ಸೆಂಥಿಲ್​ ಮನಸ್ಥಿತಿ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು; ಶಾಸಕ ಸುನೀಲ್​ ಕುಮಾರ್ ವಿವಾದಾತ್ಮಕ ಹೇಳಿಕೆ

ರಾಜೀನಾಮೆ ವಿಚಾರವಾಗಿ ಸಂಸದ ಅನಂತ್​ಕುಮಾರ್ ಹೆಗ್ಡೆ ಕೂಡ ಸೆಂಥಿಲ್​ ವಿರುದ್ಧ ಹರಿಹಾಯ್ದಿದ್ದರು. ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯು ಸುಲಭ ಮತ್ತು ಅಂತಿಮ ಪರಿಹಾರ ಕೂಡ ಎಂದು ಜರಿದಿದ್ದರು.

HR Ramesh | news18-kannada
Updated:September 10, 2019, 7:23 PM IST
ಸೆಂಥಿಲ್​ ಮನಸ್ಥಿತಿ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು; ಶಾಸಕ ಸುನೀಲ್​ ಕುಮಾರ್ ವಿವಾದಾತ್ಮಕ ಹೇಳಿಕೆ
ಶಾಸಕ ಸುನೀಲ್​ ಕುಮಾರ್
  • Share this:
ಉಡುಪಿ: ಕೇಂದ್ರದ ಸರ್ಕಾರದ ಆಡಳಿತದಿಂದ ಬೇಸತ್ತು ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್​ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳ ವಾಗ್ದಾಳಿ ಮುಂದುವರೆದಿದೆ. ನೆನ್ನೆ ಸಂಸದ ಅನಂತ್​ಕುಮಾರ್ ಹೆಗಡೆ ಅವರು ಸೆಂಥಿಲ್​ ವಿರುದ್ಧ ಹರಿಹಾಯ್ದಿದ್ದರು. ಇಂದು ಕಾರ್ಕಳ ಶಾಸಕ ಸುನೀಲ್​ ಕುಮಾರ್ ಅವರು, ಸೆಂಥಿಲ್​ ಅವರ ಮನಸ್ಥಿತಿ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸುನೀಲ್​ ಕುಮಾರ್, ಕೇಂದ್ರ ಸರ್ಕಾರ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಿದೆ. ಪಾಕ್​ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲಿದೆ. ಇಂತಹ ಕೇಂದ್ರ ಸರ್ಕಾರಗಳ ನಿರ್ಧಾರಗಳನ್ನು ವಿರೋಧಿಸುವ ದಕ್ಷಿಣ ಕನ್ನಡ ನಿರ್ಗಮಿತ ಜಿಲ್ಲಾಧಿಕಾರಿಯಂತಹ ಮನಸ್ಥಿತಿ ಉಳ್ಳವರು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ 100 ದಿನಗಳ ಆಡಳಿತವನ್ನು ಜಗತ್ತೆ ಮೆಚ್ಚಿದೆ. ಜನ  ಬೆಂಬಲವೂ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು, ತ್ರಿವಳಿ ತಲಾಖ್​ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರಿಗೆ ಭದ್ರತೆ ಒದಗಿಸಿದ್ದರ ಸಹಿತ ಹಲವು ವಿಷಯ ಪ್ರಸ್ತಾಪಿಸಿ, ವಿರೋಧದ ನೆಲೆಯಲ್ಲಿ ಐಎಎಸ್​ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಯಾವುದೋ ಪಕ್ಷ ಸೇರಲು ಯತ್ನಿಸುತ್ತಿರುವವರು ದೇಶದ ವ್ಯವಸ್ಥೆ ಸರ್ಕಾರದ ನಿಲುವು ಪ್ರಶ್ನಿಸಬಾರದು. ಒಬ್ಬ ಜಿಲ್ಲಾಧಿಕಾರಿ ರಾಜೀನಾಮೆಯಿಂದ ಪಕ್ಷದ ವಿಚಾರ, ತತ್ವ, ಸಿದ್ಧಾಂತ, ಬದಲಾಗದು ಎಂದು ಸುನೀಲ್ ಕುಮಾರ್ ಹೇಳಿದರು.

ಇದನ್ನು ಓದಿ: ಐಎಎಸ್ ಅಧಿಕಾರಿ ಸೆಂಥಿಲ್ ಪಾಕಿಸ್ತಾನಕ್ಕೆ ಹೋಗಲಿ; ಟ್ವೀಟ್ ಮೂಲಕ ವಿವಾದ ಸೃಷ್ಟಿಸಿದ ಸಂಸದ ಅನಂತಕುಮಾರ್ ಹೆಗಡೆ

ರಾಜೀನಾಮೆ ವಿಚಾರವಾಗಿ ಸಂಸದ ಅನಂತ್​ಕುಮಾರ್ ಹೆಗ್ಡೆ ಕೂಡ ಸೆಂಥಿಲ್​ ವಿರುದ್ಧ ಹರಿಹಾಯ್ದಿದ್ದರು. ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯು ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು! ಇದರಲ್ಲಾದರು ನೀಯತ್ತು ತೋರಿಸಲಿ. ಎಂದು ಟ್ವೀಟ್​ ಮಾಡಿ ಜರಿದಿದ್ದರು.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ