2nd PUC Result 2022: ದ್ವಿತೀಯ ಪಿಯುಸಿ ಫಲಿತಾಂಶ; ಹೀಗೆ ಮೆಸೇಜ್ ಬಂದರೆ ನಂಬಬೇಡಿ
ಕೆಲವೆಡೆ ಇಂದೇ ದ್ವಿತೀಯು ಪಿಯುಸಿ ಫಲಿತಾಂಶ ಬಿಡುಗಡೆಯಾಗುತ್ತೆ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಅದೆಲ್ಲ ಸುಳ್ಳು ಮಾಹಿತಿ ಎಂದು ಸ್ವತಃ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಚಿತಪಡಿಸಿದ್ದಾರೆ.
ಬೆಂಗಳೂರು: ನಾಳೆ (ಜೂನ್ 16) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತೆ ಅಂತ ನಿಮಗೂ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಬಂತಾ? ನಿಮ್ಮ ಕಾಲೇಜಿನ-ಕ್ಲಾಸಿನ ಗ್ರೂಪ್ಗಳಲ್ಲೂ ಈ ಮೆಸೇಜ್ ಹರಿದಾಡುತ್ತಿದೆಯಾ? ನೀವು ಆ ಮೆಸೇಜ್ನ್ನು ನಂಬಬೇಡಿ. ಏಕೆಂದರೆ ನಾಳೆ ಅಂದರೆ ಜೂನ್ 16ರಂದೇ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Results) ಪ್ರಕಟವಾಗಲಿದೆ ಎಂದು ಸುಳ್ಳು ಸುದ್ದಿಯನ್ನು (Fake Alert) ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಈಕುರಿತು ಸ್ವತಃ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಸ್ಪಷ್ಟನೆ ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ನಾಳೆಯೇ ದ್ವಿತೀಯು ಪಿಯುಸಿ ಫಲಿತಾಂಶ ಬಿಡುಗಡೆ ಆಗಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಕೆಲವೆಡೆ ಇಂದೇ ದ್ವಿತೀಯು ಪಿಯುಸಿ ಫಲಿತಾಂಶ ಬಿಡುಗಡೆಯಾಗುತ್ತೆ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಅದೆಲ್ಲ ಸುಳ್ಳು ಮಾಹಿತಿ ಎಂದು ಸ್ವತಃ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಚಿತಪಡಿಸಿದ್ದಾರೆ.
ನಾನೇ ಸ್ವತಃ ಮಾಹಿತಿ ನೀಡುವೆ ದ್ವಿತೀಯು ಪಿಯುಸಿ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ. ಫಲಿತಾಂಶದ ದಿನ ನಾನೇ ಮಾಧ್ಯಮಗಳ ಮೂಲಕ ಹೇಳುತ್ತೇನೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಯಾರೂ ಸಹ ಕಿಡಗೇಡಿಗಳು ಹರಿಬಿಟ್ಟಿರುವಂತೆ ಜೂನ್ 15- ಜೂನ್ 16ರಂದೇ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಆಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ಶಿಕ್ಷಣ ಸಚಿವ ಹೀಗೆ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಗಳಿಗೆ ತಡೆ ಹಾಕಿದ್ದಾರೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಈಮೂಲಕ ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ: ಅಂಕಿ ಅಂಶದ ಮಾಹಿತಿ ಇಲ್ಲಿದೆ ಏಪ್ರಿಲ್ 2022ರಿಂದ ಮೇ 18 ದ್ವಿತೀಯ ಪಿಯುಸಿ ಪರೀಕ್ಷೆ ಕರ್ನಾಟಕ ರಾಜ್ಯದಾದ್ಯಂತ ನಡೆದಿತ್ತು. ಒಟ್ಟು 6,84,255 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ -3,46,936 ವಿದ್ಯಾರ್ಥಿಗಳು, 3,37,319 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ರೆಗ್ಯುಲರ್ ವಿದ್ಯಾರ್ಥಿಗಳು 6,00,519, ಪುನರಾವರ್ತಿತ ವಿದ್ಯಾರ್ಥಿಗಳು 61,808, ಖಾಸಗಿ ವಿದ್ಯಾರ್ಥಿಗಳು 21,928 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
2022ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ದಿನಾಂಕವನ್ನು ಘೋಷಿಸಲಾಗಿಲ್ಲ. ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುವ ಒಂದು ದಿನದ ಮೊದಲು ಸಾಮಾನ್ಯವಾಗಿ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳಿಗೆ ತಮ್ಮ ಫಲಿತಾಂಶಗಳನ್ನು ಆನ್ಲೈನ್ನಲ್ಲಿ ಪ್ರವೇಶಿಸಲು ಅವರ ರೋಲ್ ನಂಬರ್ ಮತ್ತು ಇತರ ಪ್ರಮುಖ ವಿವರಗಳ ಅಗತ್ಯವಿದೆ. ಅತ್ಯಂತ ಸುಲಭವಾಗಿ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಬಿಡುಗಡೆಗೊಂಡ ನಂತರ ವೀಕ್ಷಿಸಬಹುದಾಗಿದೆ.
ಈ ಬಾರಿ ಎಲ್ಲಿ ಫಲಿತಾಂಶ ವೀಕ್ಷಿಸಬಹುದು? 2022 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆಯಾದ ನಂತರ ಲಭ್ಯವಿರಬಹುದಾದ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ
ಕೊವಿಡ್ ಸಮಸ್ಯೆ ತಂದಿತ್ತು 2020 ರಲ್ಲಿ ಕೋವಿಡ್-19 ಕಾರಣದಿಂದಾಗಿ 2ನೇ ಪಿಯುಸಿ ಫಲಿತಾಂಶಗಳು ವಿಳಂಬವಾಗಿದ್ದವು. ಅದೇ ಕಾರಣಕ್ಕಾಗಿ 2021 ರಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. 2019 ರಲ್ಲಿ ಮಾರ್ಚ್ 1 ಮತ್ತು ಮಾರ್ಚ್ 18 ರ ನಡುವೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆನಂತರ ಏಪ್ರಿಲ್ 15 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ