Karnataka 2nd PUC Result 2020: ಅವಧಿಗೂ ಮೊದಲೇ ಹೊರಬಿತ್ತು ದ್ವಿತೀಯ ಪಿಯುಸಿ ರಿಸಲ್ಟ್​; ಫಲಿತಾಂಶ ನೋಡಲು ಇಲ್ಲಿ ಕ್ಲಿಕ್​ ಮಾಡಿ

Karnataka 2nd puc result 2020 | karresults.nic.in | ಆಂಡ್ರಾಯ್ಡ್​ ಮೊಬೈಲ್​ಗಳ ಬಳಕೆ ಆರಂಭಕ್ಕೂ ಮೊದಲು ಸೈಬರ್​ಗಳಿಗೆ ತೆರಳಿ ರಿಸಲ್ಟ್​ ನೋಡಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಿಮ್ಮ ಮೊಬೈಲ್​ ಮೂಲಕವೇ ರಿಸಲ್ಟ್​ ನೋಡಬಹುದಾಗಿದೆ.  ನಮ್ಮ ವೆಬ್​ಸೈಟ್​ www.news18kannada.com ದಲ್ಲಿ ಫಲಿತಾಂಶ ಲಭ್ಯವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Karnataka 2nd PUC Result 2020 LIVE: ಬೆಂಗಳೂರು(ಜುಲೈ 14): ಜುಲೈ 18ರ ಸುಮಾರಿಗೆ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ನಾಲ್ಕು ದಿನ ಮುಂಚೆಯೇ ಹೊರಬಿದ್ದಿದೆ. ಮತ್ತೊಂದು ವಿಶೇಷ ಎಂದರೆ, 12 ಗಂಟೆಗೆ ಪ್ರಕಟವಾಗಬೇಕಿದ್ದ ಫಲಿತಾಂಶ 10.45ಕ್ಕೆ ಪ್ರಕಟಗೊಂಡಿದೆ.

    ಆಂಡ್ರಾಯ್ಡ್​ ಮೊಬೈಲ್​ಗಳ ಬಳಕೆ ಆರಂಭಕ್ಕೂ ಮೊದಲು ಸೈಬರ್​ಗಳಿಗೆ ತೆರಳಿ ರಿಸಲ್ಟ್​ ನೋಡಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಿಮ್ಮ ಮೊಬೈಲ್​ ಮೂಲಕವೇ ರಿಸಲ್ಟ್​ ನೋಡಬಹುದಾಗಿದೆ.  ನಮ್ಮ ವೆಬ್​ಸೈಟ್​ www.news18kannada.com ದಲ್ಲಿ ಫಲಿತಾಂಶ ಲಭ್ಯವಿದೆ.

    ಕೊರೋನಾ ವೈರಸ್ ನಿಯಂತ್ರಣ ಮಾಡಲು ಇಡೀ ದೇಶವೇ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದ ಹೊರ ಬರುವುದು ಅಷ್ಟೊಂದು ಸೂಕ್ತವಲ್ಲ. ಹೀಗಾಗಿ, ಆನ್​ಲೈನ್​ನಲ್ಲೇ ರಿಸಲ್ಟ್​ ವೀಕ್ಷಣೆ ಮಾಡಿ.

    ಫಲಿಯಾಂಶ ನೋಡಲು ಇಲ್ಲಿ ಕ್ಲಿಕ್​ ಮಾಡಿ: Karnataka 2nd PUC Result 2020

    ಇರಲಿ ಪಾಲಕರ ಬೆಂಬಲ:

    ಮಕ್ಕಳ ಫಲಿತಾಂಶ ಏನೇ ಬಂದರೂ ಈ ವಿಚಾರದಲ್ಲಿ ಪಾಲಕರು ಕೂಡ ಮಕ್ಕಳ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ. ಉತ್ತಮ ಅಂಕ ಬರಲಿ, ಕಡಿಮೆ ಅಂಕ ಬರಲಿ ಅಥವಾ ಅವರು ಅನುತ್ತೀರ್ಣರಾಗಲಿ ಪಾಲಕರು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಈ ಸಂದರ್ಭದಲ್ಲಿ ಪಾಲಕರು ಮಕ್ಕಳ ಬೆನ್ನಿಗೆ ನಿಲ್ಲದಿದ್ದರೆ ಅವರು ಅಪಾಯ ತಂದೊಡ್ಡಿಕೊಳ್ಳುವ ಸಾಧ್ಯತೆ ಇರುತ್ತದೆ.
    Published by:Rajesh Duggumane
    First published: