ಡೀಲಿಂಗ್​ಗಳಿಗೆ ಇಳಿದಿದ್ಯಾ ಕರವೇ? ಅನುಮಾನ ಮೂಡಿಸಿದೆ ಮುಖಂಡನೊಬ್ಬನ ಆಡಿಯೋ ಸಂಭಾಷಣೆ

ಕರ್ನಾಟಕ ರಕ್ಷಣಾ ವೇದಿಕೆ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ್ ಎಂಬಾತ ಗಾರ್ಮೆಂಟ್ಸ್​ಗೆ ಸಂಬಂಧಿಸಿದ ವ್ಯವಹಾರದಲ್ಲಿ 45 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

Vijayasarthy SN | news18
Updated:January 11, 2019, 6:31 PM IST
ಡೀಲಿಂಗ್​ಗಳಿಗೆ ಇಳಿದಿದ್ಯಾ ಕರವೇ? ಅನುಮಾನ ಮೂಡಿಸಿದೆ ಮುಖಂಡನೊಬ್ಬನ ಆಡಿಯೋ ಸಂಭಾಷಣೆ
ನಾರಾಯಣ ಗೌಡ
Vijayasarthy SN | news18
Updated: January 11, 2019, 6:31 PM IST
- ಥಾಮಸ್ ಪುಷ್ಪರಾಜ್,

ಬೆಂಗಳೂರು(ಜ. 11): ನಾಡು-ನೆಲ-ಜಲ-ಸಂಸ್ಕೃತಿಗೆ ಧಕ್ಕೆ ಬಂದಾಗ ಧ್ವನಿ ಎತ್ತಲೆಂದು ಇರುವ ಕರ್ನಾಟಕ ರಕ್ಷಣಾ ವೇದಿಕೆಯ ಇತ್ತೀಚಿನ ನಡೆ ನುಡಿ ಬೇರೆಯೇ ಪ್ರಶ್ನೆಗಳನ್ನ ಹುಟ್ಟುಹಾಕುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರ ಬೆಳವಣಿಗೆ ಇತ್ತೀಚೆಗೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡ್ತಿದೆ. ಈ ಅನುಮಾನವನ್ನು ಮತ್ತಷ್ಟು ದಟ್ಟಗೊಳಿಸುವ ಸುದ್ದಿಯೊಂದು ಬಂದಿದೆ. ನಾರಾಯಣ ಗೌಡ್ರ ಹೆಸರನ್ನು ಬಳಸಿಕೊಂಡು ಅವರದೇ ಸಂಘಟನೆಯ ಮುಖಂಡನೊಬ್ಬ ಮಾಡಿರುವ ಡೀಲ್​ನ ವಿಚಾರ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಘಟಕದ ಅಧ್ಯಕ್ಷನಾಗಿರುವ  ಮಂಜುನಾಥ್ ಎಂಬಾತ ತೆಲುಗಿನಲ್ಲಿ ನಡೆಸಿರುವ ಸಂಭಾಷಣೆಯ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಡಿಯೋದಲ್ಲಿ ಆತ ಗಾರ್ಮೆಂಟ್ಸ್ ವ್ಯವಹಾರಕ್ಕೆ ಸಂಬಂಧಪಟ್ಟ ಡೀಲಿಂಗ್ ಬಗ್ಗೆ 45 ಸಾವಿರ ಹಣಕ್ಕೆ ಬೇಡಿಕೆ ಒಡ್ಡುತ್ತಾನೆ. ಬೇಡಿಕೆ ಇಟ್ಟಿದ್ದ ಒಂದೆಡೆಯಾದರೆ, ಆ ಹಣವನ್ನು ನಾರಾಯಣ ಗೌಡರಿಗೆ ಕೊಡಬೇಕು ಎಂಬುದಾಗಿ ಹೇಳಿರುವುದು ನಾರಾಯಣ ಗೌಡರ ಬಗ್ಗೆ ಶಂಕೆ ಮೂಡುವಂತೆ ಮಾಡಿದೆ.

ಇದನ್ನೂ ಓದಿ: ಅನ್ವರ್ ಕೊಲೆಯಾಗಿ 200 ದಿನವಾದ್ರೂ ಆರೋಪಿಗಳ ಸುಳಿವಿಲ್ಲ – ಪ್ರಧಾನಿ ಸೇರಿ ಹಲವರಿಗೆ ಪತ್ರ ಬರೆದ ಬಿಜೆಪಿ ಮುಖಂಡನ ಸೋದರ

ಕರವೇ ಸಂಘಟನೆಯ ಕೆಲವು ಮುಖಂಡರು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಟ್ಟುವ ಕೆಲಸಗಳಿಗಿಂತ ಲ್ಯಾಂಡ್ ಡೀಲಿಂಗ್, ಸಿವಿಲ್ ಡಿಸ್​ಪ್ಯೂಟ್​ನಂಥ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಕೊಂಡಿರುವ ಬಗ್ಗೆ ದೂರು ಕೇಳಿ ಬಂದಿದ್ದರೂ ಅದಕ್ಕೆ ಸ್ಪಷ್ಟತೆ ಇರಲಿಲ್ಲ. ಆದ್ರೆ ಈ ಆಡಿಯೋದಲ್ಲಿ ಕರವೇ ಮುಖಂಡನೊಬ್ಬ ಡೀಲಿಂಗ್ ಮಾಡಿಸಿದ್ದಕ್ಕೆ ಪ್ರತಿಯಾಗಿ 45 ಸಾವಿರ ಹಣವನ್ನು ನಾರಾಯಣ ಗೌಡ ಕೇಳುತ್ತಿದ್ದಾರೆ ಎಂದು ಉಲ್ಲೇಖಿಸಿರುವುದು ಆಶ್ಚರ್ಯ ಉಂಟುಮಾಡಿದೆ. ನಾರಾಯಣ ಗೌಡ ಅವರು ಈ ಕೃತ್ಯದಲ್ಲಿ ನಿಜವಾಗಲೂ ಭಾಗಿಯಾಗಿದ್ದಾರೋ ಅಥವಾ ನಾರಾಯಣ ಗೌಡ್ರ ಹೆಸರನ್ನು ಅವರದೇ ಸಂಘಟನೆ ಮುಖಂಡರು ದುರ್ಬಳಕೆ ಮಾಡಿಕೊಳ್ತಿದ್ದಾರೋ ಗೊತ್ತಾಗ್ತಿಲ್ಲ. ಒಂದ್ವೇಳೆ  ನಾರಾಯಣ ಗೌಡರು ಈ ಡೀಲಿಂಗ್ ನಲ್ಲಿ ಭಾಗಿಯಾಗಿದ್ದರೆ ಅದಕ್ಕಿಂತ ಅವಮಾನಕರ ಸಂಗತಿ ಇನ್ನೊಂದಿಲ್ಲ. ಅಥವಾ ಅವರ ಹೆಸ್ರನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಎಂದ್ರೆ ಅಂಥವರಿಂದ ಗೌಡರು ಅಂತರ ಕಾಯ್ದುಕೊಳ್ಳೋದು ಸೂಕ್ತ ಎನಿಸ್ತದೆ.

ಇದನ್ನೂ ಓದಿ: ಉಡುಪಿಯಲ್ಲೂ ಮಂಗನ ಕಾಯಿಲೆ ಭೀತಿ; ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಣೆ

ನಾರಾಯಣಗೌಡ್ರ ಹೆಸರನ್ನು ಬಳಸಿ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ನಡೆಸಿರುವ ಆಡಿಯೋ ನ್ಯೂಸ್18 ಕನ್ನಡಕ್ಕೆ ಲಭ್ಯವಾಗಿದೆ. ಒಟ್ಟಾರೆ ಘಟನೆ ಬಗ್ಗೆ ಕನ್ನಡ ಪರ ಸಂಘಟನೆಗಳು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿವೆ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...