ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರ ಬಿದ್ದಿವೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು, ಸದ್ಯ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಈ ಭರಾಟೆ ಮಧ್ಯೆ ಇತ್ತ ಬಿಜೆಪಿ ಅಷ್ಟೊಂದು ಅಂತರದಲ್ಲಿ ಸೋಲಲು ಕಾಅರಣವೇನೆಂಬ ಬಗ್ಗೆಯೂ ವಿಮರ್ಶೆ ಆರಂಭವಾಗಿದೆ. ಆದರೀಗ ಈ ಚರ್ಚೆಗಳ ನಡುವೆ ಬಿಎಸ್ವೈ ತೋಟದಲ್ಲಿ ವಾಮಾಚಾರ ನಡೆದಿದೆಯಾ ಎಂಬ ಶಂಕೆ ಹುಟ್ಟಿಕೊಂಡಿದೆ.

ಹೌದು ಯಡಿಯೂರಪ್ಪ ಅವರ ತೋಟದಲ್ಲಿ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳು ಬಿ.ವೈ ವಿಜಯೇಂದ್ರರನ್ನ ಸೋಲಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ರಾ? ಎಂಬ ಅನುಮಾನ ಮೂಡಿದೆ.
ಬಿಎಸ್ವೈ ತೋಟದ ಬಳಿ ಪುನುಗು ಬೆಕ್ಕನ್ನು ತಂದು ಹೂತು ಹಾಕಿದೆ ಎನ್ನಲಾಗಿದೆ. 11 ನೇ ತಾರೀಕು ನಡೆದ ಘಟನೆಗೆ ಸಂಬಂಧಿಸಿದಂತೆ ಸಂಸದ ಬಿವೈ ರಾಘವೇಂದ್ರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
-ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿಯ ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿ ಮಾಜಿ ಬಿಎಸ್ ವೈ ತೋಟವಿದ್ದು, ಬಿಎಸ್ ಯಡಿಯೂರಪ್ಪ ಸೇರಿದ ಅಡಿಕೆ ತೋಟದಲ್ಲಿ ವಾಮಚಾರ ನಡೆದಿರುವ ಆರೋಪವನ್ನು ಖುದ್ದು ಅವರ ಪುತ್ರ ಮಾಡಿದ್ದಾರೆ.
ಬಿ ವೈ ವಿಜಯೇಂದ್ರರನ್ನು ಚುನಾವಣೆಯಲ್ಲಿ ಸೋಲಿಸಲು ಇಂತಹದ್ದೊಂದು ಕೃತ್ಯವನ್ನ ನಡೆಸಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ದಿನಾಂಕ 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವೆ ಘಟನೆ ನಡೆದಿದ್ದು, 3-4 ಜನರು ದುಷ್ಕರ್ಮಿಗಳು ಕುನುಗು ಬೆಕ್ಕನ್ನು ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ ಎನ್ನಲಾಗಿದೆ.
ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದ್ದು, 13 ರಂದು ಫಲಿತಾಂಶ ಪ್ರಕಟವಗಿದೆ. ಇದರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಬಿಜೆಪಿಗೆ ನುಂಗಲಾರದ ಏಟು ನೀಡಿದೆ.
ಇಷ್ಟೇ ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ವಿ. ಸೋಮಣ್ಣ, ಡಾ. ಕೆ. ಸುಧಾಕರ್, ಸಿ. ಟಿ. ರವಿ, ಮೊದಲಾದ ಘಟನಾನುಘಟಿ ನಾಯಕರೇ ಸೋಲನುಭವಿಸಿದ್ದು, ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ