Karnataka 2nd PUC Result: ಜುಲೈ 2ನೇ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಜುಲೈ 1ರಿಂದ ಆನ್​ಲೈನ್ ಕ್ಲಾಸ್​ ಆರಂಭ

Karnataka Second PUC Result 2021: ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್​

ಶಿಕ್ಷಣ ಸಚಿವ ಸುರೇಶ್ ಕುಮಾರ್​

  • Share this:
    ಬೆಂಗಳೂರು (ಜೂನ್ 28): ಈಗಾಗಲೇ ಎಸ್ಎಲ್ಎಲ್​ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ರಾಜ್ಯ ಶಿಕ್ಷಣ ಇಲಾಖೆ ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಘೋಷಿಸುವಂತೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ, ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ದ್ವಿತೀಯ ಪಿಯುಸಿ ರೀಪೀಟರ್ಸ್ ಪಾಸ್ ಮಾಡುವ ವಿಚಾರವಾಗಿ ಜುಲೈ 5 ರ ಒಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕೋರ್ಟ್​ ಹೇಳಿದೆ. ಈ ಬಗ್ಗೆ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವರ್ಷ ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಎಸ್​ಎಸ್​ಎಲ್​ಸಿ, ಪ್ರಥಮ ಪಿಯುಸಿ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸಿ, ವೃತ್ತಿಪರ ಕೋರ್ಸ್​ಗೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಮಾತ್ರ ಪರಿಗಣಿಸುವುದಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ  ಫಲಿತಾಂಶದ ದಿನಾಂಕ ಘೋಷಣೆಯಾಗಲಿದೆ.

    ಇದನ್ನೂ ಓದಿ: SSLC Exam Timetable: ಜುಲೈ 19, 22ರಂದು ಎಸ್ಎಸ್ಎಲ್​ಸಿ ಪರೀಕ್ಷೆ; ವೇಳಾಪಟ್ಟಿ, ನಿಯಮಗಳ ಮಾಹಿತಿ ಇಲ್ಲಿದೆ

    ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಯಿತು ಎಂಬ ರೀತಿಯಲ್ಲಿ ನಾವು ಮಾಡುವುದಿಲ್ಲ. ಪರೀಕ್ಷೆ ಬರೆದೇ ಬರೆಯುತ್ತೇನೆ ಎಂದವರಿಗೆ ಪರೀಕ್ಷೆ ಬರೆಯಲು ಅನಂತರ ಅವಕಾಶ ನೀಡಲಾಗುತ್ತದೆ. ಮಕ್ಕಳ ಕಲಿಕೆ ನಿರಂತರವಾಗಿರಬೇಕು. ಆಗಾಗ ಮೌಲ್ಯಾಂಕನ ಮಾಡ್ತೀವಿ. ಜುಲೈ 1ರಿಂದ ಚಂದನ ವಾಹಿನಿ ಮೂಲಕ ಎಲ್ಲ ತರಗತಿಗಳ ಪಾಠ ಶುರುವಾಗಲಿದೆ. ಮೊದಲು 8, 9, 10ನೇ ತರಗತಿಗಳನ್ನು ಆರಂಭಿಸಲಾಗುವುದು. ಚಂದನ ವಾಹಿನಿಯಲ್ಲಿ ಈ ಸಾರಿ ಇಂಗ್ಲಿಷ್ ಮಾಧ್ಯಮದಲ್ಲೂ ಪಾಠ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ದೀಕ್ಷಾ ಪೋರ್ಟಲ್ ಮೂಲಕವೂ ಎಲ್ಲ ಪಾಠಗಳ ವಿಡಿಯೋ, ಆಡಿಯೋ ಮಕ್ಕಳಿಗೆ ಸಿಗಲಿದೆ. 22000 ಇ- ಕಟೆಂಟ್ನಲ್ಲಿ ಪಾಠಗಳು ಲಭ್ಯವಿದೆ. ಮಕ್ಕಳವಾಣಿಯೂ ಲಭ್ಯವಿರಲಿದೆ. ಒಂದು ತಿಂಗಳು ಸೇತುಬಂಧ ಕ್ಲಾಸ್ ಗಳನ್ನ ಮಾಡಲಾಗುತ್ತದೆ. ಕಳೆದ ವರ್ಷದ ಪಾಠಗಳನ್ನು ಮಾಡಲಾಗುತ್ತದೆ. ವಾರ್ಷಿಕ ಪರೀಕ್ಷೆ ಬಿಟ್ಟು, ಆಗಾಗ ಮೌಲ್ಯಾಂಕನ ಮಾಡಲಾಗುತ್ತದೆ. ಜುಲೈ 1ರಿಂದ ಆನ್ ಲೈನ್ ಕ್ಲಾಸ್ ಆರಂಭವಾಗಲಿದೆ.

    ಇದನ್ನೂ ಓದಿ: Terrorists Attack: ಮನೆಗೆ ನುಗ್ಗಿ ಕಾಶ್ಮೀರದ ಪೊಲೀಸ್ ಅಧಿಕಾರಿಯನ್ನು ಕೊಂದ ಉಗ್ರರು; ಅಡ್ಡ ಬಂದ ಹೆಂಡತಿ, ಮಗಳ ಮೇಲೂ ಫೈರಿಂಗ್

    ಇಂದು ಎಸ್​ಎಸ್​ಎಲ್​ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ಈ ವರ್ಷ 2 ದಿನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಜುಲೈ 19ರಂದು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಪರೀಕ್ಷೆ ನಡೆಯಲಿದೆ. ಜುಲೈ 22ರಂದು ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆಗಳು ನಡೆಯಲಿವೆ. ಈ ವರ್ಷ ಸರಳವಾದ ಮಾದರಿಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗುವುದು. ಓಎಂಆರ್ ಶೀಟ್​ನಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ಭರ್ತಿ ಮಾಡಬೇಕು. ಜುಲೈ 19 ಮತ್ತು 22ರಂದು ಬೆಳಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ.

    10,000 ವಿದ್ಯಾರ್ಥಿಗಳು ತಮ್ಮ ಅಕ್ಕಪಕ್ಕದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜೂನ್ 30ರಂದು ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಹಾಲ್ ಟಿಕೆಟ್ ಕಳುಹಿಸಲಾಗುತ್ತದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗಿಯಾಗುತ್ತಿದ್ದಾರೆ. ಕಳೆದ ಬಾರಿ 8,46,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷ 73,066 ಪರೀಕ್ಷಾ ಕೇಂದ್ರಗಳು ಇರಲಿವೆ. ಆರೋಗ್ಯ ಇಲಾಖೆ ಪರೀಕ್ಷೆ ಬಗ್ಗೆ ವಿಸ್ತೃತವಾದ ಎಸ್ ಓಪಿ ನೀಡಿದೆ. ಈ ವರ್ಷ ಎರಡು ದಿನ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು,  ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಜುಲೈ 19ರಂದು ಮತ್ತು ಕನ್ನಡ, ಇಂಗ್ಲಿಷ್, ಹಿಂದಿ  ಭಾಷೆಯ ಪರೀಕ್ಷೆಗಳು ಜುಲೈ 22ರಂದು ನಡೆಯಲಿವೆ.
    Published by:Sushma Chakre
    First published: