• Home
  • »
  • News
  • »
  • state
  • »
  • 108 Ambulance: 108 ಆ್ಯಂಬುಲೆನ್ಸ್​ಗೆ ಕಾಲ್ ತಾಗ್ತಿಲ್ವೇ? ಈ ಸಂಖ್ಯೆಗೆ ಕರೆ ಮಾಡಿ

108 Ambulance: 108 ಆ್ಯಂಬುಲೆನ್ಸ್​ಗೆ ಕಾಲ್ ತಾಗ್ತಿಲ್ವೇ? ಈ ಸಂಖ್ಯೆಗೆ ಕರೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆ್ಯಂಬುಲೆನ್ಸ್ ಬದಲಿಗೆ ಪರ್ಯಾಯ ಕಂಟ್ರೊಲ್ ರೂಂಗಳನ್ನು ನಿರ್ಮಿಸಲಾಗಿದ್ದು ಆ ಮಾಹಿತಿ ಇಲ್ಲಿದೆ. 

  • Share this:

ಮೈಸೂರು: 108 ಆಂಬುಲೆನ್ಸ್ ಸಮಸ್ಯೆ ವಿಚಾರವಾಗಿ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಆಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  (CM Basavaraj Bommai) ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ಆರೋಗ್ಯ ಇಲಾಖೆ (Karnataka Health Department) ಕಮಿಷನರ್ ಡಿ ರಂದೀಪ್ ಟ್ವೀಟ್ ಮಾಡಿದ್ದು, ರಾಜ್ಯದ ಕೆಲವು‌ ಜಿಲ್ಲೆಗಳಲ್ಲಿ 108 ಸೇವೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಅದನ್ನು ಸರಿಪಡಿಸಿ ಸೇವೆ ಪುನರಾರಂಭ ಎಂದು ಟ್ವೀಟ್ ಮಾಡಿದ್ದಾರೆ.  ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆ್ಯಂಬುಲೆನ್ಸ್ ಬದಲಿಗೆ ಪರ್ಯಾಯ ಕಂಟ್ರೊಲ್ ರೂಂಗಳನ್ನು ನಿರ್ಮಿಸಲಾಗಿದ್ದು ಆ ಮಾಹಿತಿ ಇಲ್ಲಿದೆ. 


ಶಿವಮೊಗ್ಗದ ಜನರೇ ಗಮನಿಸಿ
108 ಆಂಬುಲೆನ್ಸ್‌ ಉಚಿತ ಕರೆ ಸರ್ವರ್‌ ಸಮಸ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಂಟ್ರೋಲ್‌ ರೂಂ ಆರಂಭ ಮಾಡಲಾಗಿದೆ. ತಾಲೂಕುವಾರು ಕಂಟ್ರೋಲ್ ರೂಂಅನ್ನು ಆರೋಗ್ಯ ಇಲಾಖೆ ಆರಂಭಿಸಿದೆ.


ದಿನದ 24 ಗಂಟೆಗಳ ಕಾಲ ತುರ್ತು ಕರೆಗಳ ಸ್ವೀಕಾರ
ತುರ್ತು ಕರೆ ಸ್ವೀಕರಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಂಟ್ರೋಲ್ ರೂಂ ತೆರೆದಿದೆ.  ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ಕರೆಗಳ ಸ್ವೀಕಾರಕ್ಕೆ  ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.


ಈ ಕೆಳಕಂಡ ಸಂಖ್ಯೆಗಳನ್ನು ಶಿವಮೊಗ್ಗ ಜಿಲ್ಲೆ ಸಾರ್ವಜನಿಕರು ಅಗತ್ಯ ಬಿದ್ದಲ್ಲಿ ಸಂಪರ್ಕಿಸಬಹುದಾಗಿದೆ.


ಶಿವಮೊಗ್ಗ: 7892184885 ಅಥವಾ 9448183379.


ಭದ್ರಾವತಿ: 9481981739 ಅಥವಾ 8317440824.


ಶಿಕಾರಿಪುರ:  9916821882 ಅಥವಾ 9986322799.


ಸೊರಬ: 9686498767 ಅಥವಾ 9901559781.

ಸಾಗರ: 
8105319752 ಅಥವಾ 9480038414.


ಹೊಸನಗರ: 9448170591 ಅಥವಾ 8970198887.


ತೀರ್ಥಹಳ್ಳಿ: 9448016335 ಅಥವಾ 7975660620.


108 ಸೇವೆಯ ಶಿವಮೊಗ್ಗದ ಜಿಲ್ಲಾ ಕೋರ್ಡಿನೇಟರ್ ಸಂಖ್ಯೆ 9731216655.


ಶಿವಮೊಗ್ಗ ಜಿಲ್ಲಾ ಆಂಬುಲೆನ್ಸ್ ಕಾಲ್ ಸೆಂಟರ್: 08182-222382.


ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. 9880085008 ಅಥವಾ 9740942901 ಅಥವಾ 9880979338 ಈ ಸಂಖ್ಯೆಗಳಿಗೆ  ಕರೆಮಾಡಿ 108 ಆಂಬ್ಯುಲೆನ್ಸ್‌  ಸೌಲಭ್ಯ ಪಡೆಯಲು ಜಿಲ್ಲಾಡಳಿತ ಮನವಿ ಮಾಡಿದೆ.


108 ತಾಂತ್ರಿಕ ಸಮಸ್ಯೆ
ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಶನಿವಾರ ಮಧ್ಯಾಹ್ನದ ನಂತರ 108 ನಂಬರ್‌ಗೆ ಸಮರ್ಪಕವಾಗಿ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಇದಕ್ಕೆ 108 ನಿರ್ವಹಣಾ ಜಿವಿಕೆ ಸಂಸ್ಥೆಯು 15 ವರ್ಷಗಳಷ್ಟು ಹಳೆಯ ಸಾಫ್ಟ್ ವೇರ್ ಅನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕೆಲವೊಂದು ಕರೆಗಳ ಸಂಪರ್ಕ ಮಾತ್ರ ಸಾಧ್ಯವಾಗುತ್ತಿದೆ. ಒಂದು ದಿನದಿಂದ ತಾಂತ್ರಿಕ ಸಮಸ್ಯೆ ಉಂಟಾಗಿರುವುದು ಬೆಳಕಿಗೆ ಬಂದಿದೆ.


10 ಬಾರಿ ಕಾಲ್ ಮಾಡಿದ್ರೂ ಕನೆಕ್ಟ್ ಆಗೋದು ಕಷ್ಟ
10 ಬಾರಿ ಕರೆ ಮಾಡಿದರೆ ಒಮ್ಮೆ ಕರೆ ಸ್ವೀಕರಿಸುತ್ತಾರೆ. ಇದರಿಂದ ತೀರ ಎಮರ್ಜೆನ್ಸಿ ಇರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸಮಸ್ಯೆಯಾಗುತ್ತಿದೆ.


ಇದನ್ನೂ ಓದಿ: 108 Ambulance: ಆ್ಯಂಬುಲೆನ್ಸ್ ನಿರ್ವಹಣೆಯಲ್ಲೇ 108 ತೊಂದರೆ! 'ಇಂಜೆಕ್ಷನ್' ಕೊಡೋರ್ಯಾರು ಈ ಸಮಸ್ಯೆಗೆ?


ಪ್ರತಿ ದಿನ ಸುಮಾರು 8 ಸಾವಿರ ಕಾಲ್ಸ್‌
108 ನಂಬರ್‌ಗೆ ರಾಜ್ಯಾದ್ಯಂತ ನಿತ್ಯ ಸುಮಾರು 8,000 ಕರೆಗಳು ಹೋಗುತ್ತವೆ. ಅಷ್ಟು ಕರೆಗಳಲ್ಲಿ ಅಂದಾಜು 2,000 ಕರೆಗಳು ತುರ್ತು ಪ್ರಕರಣಗಳಿಗೆ ಸಂಬಂಧಿಸಿರುತ್ತವೆ. ಸರ್ವರ್​ನ ಮದರ್​ಬೋರ್ಡ್ ಹಾಳಾಗಿರುವ ಕಾರಣ ಜನರ ಕಾಲ್​ಗೆ ಸ್ಪಂದನೆ ಸಿಗಲು ಸರಾಸರಿ 8 ನಿಮಿಷ ಬೇಕಾಗುತ್ತಿದೆ. ಜನರು ಕಾದುಕಾದು ಬೇಸರಗೊಂಡಿದ್ದಾರೆ. ಪ್ರತಿದಿನ 7ರಿಂದ 8 ಸಾವಿರದಷ್ಟು ಕಾಲ್ ರಿಸೀವ್ ಮಾಡುತವೆ. ಆದರೆ ತಾಂತ್ರಿಕ ದೋಷದಿಂದಾಗಿ ಕೇವಲ 2 ಸಾವಿರದಿಂದ 2,500 ದಷ್ಟು ಜನರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಬಾಕಿ 5 ಸಾವಿರ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎನ್ನಲಾಗಿದೆ.


ಇದನ್ನೂ ಓದಿ: Electricity Bill Hike: ಅಕ್ಟೋಬರ್ 1ರಿಂದ ದುನಿಯಾ ಇನ್ನಷ್ಟು ದುಬಾರಿ! ಹೆಚ್ಚಲಿದೆ ಕರೆಂಟ್ ಬಿಲ್


ಸಮಸ್ಯೆ ಬಗೆಹರಿಯಲು ಇನ್ನೂ 2-3 ದಿನ ಬೇಕು!
108 ಆ್ಯಂಬುಲೆನ್ಸ್ ಸಮಸ್ಯೆ ಬಗೆ ಹರಿಯಲು ಇನ್ನೂ ಎರಡು ಅಥವಾ 3 ದಿನ ಬೇಕಾಗಬಹುದು ಎನ್ನಲಾಗಿದೆ. ಕಂಟ್ರೋಲ್​ ರೂಮ್​ನ ಸಾಫ್ಟ್​ವೇರ್ ಹಾಗೂ ಹಾರ್ಡ್​​ವೇರ್ ಸರಿಪಡಿಸಿದ ನಂತರ ಆಂಬುಲೆನ್ಸ್​ ಸೇವೆ ಮರುಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: