Karnataka 2nd PUC Result 2020: ಹೆಚ್ಚುತ್ತಿದೆ ಕೊರೋನಾ; ಮನೆಯಿಂದ ಹೊರ ಬರದೆ ನ್ಯೂಸ್18 ಕನ್ನಡ ವೆಬ್ಸೈಟ್ನಲ್ಲೇ ಪಡೆಯಿರಿ ಪಿಯುಸಿ ರಿಸಲ್ಟ್
Karnataka 2nd puc result 2020 | karresults.nic.in | ಕೊರೋನಾ ವೈರಸ್ ನಿಯಂತ್ರಣ ಮಾಡಲು ಇಡೀ ದೇಶವೇ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದ ಹೊರ ಬರುವುದು ಅಷ್ಟೊಂದು ಸೂಕ್ತವಲ್ಲ. ಹೀಗಾಗಿ, ಆನ್ಲೈನ್ನಲ್ಲೇ ರಿಸಲ್ಟ್ ವೀಕ್ಷಣೆ ಮಾಡಿ.
ಬೆಂಗಳೂರು (ಜು.14): ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲಿ ಆರಂಭದಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿತ್ತು. ಆದರೆ, ಈಗ ಕರ್ನಾಟಕದಲ್ಲೂ ಪರಿಸ್ಥಿತಿ ಕೈ ಮೀರುತ್ತಿದೆ. ಈ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದ ಹೊರ ಬರದೆ, ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ಮೊಬೈಲ್ನಲ್ಲಿ ಮನೆಯಿಂದ ಹೊರಬರದೆ ರಿಸಲ್ಟ್ ನೋಡಬಹುದಾಗಿದೆ.
ಆಂಡ್ರಾಯ್ಡ್ ಮೊಬೈಲ್ಗಳ ಬಳಕೆ ಆರಂಭಕ್ಕೂ ಮೊದಲು ಸೈಬರ್ಗಳಿಗೆ ತೆರಳಿ ರಿಸಲ್ಟ್ ನೋಡಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಿಮ್ಮ ಮೊಬೈಲ್ ಮೂಲಕವೇ ರಿಸಲ್ಟ್ ನೋಡಬಹುದಾಗಿದೆ. ನಮ್ಮ ವೆಬ್ಸೈಟ್ www.news18kannada.comದಲ್ಲಿ ಫಲಿತಾಂಶ ಲಭ್ಯವಿದೆ.
ಕೊರೋನಾ ವೈರಸ್ ನಿಯಂತ್ರಣ ಮಾಡಲು ಇಡೀ ದೇಶವೇ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದ ಹೊರ ಬರುವುದು ಅಷ್ಟೊಂದು ಸೂಕ್ತವಲ್ಲ. ಹೀಗಾಗಿ, ಆನ್ಲೈನ್ನಲ್ಲೇ ರಿಸಲ್ಟ್ ವೀಕ್ಷಣೆ ಮಾಡಿ.
ಫಲಿತಾಂಶ ಏನೆ ಬರಲಿ ಧೈರ್ಯದಿಂದ ಇರಿ:
ಪಿಯುಸಿಯಲ್ಲಿ ನೀವು ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಅಂಕಗಳು ನಿಮಗೆ ಬರಬಹುದು. ಕೆಲವರು ಅನುತ್ತೀರ್ಣ ಕೂಡ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ. ಅನುತ್ತೀರ್ಣರಾದರೆ ಮತ್ತೆ ಪೂರಕ ಪರೀಕ್ಷೆ ಬರೆಯಬಹುದು. ಕಡಿಮೆ ಅಂಕ ಬಂದರೆ ರಿ-ಚೆಕ್ಗೆ ಕೂಡ ಹಾಬಹುದು.
ಮಕ್ಕಳ ಫಲಿತಾಂಶ ಏನೇ ಬಂದರೂ ಈ ವಿಚಾರದಲ್ಲಿ ಪಾಲಕರು ಕೂಡ ಮಕ್ಕಳ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ. ಉತ್ತಮ ಅಂಕ ಬರಲಿ, ಕಡಿಮೆ ಅಂಕ ಬರಲಿ ಅಥವಾ ಅವರು ಅನುತ್ತೀರ್ಣರಾಗಲಿ ಪಾಲಕರು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಈ ಸಂದರ್ಭದಲ್ಲಿ ಪಾಲಕರು ಮಕ್ಕಳ ಬೆನ್ನಿಗೆ ನಿಲ್ಲದಿದ್ದರೆ ಅವರು ಅಪಾಯ ತಂದೊಡ್ಡಿಕೊಳ್ಳುವ ಸಾಧ್ಯತೆ ಇರುತ್ತದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ