ಪಾಸ್ ಆದ್ರೆ ಮಾತ್ರ ಪಿಯು ಬೋರ್ಡ್ನಿಂದ ಮೆಸೇಜ್; SMS ಬಂದಿಲ್ಲ ಅಂದ್ರೆ ಫೇಲ್ ಎಂದಲ್ಲ; ಆತಂಕ ಬೇಡ, ಈ ಸ್ಟೋರಿ ಓದಿ
Karnataka 2nd puc result 2020 | karresults.nic.in | ಉತ್ತೀರ್ಣರಾದವರಿಗೆ ಮಾತ್ರ ಎಸ್ಎಂಎಸ್ ಕಳಿಸುವ ವ್ಯವಸ್ಥೆಯನ್ನು ಪಿಯು ಮಂಡಳಿ ಜಾರಿಗೆ ತಂದಿದೆ. ಕೆಲವರು ಪಾಸ್ ಆದ ಹೊರತಾಗಿಯೂ ಮೆಸೇಜ್ ಬಂದಿರಲಿಲ್ಲ. ಇದು ಅನೇಕರಲ್ಲಿ ಆತಂಕ ಸೃಷ್ಟಿಸಿತ್ತು.
ಬೆಂಗಳೂರು (ಜು.14): ಇಂದು ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆ ಮಾಡಿದ್ದಾರೆ. ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಪಿಯುಸಿ ಪಾಸ್ ಪರ್ಸಂಟೇಜ್ 61.80% ಆಗಿದೆ. ಇನ್ನು, ಪಾಸ್ ಆದವರ ಮೊಬೈಲ್ಗೆ ಮೆಸೇಜ್ ಕಳುಹಿಸುವ ವ್ಯವಸ್ಥೆಯನ್ನು ಈ ಬಾರಿ ಜಾರಿಗೆ ತರಲಾಗಿತ್ತು. ಪಾಸ್ ಆದವರಿಗೂ ಕೆಲವರಿಗೆ ಮೆಸೇಜ್ ಬಂದಿರಲಿಲ್ಲ. ಈ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಉತ್ತೀರ್ಣರಾದವರಿಗೆ ಮಾತ್ರ ಎಸ್ಎಂಎಸ್ ಕಳಿಸುವ ವ್ಯವಸ್ಥೆಯನ್ನು ಪಿಯು ಮಂಡಳಿ ಜಾರಿಗೆ ತಂದಿದೆ. ಕೆಲವರು ಪಾಸ್ ಆದ ಹೊರತಾಗಿಯೂ ಮೆಸೇಜ್ ಬಂದಿರಲಿಲ್ಲ. ಇದು ಅನೇಕರಲ್ಲಿ ಆತಂಕ ಸೃಷ್ಟಿಸಿತ್ತು. ಕೆಲವರು ಮೆಸೇಜ್ ಬರದಿದ್ದಕ್ಕೆ ಫೇಲ್ ಎಂದು ಭಾವಿಸಿದ್ದರು. ಈ ಬಗ್ಗೆ ಮಾತನಾಡಿರುವ ಸುರೇಶ್ ಕುಮಾರ್ ಮೆಸೇಜ್ ಬಂದಿಲ್ಲ ಎಂದರೆ ಫೇಲ್ ಎಂದರ್ಥವಲ್ಲ ಎಂದಿದ್ದಾರೆ.
“ಪಾಸ್ ಆದವರಿಗೆ ಮಾತ್ರ ನಾವು SMS ಕಳುಹಿಸುತ್ತಿದ್ದೇವೆ ಎಂಬುದು ನಿಜ. ಆದರೆ, ನೆಟ್ವರ್ಕ್ ಸಮಸ್ಯೆ ಇಂದಲೂ ಮೆಸೇಜ್ ಒಮ್ಮೊಮ್ಮೆ ಬರದೇ ಇರಬಹುದು. ಹೀಗಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುವುದು ಬೇಡ,” ಎಂದಿದ್ದಾರೆ.
ಇನ್ನು, ಫೇಲ್ ಆದವರಿಗೆ ಮೆಸೇಜ್ ಕಳುಹಿಸುತ್ತಿಲ್ಲವೇಕೆ ಎನ್ನುವ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. “ಅನುತ್ತೀರ್ಣ ಆದವರು ಮಾರ್ಕ್ಸ್ ನೋಡಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಧ್ಯತೆ ಇರುತ್ತದೆ. ಹಾಗಾದಿರಲಿ ಎನ್ನುವ ಉದ್ದೇಶದಿಂದ ಮೆಸೇಜ್ ಕಳಿಸುತ್ತಿಲ್ಲ,” ಎಂದಿದ್ದಾರೆ.
ಆನ್ಲೈನ್ನಲ್ಲಿ ಈಗಾಗಲೇ ಫಲಿತಾಂಶ ಪ್ರಕಟಗೊಂಡಿದೆ. ನಮ್ಮ ವೆಬ್ಸೈಟ್ www.news18kannada.comದಲ್ಲಿ ಫಲಿತಾಂಶ ಲಭ್ಯವಿದೆ.
ಯಾವ ಜಿಲ್ಲೆಗಳಿಗೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ:
ಉಡುಪಿ: 90.71
ದಕ್ಷಿಣ ಕನ್ನಡ: 90.71
ಕೊಡಗು: 81.53
ಉತ್ತರ ಕನ್ನಡ: 80.97
ಚಿಕ್ಕ ಮಗಳೂರು: 79.11
ಬೆಂಗಳೂರು ದಕ್ಷಿಣ: 77.56
ಬೆಂಗಳೂರು ಉತ್ತರ:75.54
ಬಾಗಲಕೋಟೆ: 74.59
ಚಿಕ್ಕಬಳ್ಳಾಪುರ: 73.74
ಶಿವಮೊಗ್ಗ: 72.19
ಹಾಸನ: 70.18
ಚಾಮರಾಜನಗರ: 69.29
ಬೆಂಗಳೂರು ಗ್ರಾಮಾಂತರ: 69.02
ಹಾವೇರಿ: 68.61
ಮೈಸೂರು: 67.98
ಕೋಲಾರ: 67.42
ಧಾರವಾಡ: 67.31
ಬೀದರ್: 64.61
ದಾವಣಗೆರೆ: 64.09
ಚಿಕ್ಕೋಡಿ: 63.68
ಮಂಡ್ಯ: 63.82
ಗದಗ: 63
ತುಮಕೂರು: 62.26
ಬಳ್ಳಾರಿ: 62.02
ರಾಮನಗರ: 60.96
ಕೊಪ್ಪಳ: 60.9
ಬೆಳಗಾವಿ: 59.7
ಯಾದಗಿರಿ: 58.38
ಕಲಬುರಗಿ: 58.27
ಚಿತ್ರದುರ್ಗ: 56.8
ರಾಯಚೂರು: 56.22
ವಿಜಯಪುರ: 54.22
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ