ಷೆಗಳು ತಡವಾಗಿ ನಡೆದರೆ ದ್ವಿತೀಯ ಪಿಯುಸಿಯ ಇಂಗ್ಲಿಷ್​ ಪರೀಕ್ಷೆ ಮಾತ್ರ ವಿಳಂಬವಾಗಿತ್ತು. ಹೀಗಾಗಿ, ಫಲಿತಾಂಶ ಕೂಡ ತಡವಾಗಿತ್ತು. ಈಗ ದ್ವಿತೀಯ  ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಸೆ. 19ರವರೆಗೆ ನಡೆಯಲಿರುವ ಪರೀಕ್ಷೆ ನಡೆಯಲಿದೆ.

    ಬೆಳಿಗ್ಗೆ 10:15 ರಿಂದ 1:30ರವರೆಗೆ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 2,12, 652 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ 1,29,975 ಬಾಲಕರು ಹಾಗೂ 82,677 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.

    ಕೋವಿಡ್ 19 ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನುಸಾರ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್​ ಇಡುವುದು ಕಡ್ಡಾಯವಾಗಿದೆ. ಸಾಮಾಜಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಕೂಡ ಕಡ್ಡಾಯವಾಗಿದೆ.

    ಇದನ್ನೂ ಓದಿ: LPG Cylinder Price: ಬೆಂಗಳೂರು ಸೇರಿ ವಿವಿಧ ನಗರಗಳ ಎಲ್​ಪಿಜಿ ದರ ಇಲ್ಲಿದೆ

    ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ:

    • ಇಂದು ಉರ್ದು, ಸಂಸ್ಕೃತ ಪರೀಕ್ಷೆ ನಡೆಯುತ್ತಿದೆ.

    • ಸೆ. 8 ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ

    • ಸೆ. 9 ತೃತೀಯ ಭಾಷೆ ಹಿಂದಿ, ಸೆ. 10 ಇಂಗ್ಲೀಷ್

    • ಸೆ. 11 ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

    • ಸೆ. 12 ಅರ್ಥ ಶಾಸ್ತ್ರ, ಭೌತಶಾಸ್ತ್ರ

    • ಸೆ. 14 ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ

    • ಸೆ. 15 ಕನ್ನಡ, ಸೆ. 16 ರಾಜ್ಯ ಶಾಸ್ತ್ರ ಮತ್ತು ಬೇಸಿಕ್​ ಗಣಿತಶಾಸ್ತ್ರ

    • ಸೆ.18 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ

    • ಸೆ. 19 ಭೂಗೋಳ ಶಾಸ್ತ್ರ ಮತ್ತು ಮನಶಾಸ್ತ್ರ

    Published by:Rajesh Duggumane
    First published: