Viral Video: ಹಾರ್ನ್ ಮಾಡಿದ್ರೆ ಮಾತ್ರ ಈ ದೇವರಿಗೆ ಕೇಳೋದಂತೆ! ಉತ್ತರ ಕನ್ನಡದ ಕಾರೆಮನೆ ಜಟಗ ದೇವರು ಅಂದ್ರೆ ಭಾರೀ ಫೇಮಸ್​

Mattighatta: ಉತ್ತರ ಕನ್ನಡದ ಮತ್ತಿಘಟ್ಟ ಎಂಬ ಬಳಿ ಕಾರೆಮನೆ ಜಟಗ ದೇವರು ಎಂಬ ಕ್ಷೇತ್ರವಿದೆ. ಇಲ್ಲಿನ ರಸ್ತೆಯಲ್ಲಿ ವಾಹನದ ಮೂಲಕ ಓಡಾಡುವ ಜನರು ಹಾರ್ನ್​ ಮಾಡುವ ಮೂಲಕ ದೇವರಿಗೆ ನಮಸ್ಕಾರ ಸಲ್ಲಿಸುತ್ತಾರೆ. ಅಥವಾ ಹಾರ್ನ್​ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ವಿಶೇಷತೆಯಿಂದಾಗಿ ಕಾರೆಮನೆ ಜಟಗ ದೇವರ ಕ್ಷೇತ್ರ ಜನಪ್ರಿಯತೆ ಪಡೆಯುತ್ತಿದೆ.

ಕಾರೆಮನೆ ಜಟಗ ದೇವರು

ಕಾರೆಮನೆ ಜಟಗ ದೇವರು

 • Share this:
  ಸಾಮಾನ್ಯವಾಗಿ ವಾಹನಗಳಲ್ಲಿ (Vehicles) ಹಾರ್ನ್​ (Horn) ತುಂಬಾನೇ ಅಗತ್ಯ. ಭಾರತದಂತಹ ರಸ್ತೆಗಳಲ್ಲಿ (Road) ಹಾರ್ನ್​ ಅಗತ್ಯವಾಗಿ ಬಳಸಲೇ ಬೇಕು. ಎದುರಿಂದ ಬರುವ ವಾಹನಕ್ಕೆ ತಿಳಿಸಲು ಹಾರ್ನ್​  ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬೈಕ್ (Bike)​, ಸ್ಕೂಟರ್ (Scooter)​, ಕಾರು (Car), ಲಾರಿ, ಬಸ್​ ಗಳಲ್ಲಿ ಹಾರ್ನ್​ ಮುಖ್ಯವಾಗಿ ಅಳವಡಿಸಲಾಗುತ್ತದೆ. ಕಚ್ಚಾ ರಸ್ತೆ ಅಥವಾ ಸಡಿಲವಾದ ರಸ್ತೆಗಳಲ್ಲಿ ಹಾರ್ನ್​ ಮಾಡಿ ಚಲಿಸಬೇಕು ಎಂಬ ಫಲಕವನ್ನು ನೋಡಿರುತ್ತೀರಾ. ಅಥವಾ ಫಾಟಿ ರಸ್ತೆಗಳಲ್ಲಿ ಹಾರ್ನ್​ ಮಾಡಿ ಮುಂದಕ್ಕೆ ಚಲಿಸಿ ಎಂಬ ಫಲಕವನ್ನು ಕಾಣಬಹುದಾಗಿದೆ. ಹಾರ್ನ್​ ಮಾಡುವುದರಿಂದ ಅಪಘಾತವನ್ನು ತಡೆಯಬಹುದು. ಈ ಕಾರಣಕ್ಕೆ ವಾಹನಗಳಲ್ಲಿ ಹಾರ್ನ್​ ತುಂಬಾನೇ ಅಗತ್ಯ. ಆದರೆ ವಾಹನಗಳ ಹಾರ್ನ್​ ವಿಚಾರ ಹೇಳುತ್ತಿದ್ದಂತೆ ಉತ್ತರ ಕನ್ನಡದ (Uttara Kannada) ಮತ್ತಿಘಟ್ಟ (Mattighatta) ಎಂಬ ಪ್ರದೇಶದಲ್ಲಿ ದೇವರಿಗೂ ಹಾರ್ನ್​ ಮಾಡುವ ಮೂಲಕ ನಮಸ್ಕರಿಸುವ ಜನರಿದ್ದಾರೆ. ಇಲ್ಲಿನ ರಸ್ತೆಯಲ್ಲಿ ಚಲಿಸುವ ಪ್ರತಿಯೊಬ್ಬನು ಹಾರ್ನ್ ಮಾಡುವ ಮೂಲಕ ವಾಹನ ಚಲಾಯಿಸುತ್ತಾರೆ.

  ಉತ್ತರ ಕನ್ನಡದ ಮತ್ತಿಘಟ್ಟ ಎಂಬ ಬಳಿ ಕಾರೆಮನೆ ಜಟಗ ದೇವರು ಎಂಬ ಕ್ಷೇತ್ರವಿದೆ. ಇಲ್ಲಿನ ರಸ್ತೆಯಲ್ಲಿ ವಾಹನದ ಮೂಲಕ ಓಡಾಡುವ ಜನರು ಹಾರ್ನ್​ ಮಾಡುವ ಮೂಲಕ ದೇವರಿಗೆ ನಮಸ್ಕಾರ ಸಲ್ಲಿಸುತ್ತಾರೆ. ಅಥವಾ ಹಾರ್ನ್​ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ವಿಶೇಷತೆಯಿಂದಾಗಿ ಕಾರೆಮನೆ ಜಟಗ ದೇವರ ಕ್ಷೇತ್ರ ಜನಪ್ರಿಯತೆ ಪಡೆಯುತ್ತಿದೆ.

  ಇದನ್ನು ಓದಿ:  Bengaluru: ಬೆಕ್ಕು ಕಳ್ಳತನ, ದೂರು ದಾಖಲು: ಹುಡುಕಿ ಕೊಟ್ಟವರಿಗೆ ಭಾರೀ ನಗದು ಬಹುಮಾನ

  ಜಟಗ ದೇವರು ಈಶ್ವರ ದೇವರ ಪ್ರತಿರೂಪ. ಪ್ರತಿ ಹಳ್ಳಿಗೂ ಗ್ರಾಮ ದೇವತೆ ಇದ್ದಂತೆ. ಮತ್ತಘಟ್ಟದ ಪ್ರದೇಶದ ಜನನರಿಗೆ ಜಟಗ ದೇವರು ಗ್ರಾಮ ದೇವತೆ ಇದ್ದಂತೆ. ಹಾಗಾಗಿ ಈ ದೇವರನ್ನು ವಿಶೇಷವಾಘಿ ಇಲ್ಲಿಯ ಜನರು ಪೂಜಿಸುತ್ತಾರೆ. ಗ್ರಾಮ ದೇವತೆ ಗ್ರಾಮಕ್ಕೆ ಯಾವುದೇ ತೊಂದರೆ ಭಾರದಂತೆ ಕಾಪಾಡುತ್ತಾಳೆ ಎಂಬ ನಂಬಿಕೆಯಿದೆ. ಅದರಂತೆ ಶಿವನ ಪ್ರತಿರೂಪವಾದ ಜಟಕ ದೇವರು ಕೂಡ ಅಲ್ಲಿನ ಜನರನ್ನು ಮತ್ತು ಊರನ್ನು ಕಾಯುತ್ತಾರೆ ಎಂದು ನಂಬುತ್ತಾ ಬಂದಿದ್ದಾರೆ.

  ಇದನ್ನು ಓದಿ: Gas Leak: ಹನ್ಮಾವು ಕ್ರಾಸ್​ ಸುತ್ತಲಿನ ಮನೆಗಳಲ್ಲಿ ಒಲೆ, ಲೈಟ್ ಹಚ್ಚದಂತೆ ಪೊಲೀಸರ ಮನವಿ; ಕಾರಣ ಇಲ್ಲಿದೆ

  ಹಾಗಾಗಿ ಮತ್ತಿಘಟ್ಟದ ಜನನರು ಈ ದೇವರನನ್ನನು ವಿಶೇಷವಾಗಿ ಪೂಜಿಸುತ್ತಾರೆ. ಅಲ್ಲಿನ ಸುತ್ತಮುತ್ತ ಹಳ್ಳಿಯ ಜನರು ದೇವಸ್ಥಾನದ ರಸ್ತೆಯಲ್ಲಿ ಹಾದುಹೋಗುವಾಗ ಹಾರ್ನ್​ ಮಾಡಿ ಚಲಿಸುವ ದೃಶ್ಯವನ್ನು ಕೂಡ ವೀಕ್ಷಿಸಬಹುದಾಗಿದೆ. ಇನ್ನು ಈ ವಿಶೇಷತೆ ತಿಳಿಯದೇ ಇರುವವರು ಹಾರ್ನ್​ ಮಾಡೇ ಚಲಿಸುವವರು ಕೂಡ ಇದ್ದಾರೆ.

  ಕೃಪೆ: ಮಸಾಲ ಚಾಯ್​ ಮೀಡಿಯಾ  ಆದರೆ ಬಹುತೇಕ ಮಂದಿ ಆ ರಸ್ತೆಯಲ್ಲಿ ಓಡಾಡುವಾಗ ಹಾರ್ನ್​ ಮಾಡಿಕೊಂಡೆ ಚಲಿಸುತ್ತಾರೆ. ಊರಿನ ಜನರು ಕೂಡ ದೇವರನ್ನು ನಂಬುತ್ತಾರೆ. ಸಂಕಷ್ಟ ಬಂದಾಗ ಹರೆ ಕಟ್ಟುತ್ತಾರೆ.
  Published by:Harshith AS
  First published: