• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಮುಗಿಯದ ಗುರು- ಶಿಷ್ಯರ ಕಾಳಗ: ಸುನಿಲ್ ಆರೋಪಕ್ಕೆ ದೇವಿಯ ಮೊರೆ ಹೋದ ಮುತಾಲಿಕ್!

Karnataka Politics: ಮುಗಿಯದ ಗುರು- ಶಿಷ್ಯರ ಕಾಳಗ: ಸುನಿಲ್ ಆರೋಪಕ್ಕೆ ದೇವಿಯ ಮೊರೆ ಹೋದ ಮುತಾಲಿಕ್!

ಕ್ಷೇತ್ರ ಬಿಟ್ಟುಕೊಡುವಂತೆ ಸುನೀಲ್‌ ಕುಮಾರ್‌ಗೆ ಮುತಾಲಿಕ್ ಆಗ್ರಹ

ಕ್ಷೇತ್ರ ಬಿಟ್ಟುಕೊಡುವಂತೆ ಸುನೀಲ್‌ ಕುಮಾರ್‌ಗೆ ಮುತಾಲಿಕ್ ಆಗ್ರಹ

ಹೌದು ಕಾರ್ಕಳ ಕ್ಷೇತ್ರದಲ್ಲಿ ಗೆದ್ದ ಖುಷಿಯಲ್ಲಿರುವ ಸುನಿಲ್ ಕುಮಾರ್ ಪ್ರಮೋದ್ ಮುತಾಲಿಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ನಡೆದ ಅಭಿನಂದನಾ ಸಭೆಯಲ್ಲಿ ಸುನಿಲ್ ಕುಮಾರ್ ಟೀಕಾಪ್ರಹಾರ ನಡೆಸಿದ್ದು, ಪ್ರತಿಸ್ಪರ್ಧಿಗಳ ವಿರುದ್ದ ನೇರ ಡೀಲ್ ಆರೋಪ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Karkal, India
  • Share this:

ಕಾರ್ಕಳ(ಮೇ.15): ರಾಜ್ಯದಲ್ಲಿ ಚುನಾವಣಾ (Karnataka Elections) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಾಂಗ್ರೆಸ್​ (Congress) ಬಹುಮತ ಸಾಧಿಸಿದೆಯದರೂ ಸಿಎಂ ಯಾರಾಗ್ತಾರೆ ಎಂಬ ಗೊಂದಲ ಇನ್ನೂ ಮುಗಿದಿಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಈ ಸಮಸ್ಯೆ ನಿವಾರಿಸಲು ಯತ್ನಿಸುತ್ತಿದೆ. ಆದರೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಕರಾವಳಿ ಜಿಲ್ಲೆಯ ಕಾರ್ಕಳದಲ್ಲಿ (Karkal) ಗುರು- ಶಿಷ್ಯರ ಕಾಳಗ ಮುಂದುವರೆದಿದೆ.


ಹೌದು ಕಾರ್ಕಳ ಕ್ಷೇತ್ರದಲ್ಲಿ ಗೆದ್ದ ಖುಷಿಯಲ್ಲಿರುವ ಸುನಿಲ್ ಕುಮಾರ್ ಪ್ರಮೋದ್ ಮುತಾಲಿಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ನಡೆದ ಅಭಿನಂದನಾ ಸಭೆಯಲ್ಲಿ ಸುನಿಲ್ ಕುಮಾರ್ ಟೀಕಾಪ್ರಹಾರ ನಡೆಸಿದ್ದು, ಪ್ರತಿಸ್ಪರ್ಧಿಗಳ ವಿರುದ್ದ ನೇರ ಡೀಲ್ ಆರೋಪ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ವಿರುದ್ದ ನೇರವಾಗಿ ಕಿಡಿಕಾರಿದ ಸುನಿಲ್ ಕುಮಾರ್, ನೈಜ ಹಿಂದುತ್ವದ ಹೆಸರಲ್ಲಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ. ಯಾಕೆ ಇಲ್ಲಿಗೆ ಬಂದ್ರಿ ನೀವು?
ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಾ? ನೈಜ ಹಿಂದುತ್ವ ಹೇಳಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ, ಯಾಕೆ ಇಲ್ಲಿಗೆ ಬಂದ್ರಿ ನೀವು? ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಿ.




ನಾನು ಹತ್ತು ಬಾರಿ ಹೇಳುತ್ತಿದ್ದೇನೆ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್​ ಎಂದು ಹತ್ತು ಬಾರಿ ಹೇಳಲು ಸಿದ್ಧ. ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡಬಲ್ಲರು. ಅಭಿವೃದ್ಧಿಯನ್ನ ಅಪಹಾಸ್ಯ, ಅವಮಾನ ಮಾಡಿದ್ರು. ಪರಶುರಾಮ ಕ್ಷೇತ್ರದ ಅಣೆಕಟ್ಟು ಜಾಗದಲ್ಲಿ ನೀರಿಲ್ಲ ಎಂದು ಮುತಾಲಿಕ್ ಹಾಗೂ ಬೆಂಬಲಿಗರು ಕ್ರಿಕೆಟ್ ಆಡಿದ್ರು, ಅಣೆಕಟ್ಟು ಮೇಲಿಂದ ಹಾರಿ ಎತ್ತರವೂ ಗೊತ್ತಾಗತ್ತೆ ಎಂದು ಸವಾಲೆಸೆದಿದ್ದಾರೆ.


ಪ್ರಮೋದ್ ಮುತಾಲಿಕರೇ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆ ಮಾಡಿಸಿದ್ರಿ, ಟೈಗರ್ ಗ್ಯಾಂಗ್ ಹೆಸರಲ್ಲಿ ಎಷ್ಟು ಹತ್ಯೆ ಮಾಡಿಸಿದ್ರಿ ನೀವು? ದಾಖಲೆಗಳನ್ನು ಕೊಡಬೇಕಾ? ಟೈಗರ್ ಗ್ಯಾಂಗ್ ಹೆಸರಲ್ಲಿ ಹತ್ಯೆ ಮಾಡಿದವರು ಗುಲ್ಬರ್ಗ ಜೈಲಲ್ಲಿದ್ದಾರೆ. ಪ್ರಮೋದ್ ಮುತಾಲಿಕ್ ಉಬ್ಬಿಸಿ ಬೆಳೆಸಿದ ಬೆಂಬಲಿಗರು ಕಾಂಗ್ರೆಸ್​ಗೆ ಮತಕೇಳ್ತಾರೆ. ಯಾವುದು ನೈಜ ಹಿಂದುತ್ವ ಯಾವುದು ಭ್ರಷ್ಟಾಚಾರ ಅಂತ ಚರ್ಚೆ ಆಗಬೇಕಲ್ಲ ಇಲ್ಲಿ ಎಂದು ಕಿಡಿ ಕಾರಿದ್ದಾರೆ ಸುನಿಲ್ ಕುಮಾರ್.


ಅಲ್ಲದೇ ಮತಯಾಚನೆ ವೇಳೆ ನಮ್ಮ ಮನೆಯಲ್ಲಿ 12 ಮತ ಇದೆ ಎಷ್ಟು ಹಣ ಕೊಡ್ತೀರಿ? ನೀವು ಕೊಡದಿದ್ರೆ ಅವರು ಕೊಡ್ತಾರೆ ಅನ್ನೋ ಮಾತು ಕರೆ ಮಾಡಿ ಹೇಳ್ತಾನೆ. ಇಂತಹ ನಡವಳಿಕೆ ಕಾರ್ಕಳ ಮತದಾರರಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಶಾಸಕ ವಿ ಸುನಿಲ್ ಕುಮಾರ್ ವೇದಿಕೆಯಲ್ಲಿ ಬೇಸರ ಹೊರಹಾಕಿದ್ದಾರೆ.


ಇದನ್ನೂ ಓದಿ:  Chitradurga: ನಾವ್ ಕರೆಂಟ್ ಬಿಲ್ ಕಟ್ಟಲ್ಲ; ಗ್ರಾಮಸ್ಥರ ಪಟ್ಟು; ವಿಡಿಯೋ ವೈರಲ್


ಕಾರ್ಕಳ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಮೋದ್ ಮುತಾಲಿಕ್


ಇನ್ನು ಸುನಿಲ್ ಕುಮಾರ್​ ಇಂತಹುದ್ದೊಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಕಾರ್ಕಳ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಮೋದ್ ಮುತಾಲಿಕ್ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತೆಂಗಿನ ಕಾಯಿ ಹಿಡಿದು ನ್ಯಾಯ ನೀಡುವಂತೆ ಪ್ರಾರ್ಥನೆ ಮಾಡಿದ ಮುತಾಲಿಕ್, ನಾನು ಕಾಂಗ್ರೆಸ್ ನಿಂದ ಹಣ ಪಡೆದಿಲ್ಲ, ದುಡ್ಡು ಪಡೆದಿದ್ದರೆ ಶಿಕ್ಷೆ ಆಗಲಿ. ಆರೋಪ ಮಾಡಿದವರು ನನ್ನ ಮೇಲಿನ ಆರೋಪ ಸಾಬೀತುಪಡಿಸಲಿ. ಆರೋಪಕ್ಕೆ ದಾಖಲೆ ಕೊಡಬೇಕು ಇಲ್ಲ ಕ್ಷಮೆ ಕೇಳಬೇಕು. ಇವರೆಡು ಮಾಡದಿದ್ದರೆ ತಾಯಿ ನೀನೇ ನೋಡಿಕೊಳ್ಳಬೇಕು. ಸರಿಯಾದ ಶಿಕ್ಷೆ ನೀನೇ ಕೊಡಬೇಕು ಅಂತ ಸಂಕಲ್ಪ ಮಾಡುತ್ತಿದ್ದೇನೆ ಸ್ವೀಕಾರ ಮಾಡಬೇಕು ಎಂದು ಬೇಡಿಕೊಂಡಿದ್ದಾರೆ.

top videos
    First published: