Mango Market: ಕರಿ ಈಶಾಡು ಮಾವಿನ ಹಣ್ಣಿಗೆ ಭರ್ಜರಿ ಡಿಮ್ಯಾಂಡ್, ಮ್ಯಾಂಗೋ ಬಲು ದುಬಾರಿ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯುವ ಪ್ರಸಿದ್ದ ಕರಿ ಈಶಾಡು ಜಾತಿಗೆ ಸೇರಿದ ಮಾವು ಸಹ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನ ವಿಶಿಷ್ಟ ರುಚಿಯಿಂದಲೇ ಗುರುತಿಸಿಕೊಳ್ಳುವ ಕರಿಈಶಾಡು ಮಾವಿಗೆ ಮಾರುಕಟ್ಟೆಯಲ್ಲಿ ಫುಲ್​ ಡಿಮ್ಯಾಂಡ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮಾವಿನ ಹಣ್ಣು (Mango Fruits) ಅಂದ್ರೆ ಸಾಕು ಯಾರಿಗಾದ್ರೂ ಮೊದಲು ನೆನಪಾಗೋದೇ ಇಲ್ಲಿನ ಪ್ರಸಿದ್ದ ಕರಿಈಶಾಡು ಮಾವಿನಹಣ್ಣು. ಜಿಲ್ಲೆಯ ಕರಾವಳಿ (Karavali) ಪ್ರದೇಶವಾದ ಕಾರವಾರ, ಅಂಕೋಲಾ ಕುಮಟಾ ತಾಲೂಕಿನಲ್ಲಿ ಮಾತ್ರ ಬೆಳೆಯುವ ಈ ಕರಿಈಶಾಡು (Kari Ishad) ಮಾವಿನಹಣ್ಣು ತನ್ನದೇ ಆದ ವೈಶಿಷ್ಟ್ಯದ ಮೂಲಕ ಹೆಸರಾಗಿದೆ. ಮಳೆಗಾಲದ (Rainy season) ಪೂರ್ವದಲ್ಲಿ ಸಿಗುವ ಈ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಗ್ರಾಹಕರು (Consumers) ಹಣ್ಣಿನ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಮಾವಿನ ಹಣ್ಣಿಗೆ ಭರ್ಜರಿ ಡಿಮ್ಯಾಂಡ್​

ಕೊರೋನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಗ್ರಾಹಕ ಕೈಗೆಟುಕದ ಹಣ್ಣು ಈಗ ಭರ್ಜರಿ ವ್ಯಾಪಾರ, ಹೌದು ಹಣ್ಣುಗಳ ರಾಜ ಎಂದೇ ಖ್ಯಾತಿಯಾಗಿರುವ ಮಾವಿನಹಣ್ಣಿನ ಸೀಸನ್ ಈಗ ಪ್ರಾರಂಭವಾಗಿದೆ. ಮಾರುಕಟ್ಟೆಯಲ್ಲಿ ವಿಧ ವಿಧವಾದ ಮಾವಿನ ಹಣ್ಣುಗಳು ಲಗ್ಗೆ ಇಡುವ ಮೂಲಕ ಗ್ರಾಹಕರನ್ನ ಕೈ ಬೀಸಿ ಕರೆಯುತ್ತಿವೆ. ಮಾವು ಪ್ರಿಯರಿಗಂತೂ ಯಾವ ಹಣ್ಣು  ತೆಗೆದುಕೊಳ್ಳೋಣಾ ಅನ್ನುವಷ್ಟು ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ಮಾರುಕಟ್ಟೆಯಲ್ಲಿ ಕರಿ ಈಶಾಡು ಮಾವು 

ಇನ್ನು ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯುವ ಪ್ರಸಿದ್ದ ಕರಿ ಈಶಾಡು ಜಾತಿಗೆ ಸೇರಿದ ಮಾವು ಸಹ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನ ವಿಶಿಷ್ಟ ರುಚಿಯಿಂದಲೇ ಗುರುತಿಸಿಕೊಳ್ಳುವ ಕರಿಈಶಾಡು ಇದೀಗ ಮಾರುಕಟ್ಟೆಯಲ್ಲಿ ತನ್ನ ಕಾರುಬಾರನ್ನ ಪ್ರಾರಂಭಿಸಿದೆ.
ಅಪರೂಪದ ಮಾವು ಎನ್ನಲಾದ ಈ ಕರಿಈಶಾಡು ಮಾವನ್ನ ಕೇವಲ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ ಹಾಗೂ ಕುಮಟಾದ ಕೆಲ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ.

ಹಾಲಕ್ಕಿ ಸಮುದಾಯದವರು ಹೆಚ್ಚಾಗಿ ಬೆಳೆಯೋ ಮಾವು

ಅದ್ರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನ ಬೆಳೆಯುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ಹಲವೆಡೆಯಿಂದ ಹಾಲಕ್ಕಿ ಮಹಿಳೆಯರು ತಾವು ಬೆಳೆದ ಮಾವನ್ನ ತಂದು ಮಾರಾಟಕ್ಕೆ ಇಳಿದಿದ್ದಾರೆ. ಕಾರವಾರ ಮಾರುಕಟ್ಟೆಗೆ ಕರಿಈಶಾಡು ಮಾವು ಲಗ್ಗೆಇಟ್ಟಿದ್ದು ಹಾಲಕ್ಕಿ ಮಹಿಳೆಯರು ಸಾಲು ಸಾಲಾಗಿ ಕುಳಿತು ಕರಿಈಶಾಡು ಮಾವಿನ ಮಾರಾಟ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ನೈಸರ್ಗಿಕವಾಗಿ ಬೆಳೆದ ಕರಿಈಶಾಡು ಮಾವನ್ನ ಹಣ್ಣಾಗಿ ಮಾಡಲು ಯಾವುದೇ ಕೆಮಿಕಲ್ ಬಳಸದೇ ಹುಲ್ಲಿನಲ್ಲಿ ಕಾಯಿಯನ್ನ ಇಟ್ಟು ಹಣ್ಣು ಮಾಡಿ ತಂದು ಮಾರಾಟ ಮಾಡುವುದು ಇದರ ವಿಶೇಷ.

ಇದನ್ನೂ ಓದಿ: Ashwath Narayan: ವಿವಾದದ ಸುಳಿಯಿಂದ ರಕ್ಷಿಸಿಕೊಳ್ಳಲು ‘ಕೈ’ ನಾಯಕರ ಮೊರೆ ಹೋದ್ರಾ ಸಚಿವ ಅಶ್ವತ್ಥ್ ನಾರಾಯಣ?

ಮಾವಿನ ಹಣ್ಣಿಗೆ 300 ರಿಂದ 500 ರೂಪಾಯಿ

ಇನ್ನು ನೈಸರ್ಗಿಕವಾಗಿ ಬೆಳದ ಈ ಕರಿಈಶಾಡ ಮಾವು ಪ್ರತಿವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬರುವುದರಿಂದ ಮಾವು ಬೆಳೆದ ಹಾಲಕ್ಕಿ ಮಹಿಳೆಯರು ಹೆದ್ದಾರಿ ಪಕ್ಕ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಜೊತೆಗೆ ಸ್ಥಳೀಯವಾಗಿ ಬೆಳೆಯುವ ಪೈರಿ, ಬನಾಟೆ ಆಪೂಸ್, ರತ್ನಗಿರಿ ತಳಿಯ ಮಾವಿನ ಹಣ್ಣುಗಳನ್ನ ಸಹ ಮಾರಾಟಕ್ಕೆ ತರುತ್ತಾರೆ. ಇನ್ನು ಈ ಬಾರಿ ಕರಿಈಶಾಡು ಮಾವಿನ ಹಣ್ಣಿಗೆ 300 ರಿಂದ 500 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿದ್ದು ಉಳಿದಂತೆ ಇತರೆ ಹಣ್ಣುಗಳು 150 ರಿಂದ 400 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿವೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಮಾವಿನಹಣ್ಣು ಹೆಚ್ಚು ಕಂಡುಬಂದಿರಲಿಲ್ಲ.

ಇದನ್ನೂ ಓದಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

ಹಣ್ಣು ಖರೀದಿಗೆ ಮುಗಿಬಿದ್ದ ಗ್ರಾಹಕರು

ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಗ್ರಾಹಕರು ಸಹ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಅಲ್ಲದೇ ಕಾರವಾರ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಜನರು ಸ್ಥಳೀಯವಾಗಿ ಬೆಳೆದ ಮಾವಿನಹಣ್ಣಿನ ಖರೀದಿಗೆ ಆಗಮಿಸುತ್ತಾರೆ ಅಂತಾರೇ ಗ್ರಾಹಕರು.  ಒಟ್ಟಾರೇ ಕಾರವಾರ ಮಾರುಕಟ್ಟೆಯಲ್ಲಿ ಹಣ್ಣಿನ ರಾಜನ ಅಬ್ಬರ ಜೋರಾಗಿದ್ದು ಜೂನ್ ಆರಂಭದವರೆಗೆ ಮಾವಿನಹಣ್ಣು ಆಗಮಿಸುವುದರಿಂದ ಮಾವು ಪ್ರಿಯರಿಗಂತೂ ಹಬ್ಬದ ವಾತಾವರಣ ನಿರ್ಮಾಣವಾಗಿರೋದಂತೂ ಸತ್ಯ.
Published by:Pavana HS
First published: