HOME » NEWS » State » KARAWAR STUDENTS INVENTED A BATTERY POWERED BICYCLE SESR DKK

ಬ್ಯಾಟರಿ ಚಾಲಿತ ಸೈಕಲ್ ಆವಿಷ್ಕರಿಸಿದ ಕಾರವಾರ ವಿದ್ಯಾರ್ಥಿಗಳು; ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ನಗರದ ನಂದನಗದ್ದಾ ನಿವಾಸಿಗಳಾದ ತನ್ವಿ ಚಿಪ್ಕರ್ ಹಾಗೂ ಕುನಾಲ್ ನಾಯ್ಕ ತಮ್ಮ ಸಾಮಾನ್ಯ ಸೈಕಲ್‌ಗಳನ್ನ ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

news18-kannada
Updated:January 15, 2021, 7:40 AM IST
ಬ್ಯಾಟರಿ ಚಾಲಿತ ಸೈಕಲ್ ಆವಿಷ್ಕರಿಸಿದ ಕಾರವಾರ ವಿದ್ಯಾರ್ಥಿಗಳು; ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಸೈಕಲ್ ಆವಿಷ್ಕಾರಿಸಿದ ವಿದ್ಯಾರ್ಥಿಗಳು
  • Share this:
ಕಾರವಾರ (ಜ. 14): ಲಾಕ್ ಡೌನ್ ಕೆಲವರಿಗೆ ಶಾಪ‌ವಾದರೆ ಕೆಲವರಿಗೆ ಸದುಪಯೋಗದ ಅವಕಾಶ. ಕೆಲವರು ಜೀವನದ ಪಾಠ ಕಲಿತಿದ್ದಾರೆ ಇನ್ನು ಕೆಲವರು ಜೀವನ‌ ಸಾಧನೆಯತ್ತ ಹಾದಿ‌ತುಳಿದಿದ್ದಾರೆ. ಇದೇ ಸಾಲಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ವಿದ್ಯಾರ್ಥಿಗಳಿಬ್ಬರು ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದಾರೆ. ನಗರದ ನಂದನಗದ್ದಾ ನಿವಾಸಿಗಳಾದ ತನ್ವಿ ಚಿಪ್ಕರ್ ಹಾಗೂ ಕುನಾಲ್ ನಾಯ್ಕ ತಮ್ಮ ಸಾಮಾನ್ಯ ಸೈಕಲ್‌ಗಳನ್ನ ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಗರದ ನಂದನಗದ್ದಾ ನಿವಾಸಿಗಳಾದ ತನ್ವಿ ಚಿಪ್ಕರ್ ಹಾಗೂ ಕುನಾಲ್ ನಾಯ್ಕ ತಮ್ಮ ಸಾಮಾನ್ಯ ಸೈಕಲ್‌ಗಳನ್ನ ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಗರದ ಸೇಂಟ್ ಜೋಸೆಫ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿಗಳಿಬ್ಬರೂ ಪ್ರತಿನಿತ್ಯ ಕಾಲೇಜಿಗೆ ಸೈಕಲ್‌ನ್ನ ತುಳಿದುಕೊಂಡೇ ತೆರಳುತ್ತಿದ್ದರು. ಮನೆಯಿಂದ ಸುಮಾರು 6 ಕಿಲೋ ಮೀಟರ್ ದೂರದ ಕಾಲೇಜಿಗೆ ಪ್ರತಿನಿತ್ಯ ಸೈಕಲ್ ತುಳಿಯುವುದು ಬೇಸರ ಮೂಡಿಸಿದ್ದು, ತಮ್ಮ ಸೈಕಲ್‌ನ್ನ ಕೂಡಾ ಬೈಕಿನಂತೆ ಎಕ್ಸಿಲೇಟರ್ ಮೂಲಕ ಓಡಿಸುವ ಯೋಚನೆಯನ್ನ ಮಾಡಿದ್ದರು. ಕೂಡಲೇ ಈ ಕುರಿತು ಇಂಟರ್‌ನೆಟ್‌ನಿಂದ ಮಾಹಿತಿ ಕಲೆಹಾಕಿ, ಬ್ಯಾಟರಿ ಮೂಲಕ ಸೈಕಲ್‌ನ್ನ ಚಲಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸೈಕಲ್‌ನಲ್ಲಿ 12 ವೋಲ್ಟ್‌ನ ಎರಡು ಬ್ಯಾಟರಿಗಳನ್ನ ಅಳವಡಿಸಲಾಗಿದ್ದು, ಇವು 12 ವೋಲ್ಟ್‌ನ ಡಿಸಿ ಮೋಟಾರ್‌ಗೆ ವಿದ್ಯುತ್ ಒದಗಿಸುತ್ತವೆ. ಸೈಕಲ್‌ನ ಹಿಂಬದಿ ಚಕ್ರವನ್ನ ಚೈನ್‌ ಮೂಲಕ ತಿರುಗಿಸುವ ಪ್ರೀವ್ಹೀಲ್ ಪಕ್ಕದಲ್ಲಿಯೇ ಇನ್ನೊಂದು ಪ್ರೀವ್ಙೀಲ್‌ನ್ನ ಅಳವಡಿಸಲಾಗಿದ್ದು, ಅದಕ್ಕೆ ಇನ್ನೊಂದು ಸಣ್ಣ ಚೈನ್ ಮೂಲಕ ಮೋಟಾರ್ ಸಂಪರ್ಕ ನೀಡಲಾಗಿದೆ. ಮೋಟರಿನ ಸ್ವಿಚ್‌ನ್ನ ಬೈಕಿನ ಎಕ್ಸಿಲೇಟರ್ ಮಾದರಿಯಲ್ಲಿ ಸೈಕಲ್‌ನ ಹ್ಯಾಂಡಲ್‌ಗೆ ಜೋಡಿಸಲಾಗಿದ್ದು ಸೈಕಲ್ ಓಡಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಸೈಕಲ್ ವಿಶೇಷತೆ ಏನು?

ಇನ್ನು ಸೈಕಲ್ ವಿಶೇಷತೆ ಹೆಳೋದಾದರೆ ಬ್ಯಾಟರಿಯಿಂದ ಮೋಟರ್‌ ಚಾಲನೆಯನ್ನ ಪ್ರಾರಂಭಿಸಲು ಕೀ ಒಂದನ್ನು ಅಳವಡಿಸಲಾಗಿದ್ದು ಅದನ್ನು ಆನ್ ಮಾಡಿದಾಗ ಮಾತ್ರ ಸೈಕಲ್ ಮೋಟರ್‌ ಸಹಾಯದಿಂದ ಚಲಿಸುತ್ತದೆ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಸೈಕಲ್‌ನಂತೆ ಪೆಡಲ್ ತುಳಿದು ಸಹ ಈ ಸೈಕಲ್‌ನ್ನು ಚಲಾಯಿಸಬಹುದಾಗಿದೆ. ಇನ್ನು ಬ್ಯಾಟರಿಯನ್ನ ತೆಗೆಯದೇ ಸೈಕಲ್‌ನಲ್ಲಿಯೇ ಇರಿಸಿ ಚಾರ್ಜ್ ಮಾಡಬಹುದಾಗಿದ್ದು ಸೈಕಲ್‌ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 3 ರಿಂದ 4 ಗಂಟೆಗಳು ತಗುಲಲಿದ್ದು ಒಮ್ಮೆ ಚಾರ್ಜ್ ಮಾಡಿದಲ್ಲಿ ಸುಮಾರು 25 ರಿಂದ 30 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು ಅಂತಾರೇ ವಿದ್ಯಾರ್ಥಿಗಳು. ಆನ್‌ಲೈನ್‌ನಲ್ಲಿ ಬ್ಯಾಟರಿ ಚಾಲಿತ ಸೈಕಲ್‌ಗಳಿಗೆ 30 ರಿಂದ 50 ಸಾವಿರದವರೆಗೆ ತಗುಲಲಿದ್ದು ವಿದ್ಯಾರ್ಥಿಗಳು ತಯಾರಿಸಿದ ಸೈಕಲ್‌ಗೆ 16 ರಿಂದ 18 ಸಾವಿರ ರೂಪಾಯಿ ವೆಚ್ಚ ತಗುಲಿದ್ದು ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಪೆಟ್ರೋಲ್ ಡೀಸೆಲ್ ದರಗಳು ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಸಹ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳಿಬ್ಬರು ಕಡಿಮೆ ವೆಚ್ಚದಲ್ಲಿ ಸೈಕಲ್‌ನ್ನು ಮೋಟಾರು ಚಾಲಿತವನ್ನಾಗಿ ಪರಿವರ್ತಿಸಿರುವುದು ನಿಜಕ್ಕೂ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.
Published by: Seema R
First published: January 15, 2021, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories