HOME » NEWS » State » KARAWAR KANDLA WALK AT KAALI RIVER OF KARAWAR UTTARA KANNADA DISTRICT DKK LG

Kandla Walk: ಪ್ರವಾಸೋದ್ಯಮ ಉತ್ತೇಜಿಸಲು ಕಾಳಿ‌ ನದಿಯಲ್ಲಿ ಕಾಂಡ್ಲಾ ನಡಿಗೆ

ಸುಮಾರು 240 ಮೀಟರ್ ಉದ್ದದ ಈ ಪಾತ್ ವೇ ಮಾಡಲಾಗಿದ್ದು, ಸುಮಾರು 18 ಲಕ್ಷ ರೂಪಾಯಿ ವೆಚ್ಚವಾಗಿದೆ. ಕಾಳಿ ಮ್ಯಾಂಗ್ರೋಸ್ ಬೋರ್ಡ್ ವಾಕನ್ನ ಕಾರವಾರ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.  ಅರಣ್ಯ ಇಲಾಖೆಯ ಶ್ರಮ ಮತ್ತು ಯೋಜನೆಯಿಂದ ಈ ಅಪರೂಪದ ಯೋಜನೆ ಮಾಡಲಾಗಿದೆ. ಇನ್ಮುಂದೆ ಪ್ರವಾಸಿಗರಿಗೆ ಇಲ್ಲಿಗೆ ಬರಲು ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ದೋಣಿಯ ವ್ಯವಸ್ಥೆ ಮಾಡಲಾಗುತ್ತದೆ.

news18-kannada
Updated:March 23, 2021, 3:40 PM IST
Kandla Walk: ಪ್ರವಾಸೋದ್ಯಮ ಉತ್ತೇಜಿಸಲು ಕಾಳಿ‌ ನದಿಯಲ್ಲಿ ಕಾಂಡ್ಲಾ ನಡಿಗೆ
ಕಾಳಿ ಮ್ಯಾಂಗ್ರೋಸ್ ಬೋರ್ಡ್ ವಾಕ್​
  • Share this:
ಕಾರವಾರ(ಮಾ.23): ನಾವು ಕೆಲವೊಂದು ಅಪರೂಪದ ಸ್ಥಳಗಳನ್ನ  ನೋಡಬೇಕಾದ್ರೆ ಅದೆಷ್ಟೋ ದೂರ ಹೋಗಬೇಕು. ಆದ್ರೆ  ನಮ್ಮ ಸುತ್ತಮುತ್ತಲೇ ಅವೆಲ್ಲಾ ಸಿಕ್ಕಿಬಿಟ್ಟರೆ ಹೊರ ಭಾಗದ ಪ್ರವಾಸಿಗರೂ ಕೂಡ ಇಲ್ಲಿಗೆ ಬರ್ತಾರೆ ಅಲ್ವಾ. ಈ  ಉದ್ದೇಶದಿಂದಲೇ ಅರಣ್ಯ ಇಲಾಖೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾಂಡ್ಲಾ ವನವನ್ನ ಬೆಳೆಸುವ ನಿಟ್ಟಿನಲ್ಲಿ ಮತ್ತು ಅದರ ಜತೆ ಪ್ರವಾಸೋದ್ಯಮ ಅಭಿವೃದ್ದಿಪಡಿಸುವಲ್ಲಿ ಅದ್ಭುತ ಯೋಜನೆಯೊಂದನ್ನ ಮಾಡಿದೆ. ಇಲ್ಲಿ ಬಂದ್ರೆ ನಿಮಗೆ ಹೊಸ ಅನುಭವ ಸಿಗುವುದರ ಜೊತೆಗೆ ಅಧ್ಯಯನಕ್ಕೂ ಯೋಗ್ಯ ಸ್ಥಳ ಕೂಡ ಹೌದು.

ರಾಜ್ಯ ಪ್ರವಾಸೋದ್ಯಮಕ್ಕೆ  ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ  ಕಾಂಡ್ಲಾ ನಡಿಗೆ ವಿಶೇಷ ಯೋಜನೆಯೊಂದನ್ನು ಮಾಡಿದೆ.  ಅಂಡಮಾನ್ ಬಿಟ್ಟರೇ  ಕರ್ನಾಟಕದಲ್ಲಿ ಇದು ಎರಡನೇ ಕಾಂಡ್ಲಾ ನಡಿಗೆ ಯೋಜನೆಯಾಗಿದೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಕಾರವಾರದಲ್ಲಿ ಇರೋದು ವಿಶೇಷವಾಗಿದೆ. ಕಾಳಿ ನದಿಯ  ನಡುವೆ ಇರುವ ಕಾಳಿ ಮಾತಾ ನಡುಗಡ್ಡೆ ಪ್ರದೇಶದಲ್ಲಿ ಹಚ್ಚ ಹಸಿರಾಗಿ ಬೆಳೆದಿರುವ ಕಾಂಡ್ಲಾ  ಸಸ್ಯವನಗಳ ನಡುವೆ ವಾಕಿಂಗ್ ಪಾತ್ ನಿರ್ಮಿಸಲಾಗಿದೆ. ಈ ಪಾತ್ ವೇನಲ್ಲಿ  ವಿಹರಿಸುತ್ತಿದ್ರೆ ಹೊಸ ಅನುಭವ ಸಿಗುತ್ತೆ.



ನಡೆಯುತ್ತಾ ಸಾಗಿದರೆ  ವಿವಿಧ ಜಾತಿಯ ಕಾಂಡ್ಲಾ ವನಗಳ ದರ್ಶನವಾಗುತ್ತೆ. ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳ ಅಧ್ಯಯನಕ್ಕೆ ಅನುಕೂಲ ಆಗಲಿ ಎಂದು ಕ್ಯುಆರ್ ಕೋಡ್​​ಗಳನ್ನು ಬೋರ್ಡ್​​ನಲ್ಲಿ ಹಾಕಲಾಗಿದೆ. ಹೀಗಾಗಿ  ಕಾಂಡ್ಲಾ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಸಹಾಯ ಆಗಲಿದೆ ಅಂತಾರೆ ಅಧಿಕಾರಿಗಳು.

Child Marriage: ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ 297 ಬಾಲ್ಯ ವಿವಾಹ; ಸಚಿವೆ ಶಶಿಕಲಾ ಜೊಲ್ಲೆ

ಸುಮಾರು 240 ಮೀಟರ್ ಉದ್ದದ ಈ ಪಾತ್ ವೇ ಮಾಡಲಾಗಿದ್ದು, ಸುಮಾರು 18 ಲಕ್ಷ ರೂಪಾಯಿ ವೆಚ್ಚವಾಗಿದೆ. ಕಾಳಿ ಮ್ಯಾಂಗ್ರೋಸ್ ಬೋರ್ಡ್ ವಾಕನ್ನ ಕಾರವಾರ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.  ಅರಣ್ಯ ಇಲಾಖೆಯ ಶ್ರಮ ಮತ್ತು ಯೋಜನೆಯಿಂದ ಈ ಅಪರೂಪದ ಯೋಜನೆ ಮಾಡಲಾಗಿದೆ. ಇನ್ಮುಂದೆ ಪ್ರವಾಸಿಗರಿಗೆ ಇಲ್ಲಿಗೆ ಬರಲು ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ದೋಣಿಯ ವ್ಯವಸ್ಥೆ ಮಾಡಲಾಗುತ್ತದೆ.

ಹೊನ್ನಾವರದಲ್ಲಿ ಮಾಡಿದ ಬೋರ್ಡ್ ವಾಕ್ ಕೆಲ ದಿನಗಳಲ್ಲಿ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಹೀಗಾಗಿ ಇನ್ನು ಕೆಲ ದಿನಗಳಲ್ಲಿ ಇಲ್ಲಿಯೂ ಕೂಡ ಪ್ರವಾಸಿಗರ ಕಲರವ ಆರಂಭವಾಗಲಿದೆ ಎಂದು ಅರಣ್ಯಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ಬಂದವರಿಗೆ ಕಾಳಿ ಮಾತೆಯ ದರ್ಶನದ ಜೊತೆಗೆ ಇದನ್ನ ನೋಡಬಹುದಾಗಿದೆ. ಕಾಂಡ್ಲಾ ಗಿಡಗಳು ಜಲಚರಗಳ ಬೆಳವಣಿಗೆ ಮತ್ತು ಮಣ್ಣಿನ ಸವಕಳಿಯನ್ನ ತಡೆಗಟ್ಟಲು ಸಹಾಯವಾಗುತ್ತದೆ. ಹೀಗಾಗಿ ಕಾಂಡ್ಲಾ ಸಸ್ಯಗಳ ಸಂರಕ್ಷಣೆ ಆಗಬೇಕೆಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿರುವ  ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ  ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರುಗು ನೀಡುವ ಯೋಜನೆ ತರುತ್ತಿರುವುದು ಆಶಾದಾಯಕ ಬೆಳವಣಿಗೆ.  ಈ ವಿಶಿಷ್ಟವಾಗಿರುವ ಮ್ಯಾಂಗ್ರೋಸ್ ಬೋರ್ಡ್ ವಾಕ್ ಗೆ ಬರೋದಾದ್ರೆ ನಿಮಗೆ ದೋಣಿಯಲ್ಲಿ ವಿಹಾರ ಮಾಡಿದ ಅನುಭವದ ಜೊತೆಗೆ  ಕಾಂಡ್ಲಾ ಸಸ್ಯಗಳ ಬಗ್ಗೂ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
Published by: Latha CG
First published: March 23, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories