ವೈದ್ಯರ ಪ್ರತಿಭಟನೆ ಕಾವು: ಚಿಕಿತ್ಸೆಗಾಗಿ ರೋಗಿಗಳು ನರಳಾಟ; ಪೊಲೀಸರಿಗೆ ಶರಣಾಗಲು ಕರವೇ ನಿರ್ಧಾರ

ಕಳೆದ ಒಂದು ವಾರದಿಂದ ಕಿರಿಯ ವೈದ್ಯರ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ಘೋಷಿಸಿವೆ.

news18-kannada
Updated:November 8, 2019, 3:02 PM IST
ವೈದ್ಯರ ಪ್ರತಿಭಟನೆ ಕಾವು: ಚಿಕಿತ್ಸೆಗಾಗಿ ರೋಗಿಗಳು ನರಳಾಟ; ಪೊಲೀಸರಿಗೆ ಶರಣಾಗಲು ಕರವೇ ನಿರ್ಧಾರ
ಕರವೇ ಅಧ್ಯಕ್ಷ ನಾರಾಯಣಗೌಡ
  • Share this:
ಬೆಂಗಳೂರು(ನ.08): ಮಿಂಟೊ ಆಸ್ಪತ್ರೆ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎನ್ನಲಾದ ಪ್ರಕರಣ ತಾರಕಕ್ಕೇರಿದೆ. ತಮ್ಮ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ(ಇಂದು) ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ(ಒಪಿಡಿ) ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ವೈದ್ಯರ ಪ್ರತಿಭಟನೆಯೂ 7ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ರೋಗಿಗಳ ಹಿತಕ್ಕಾಗಿ ಪೊಲೀಸರ ಮುಂದೆ ಕರವೇ ಕಾರ್ಯಕರ್ತರು ಶರಣಾಗಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನ್ಯೂಸ್​​-18 ಕನ್ನಡಕ್ಕೆ ತಿಳಿದು ಬಂದಿದೆ.

ಹೌದು, ಹೊರರೋಗಿಳ ವಿಭಾಗ ಬಂದ್​ ಮಾಡಿ ವೈದ್ಯರು ಪ್ರತಿಭಟನೆ ತೀವ್ರಗೊಳಿಸಿದ ಬೆನ್ನಲ್ಲೇ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಖುದ್ದು ನ್ಯೂಸ್​​-18 ಕನ್ನಡ ಜತೆ ಮಾತಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು, ನಮ್ಮಿಂದ ಬಡ ರೋಗಿಗಳಿಗೆ ತೊಂದರೆಯಾಗಬಾರದು. ಕರವೇ ಕಾರ್ಯಕರ್ತರು ಜನರ ಹಿತಕ್ಕಾಗಿ ಪೊಲೀಸರಿಗೆ ಶರಣಾಗಲು ತೀರ್ಮಾನ ಮಾಡಿದ್ದೇವೆ. ಅಶ್ವಿನಿ ಗೌಡ ಸೇರಿದಂತೆ ಸುಮಾರು 25 ಜನ‌ ಕರವೇ ಕಾರ್ಯಕರ್ತರು ಬೆಂಗಳೂರು ಪೊಲೀಸ್​​ ಆಯುಕ್ತರ ಮುಂದೆ ಶರಣಾಗಲಿದ್ದೇವೆ ಎಂದು ಹೇಳಿದ್ದಾರೆ.

ವೈದ್ಯರ ಮುಷ್ಕರಕ್ಕೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ವೈದ್ಯರ ಮುಷ್ಕರದಿಂದ ಅನಗತ್ಯವಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ನಾವು ಮಾನವೀಯ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಮಿಂಟೋ ವೈದ್ಯರ ಪ್ರತಿಭಟನೆ; ಇಂದು ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್

ಇನ್ನು ನನ್ನನ್ನು ಯಾಕೇ ಟಾರ್ಗೆಟ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾವು ಬಡವರ ಪರ ಸದಾ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾಳೆ ವೈದ್ಯರ ಮುಷ್ಕರಕ್ಕೆ ಹೆದರಿ ನಾವು ಶರಣಾಗುತ್ತಿಲ್ಲ. ಬಡವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಶರಣಾಗುತ್ತಿದ್ದೇವೆ. ನಾವು ಬಂಧನವಾದರೂ ಬಡವರ ಪರ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದು ವೈದ್ಯರು ಕರವೇ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದಾರೆ. ಹಿರಿಯ ವೈದ್ಯ ಡಾ. ಎಚ್. ಎಸ್. ಸತೀಶ್ ನೀಡಿದ ದೂರಿನ ಆಧಾರದ ಮೇರೆಗೆ ವಿ.ವಿ ಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುಮಾರು 35 ಕರವೇ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಮುಷ್ಕರ ನಿರತ ವೈದ್ಯರ ವಿರುದ್ಧ ಬೀದಿಗಿಳಿದ ಕರವೇ: ಇಂದು ರಾಜ್ಯಾದ್ಯಂತ ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟಕಳೆದ ಒಂದು ವಾರದಿಂದ ಕಿರಿಯ ವೈದ್ಯರ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ಘೋಷಿಸಿವೆ. ರಾಜ್ಯಾದ್ಯಂತ ಇಂದು ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಸೇವೆಯೂ ಬಂದ್ ಮಾಡಿ ಪ್ರತಿಭಟಿಸಲು ವೈದ್ಯರು ತೀರ್ಮಾನಿಸಿದ್ದಾರೆ.
---------
First published: November 8, 2019, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading