Karnataka Police: ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ; ಇಲ್ಲಿದೆ ಪಟ್ಟಿ

ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಜ. 25):  ಪ್ರತಿ ವರ್ಷ ಗಣರಾಜ್ಯೋತ್ಸವ (Republic Day) ಸಂದರ್ಭದಲ್ಲಿ ನೀಡಲಾಗುವಂತೆ  ಪೊಲೀಸ್ ಪದಕ ಹಾಗೂ ರಾಷ್ಟ್ರಪತಿ ಪದಕಗಳನ್ನು (Rashtrapati padak)  ಘೋಷಣೆ ಮಾಡಲಾಗಿದೆ. ಈ ಬಾರಿ ಕರ್ನಾಟಕ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸೇವಾ ಕಾರ್ಯಕ್ಕೆ ಮೆಚ್ಚಿ ಪೊಲೀಸ್ ಪದಕ ಸಿಕ್ಕಿದೆ. ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

    ಈ ಬಾರಿ 2022ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವಂತೆ ಶೌರ್ಯಕ್ಕಾಗಿ ನೀಡಲಾಗುವಂತ ಪೊಲೀಸ್ ಪದಕವನ್ನು189 ಪೊಲೀಸರಿಗೆ, ರಾಷ್ಟ್ರಪತಿ ಪೊಲೀಸ್ ಪದಕವನ್ನು 88 ಮಂದಿಗೆ ಹಾಗೂ ಉತ್ತಮ ಸೇವೆಗಾಗಿ ನೀಡುವಂತ ಪೊಲೀಸ್ ಪದಕವನ್ನು 662 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ನೀಡಲಾಗಿದೆ.

    ಬನ್ನಿಕಲ್ ದಯಾನಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಗುಪ್ತಚರ ಇಲಾಖೆ ಹಾಗೂ ಹಿತೇಂದ್ರ ಆರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕ್ರೈಂ ಹಾಗೂ ಟೆಕ್ನಿಕಲ್ ಸರ್ವಿಸ್, ಇವರಿಗೆ ರಾಷ್ಟ್ರಪತಿ ಪದಕ ಸಿಕ್ಕಿದೆ. ಇನ್ನು ರಾಜ್ಯದ 19 ಮಂದಿ ಪೊಲೀಸರಿಗೆ ಪೊಲೀಸ್ ಪದಕ ಸಿಕ್ಕಿದ್ದು, ಆ ಪಟ್ಟಿ ಕೆಳಗಿನಂತಿದೆ.

    -ಬಿ. ದಯಾನಂದ್, ಎಡಿಜಿಪಿ, ಗುಪ್ತಚರ ಇಲಾಖೆ
    -ಆರ್. ಹಿತೇಂದ್ರ, ಎಡಿಜಿಪಿ, ಕ್ರೈಂ & ಟೆಕ್ನಿಕಲ್ ಸರ್ವಿಸ್
    -ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
    -ರಾಮಯ್ಯ ಜನಾರ್ದನ್, KSRP 5ನೇ ಬೆಟಾಲಿಯನ್
    -ಡಿ. ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
    -ಪ್ರಭುದೇವ್ ರವಿಪ್ರಸಾದ್, ಹುಣಸೂರು DySP
    -ವೆಂಕಟಪ್ಪನಾಯಕ‌ ಓಲೇಕಾರ್, ಸಿಂಧನೂರು DySP
    -ಎಂ. ಮಲ್ಲೇಶಯ್ಯ, DySP, ಆನೇಕಲ್ ಉಪವಿಭಾಗ
    -ಯಶವಂತಕುಮಾರ್, DySP, ಸೈಬರ್ ಕ್ರೈಂ ಸಿಐಡಿ
    -ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್‌ಬಿ, ಕಲಬುರಗಿ
    -ಕೆ.ಎಂ. ರಮೇಶ್. DySP, ಕರ್ನಾಟಕ ಲೋಕಾಯುಕ್ತ
    -ಎಸ್‌.ಬಿ. ಕೆಂಪಯ್ಯ, ಸಿಐಡಿ ಡಿವೈಎಸ್‌ಪಿ
    -ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್
    -ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
    -ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
    -ಎಮ್.ಎಚ್. ರೇವಣ್ಣ, ಎಎಸ್‌ಐ, ಜಂಟಿ ಸಿಪಿ ಕಚೇರಿ ಬೆಂಗಳೂರು

    ಇದನ್ನು ಓದಿ: ಚುನಾವಣೆ ಹೊತ್ತಿನಲ್ಲಿ M.B Patilಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ!

    ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಿಬ್ಬಂದಿ ಶೌರ್ಯಕ್ಕಾಗಿ 115 ಪೊಲೀಸ್ ಪದಕಗಳನ್ನು ಪಡೆದಿದ್ದಾರೆ. ಸಿಆರ್‌ಪಿಎಫ್ 30 ಮಂದಿ, ಛತ್ತೀಸ್‌ಗಢ ಪೊಲೀಸರು 10, ಒಡಿಶಾ ಪೊಲೀಸರು ಒಂಬತ್ತು ಮತ್ತು ಮಹಾರಾಷ್ಟ್ರ ಪೊಲೀಸರು ಏಳು ಪದಕಗಳನ್ನು ಪಡೆದಿದ್ದಾರೆ.

    ಪೊಲೀಸರಿಗೆ ಶೌರ್ಯ ಮತ್ತು ಸೇವಾ ಪದಕಗಳಲ್ಲದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಗ್ನಿಶಾಮಕ ಸೇವೆಗಳ 42 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ. 42 ಪದಕಗಳಲ್ಲಿ ಒಬ್ಬರಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದ್ದು, ಇಬ್ಬರಿಗೆ ಶೌರ್ಯ ಮತ್ತು ಶೌರ್ಯಕ್ಕಾಗಿ ಶೌರ್ಯಕ್ಕಾಗಿ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದೆ.
    Published by:Seema R
    First published: