Karinjeshwara Temple: ಮತ್ತೆ ಕುಸಿಯುವ ಭೀತಿಯಲ್ಲಿ 1,000 ವರ್ಷ ಹಳೆಯ ಕಾರಿಂಜೇಶ್ವರ ಕ್ಷೇತ್ರ

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲೂಕಿನ ಕಾರಿಂಜ ಬೆಟ್ಟದಲ್ಲಿರುವ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟದ ಕಲ್ಲುಗಳು ಮಳೆಗಾಲದ ಸಂದರ್ಭದಲ್ಲಿ ಒಂದೊಂದಾಗಿಯೇ ಜಾರುತ್ತಿದ್ದು, ಕಳೆದ ಬಾರಿಯ ಮಳೆಗಾಲಕ್ಕೆ ಬೆಟ್ಟದ‌ ಬಂಡೆ ಜಾರಿದ ಪರಿಣಾಮ ಕಾರಿಂಜೇಶ್ವರ ದೇವಸ್ಥಾನದ ಒಂದು ಪಕ್ಕಕ್ಕೆ ಹಾನಿಯಾಗಿತ್ತು.

ಕಾರಿಂಜೇಶ್ವರ ದೇವಾಲಯ ಪ್ರದೇಶ

ಕಾರಿಂಜೇಶ್ವರ ದೇವಾಲಯ ಪ್ರದೇಶ

  • Share this:
ಅಕ್ರಮ ಕಲ್ಲು ಕಲ್ಲು ಗಣಿಗಾರಿಕೆಯಿಂದ (Stone Mining) ಪುರಾತನ ದೇವಾಲಯ (Historical Temple) ಕುಸಿಯುವ ಭೀತಿಯನ್ನು ಮತ್ತೆ ಎದುರಿಸುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲೂಕಿನ ಕಾರಿಂಜ ಬೆಟ್ಟ(Karinja Hills) ದಲ್ಲಿರುವ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟದ ಕಲ್ಲುಗಳು ಮಳೆಗಾಲದ (Mosnoon) ಸಂದರ್ಭದಲ್ಲಿ ಒಂದೊಂದಾಗಿಯೇ ಜಾರುತ್ತಿದ್ದು, ಕಳೆದ ಬಾರಿಯ ಮಳೆಗಾಲಕ್ಕೆ ಬೆಟ್ಟದ‌ ಬಂಡೆ ಜಾರಿದ ಪರಿಣಾಮ ಕಾರಿಂಜೇಶ್ವರ ದೇವಸ್ಥಾನದ ಒಂದು ಪಕ್ಕಕ್ಕೆ ಹಾನಿಯಾಗಿತ್ತು. ಇದೀಗ ಮತ್ತೆ ದೇವಸ್ಥಾನದ ಬಲಬದಿಯ‌ ದೊಡ್ಡ ಬಂಡೆಯೊಂದು ಜಾರಿದ್ದು, ಪುರಾಣ ಪ್ರಸಿದ್ಧ ಕ್ಷೇತ್ರ ಮತ್ತೆ ಕುಸಿಯುವ ಭೀತಿಯಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿ ಎತ್ತರದಲ್ಲಿರುವ ಕಾರಿಂಜ ಬೆಟ್ಟದ ತುತ್ತ ತುದಿಯಲ್ಲಿ ಕಾರಿಂಜೇಶ್ವರ ದೇವಸ್ಥಾನ ಮತ್ತು ಪಾರ್ವತಿ ದೇವಸ್ಥಾನವಿದೆ.

ಸುಮಾರು ಸಾವಿರ ವರ್ಷಕ್ಕೂ ಹಿಂದೆ ಈ ದೇವಾಲಯವಿತ್ತು ಎನ್ನುವುದಕ್ಕೆ ಹಲವು ಪುರಾವೆಗಳೂ ಇಲ್ಲಿದ್ದು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ‌ಯನ್ನು  ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಆದರೆ‌ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಬೆಟ್ಟದ‌ ಸುತ್ತಮುತ್ತ ಅಕ್ರಮ ಹಾಗು‌ ಸಕ್ರಮ ಹೀಗೆ ಎರಡೂ‌ ರೀತಿಯ ಗಣಿಗಾರಿಕೆಯು ನಡೆಯುತ್ತಿದ್ಧು, ಕಪ್ಪು ಕಲ್ಲಿನ ಗಣಿಗಾರಿಕೆಯನ್ನು‌ ಈ‌ ಭಾಗದಲ್ಲಿ ನಡೆಸಲಾಗುತ್ತಿದೆ.

ಕಾರಿಂಜ ಬೆಟ್ಟದಲ್ಲಿರುವ ಬಂಡೆಗಳ ಸೆಲೆಗಳಲ್ಲಿ ಬಿರುಕು‌

ಕಲ್ಲುಗಳನ್ನು ಒಡೆಯುವುದಕ್ಕೋಸ್ಕರ‌ ಗಣಿಗಾರಿಕೆಯಲ್ಲಿ‌ ನಿರತರಾದ ಮಂದಿ  ಭಾರೀ ಪ್ರಮಾಣದ ಸ್ಪೋಟಕಗಳನ್ನು‌ ಬಳಸುತ್ತಿದ್ದು, ದಿನಂಪ್ರತಿ ಭಾರೀ‌ ಸ್ಟೋಟಕ‌ ಬಳಸುತ್ತಿರುವುದರ ಪರಿಣಾಮ ಇದೀಗ ಕಾರಿಂಜ‌ ಬೆಟ್ಟದ ಮೇಲೆ ಬಿದ್ದಿದೆ. ಭಾರೀ ಪ್ರಮಾಣಸ ಸ್ಪೋಟಕಕ್ಕೆ ಕಾರಿಂಜ ಬೆಟ್ಟದಲ್ಲಿರುವ ಬಂಡೆಗಳ ಸೆಲೆಗಳಲ್ಲಿ ಬಿರುಕು‌ ಬಿಟ್ಟಿದ್ದು, ಮಳೆಗಾಲದ ಸಮಯದಲ್ಲಿ ಈ ಬಿರುಕು ಒಡೆದು ಬಂಡೆಗಳು ಕೆಳಗೆ ಬೀಳಲಾರಂಭಿಸಿದೆ.

ಬೆಟ್ಟದ ಸುತ್ತ ನಡೆಯುತ್ತಿರುವ ಗಣಿಗಾರಿಕೆ

ಬಂಡೆಗಳು ಈ‌ ರೀತಿ ಬೀಳಲಾರಂಭಿಸಿದಲ್ಲಿ, ಗುಡ್ಡದ‌ ತುದಿಯಲ್ಲಿರುವ ದೇವಸ್ಥಾನಕ್ಕೂ  ಹಾನಿಯಾಗಲಾರಂಭಿಸಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಮತ್ತೆ ಬೆಟ್ಟದ ಬಂಡೆ‌‌ ಕುಸಿದಿದ್ದು, ಬಂಡೆ ಜಾರಿ ಮರದ‌ ಮೇಲೆ ಬಿದ್ದಿದೆ. ಮರ ಕಾರಿಂಜೇಶ್ವರ ಸಂಪರ್ಕಿಸುವ‌ ರಸ್ತೆಯ ಮೇಲೆ ಬಿದ್ದು , ರಸ್ತೆ ಸಂಚಾರಕ್ಕೂ ಹಾನಿಯಾಗಿದೆ.

ಇದನ್ನೂ ಓದಿ:

ಗಣಿಗಾರಿಕೆಯಿಂದಾಗಿ ಪವಿತ್ರ‌ ಕ್ಷೇತ್ರಕ್ಕೆ ಭಾರೀ‌ ಹಾನಿಯಾಗುತ್ತಿದ್ದು, ಕೂಡಲೇ ಬೆಟ್ಟದ ಸುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಹಿಂದೂ ಜಾಗರಣ ವೇದಿಕೆ ನಿರಂತರವಾಗಿ ಪ್ರತಿಭಟನೆಯನ್ನು ನಡೆಸಿಕೊಂಡು‌ ಬರುತ್ತಿದೆ.

ಬೆಟ್ಟ‌ ಉಳಿಸಿ ಅಭಿಯಾನ

ಅಲ್ಲದೆ ಈ ಸಂಬಂಧ ಬೆಟ್ಟ‌ ಉಳಿಸಿ ಅಭಿಯಾನವನ್ನೂ ಆರಂಭಿಸಿದ್ದು, ಹಿಂದೂ ಸಂಘಟನೆಯ ಮುಖಂಡರು ಹಲವು ರೀತಿಯ ಎಚ್ಚರಿಕೆಯನ್ನು ಜನಪ್ರತಿನಿಧಿಗಳಿಗೆ ಹಾಗು ಅಧಿಕಾರಿಗಳಿಗೆ ನೀಡಿದ್ದಾರೆ.

ಇದನ್ನೂ ಓದಿ:

ಎಷ್ಟು ಪ್ರತಿಭಟನೆಗಳನ್ನು ನಡೆಸಿದರೂ, ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಇತರ ಪ್ರತಿಫಲ ಮತ್ತೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಶೆಟ್ಟಿ ಮಾಣಿ ಆರೋಪಿಸಿದ್ದಾರೆ. ಕಾರಿಂಜ ಬೆಟ್ಟ ಉಳಿಸಲು ಮತ್ತೆ ಉಗ್ರ ಹೋರಾಟ ನಡೆಸುವುದಾಗಿಯೂ‌ ಅವರು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
Published by:Divya D
First published: