Karnataka 2nd PUC Result 2020: 11:30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ನ್ಯೂಸ್18 ಕನ್ನಡ ವೆಬ್​ಸೈಟ್​ನಲ್ಲೂ ಸಿಗಲಿದೆ ರಿಸಲ್ಟ್

ಪಿಯುಸಿಯಲ್ಲಿ ನೀವು ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಅಂಕಗಳು ನಿಮಗೆ ಬರಬಹುದು. ಕೆಲವರು ಅನುತ್ತೀರ್ಣ ಕೂಡ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ. ಈ ವಿಚಾರದಲ್ಲಿ ಪಾಲಕರು ಕೂಡ ಮಕ್ಕಳ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಜು.14): ಕೊರೋನಾ ವೈರಸ್​ ಭೀತಿ ನಡುವೆಯೂ ಪರೀಕ್ಷೆ ಬರೆದ ದ್ವತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನ. ಬೆಳಗ್ಗೆ 11:30ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್​ ಘೋಷಣೆ ಆಗಲಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕರ್ನಾಟಕ ಪಿಯು ಬೋರ್ಡ್​ ಜೊತೆಗೆ ನ್ಯೂಸ್​18ಕನ್ನಡ ವೆಬ್​ಸೈಟ್​ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

    ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದವರಿಗೆ ಮಾರ್ಚ್​​ನಲ್ಲಿ ಪರೀಕ್ಷೆ ನಡೆದಿತ್ತು. ಕೊರೋನಾ ಕಾರಣದಿಂದ ಇಂಗ್ಲಿಷ್​ ಪರೀಕ್ಷೆ ಮಾತ್ರ ಬಾಕಿ ಉಳಿದಿತ್ತು. ಈ ಪರೀಕ್ಷೆಯನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಲಾಗಿತ್ತು. ಈ ಎಲ್ಲ ಪರೀಕ್ಷೆಗಳ ಫಲಿತಾಂಶ ಇಂದು ಬರಲಿದೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಲ್ಲೇಶ್ವರಂ ಪಿಯು ಬೋರ್ಡ್​ನಲ್ಲಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. 12 ಗಂಟೆಗೆ ಆನ್​ಲೈನ್​ನಲ್ಲಿ ಫಲಿತಾಂಶ ಸಿಗಲಿದೆ. ಸದ್ಯ, ಪಿಯು ಬೋರ್ಡ್ ಫಲಿತಾಂಶ ಬಿಡುಗಡೆ ಮಾಡಲು ಸಜ್ಜಾಗಿದೆ.

    ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

    6.75 ಲಕ್ಷ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಇಂದು ಮಧ್ಯಾಹ್ನ 12 ಗಂಟೆ ಬಳಿಕ www.news18kannada.com ದಲ್ಲಿ ಫಲಿತಾಂಶ ಲಭ್ಯವಿದೆ.

    ಫಲಿತಾಂಶ ಏನೆ ಬರಲಿ ಧೈರ್ಯದಿಂದ ಇರಿ:

    ಪಿಯುಸಿಯಲ್ಲಿ ನೀವು ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಅಂಕಗಳು ನಿಮಗೆ ಬರಬಹುದು. ಕೆಲವರು ಅನುತ್ತೀರ್ಣ ಕೂಡ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ. ಅನುತ್ತೀರ್ಣರಾದರೆ ಮತ್ತೆ ಪೂರಕ ಪರೀಕ್ಷೆ ಬರೆಯಬಹುದು. ಕಡಿಮೆ ಅಂಕ ಬಂದರೆ ರಿ-ಚೆಕ್​ಗೆ ಕೂಡ ಹಾಬಹುದು. ಈ ವಿಚಾರದಲ್ಲಿ ಪಾಲಕರು ಕೂಡ ಮಕ್ಕಳ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ.
    Published by:Rajesh Duggumane
    First published: