ವೈದ್ಯರ ಮೇಲೆ ಹಲ್ಲೆ: ಕರವೇ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

ಹಲ್ಲೆ ಪ್ರಕರಣದ ಆರೋಪಿತ ಅಶ್ವಿನಿ ಗೌಡ ಸೇರಿ 15 ಕರವೇ ಕಾರ್ಯಕರ್ತರಾದ ರಮಾದೇವಿ, ಗಾಯತ್ರಿ, ಶಶಿಕಲಾ, ವಿನೋದ್, ಮನುಗೌಡ, ಮಧುಸೂದನ್, ಲೋಕೇಶ್, ವಿಶಾಲ್, ಕಿರಣ್, ಮಧಸೂದನ್ ಯಾದವ್ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. 

Seema.R | news18-kannada
Updated:November 8, 2019, 1:41 PM IST
ವೈದ್ಯರ ಮೇಲೆ ಹಲ್ಲೆ: ಕರವೇ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು
ಕರವೇ ಅಧ್ಯಕ್ಷ ಕರವೇ ಅಧ್ಯಕ್ಷ
  • Share this:
ಬೆಂಗಳೂರು (ನ.08): ಮಿಂಟೋ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಕರವೇ ಕಾರ್ಯಕರ್ತರು ಇಂದು ಡಿಸಿಪಿ ಕಚೇರಿಗೆ ಹಾಜರಾಗಿ ಶರಣಾಗಿದ್ದಾರೆ. ಕಾರ್ಯಕರ್ತರ ಶರಣಾಗತಿ ಬಳಿಕ ಅವರನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದು, ಇಂದು ಮಧ್ಯಾಹ್ನ 3ಗಂಟೆಗೆ ಅವರನ್ನು ಕೋರ್ಟ್​ಗೆ ಹಾಜರುಪಡಿಸಲಾಗುವುದು.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂದು ರಾಜ್ಯಾದ್ಯಾಂತ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಮುಷ್ಕರ ನಡೆಸಿದ್ದು, ರೋಗಿಗಳು ಪರದಾಡುವಂತೆ ಆಗಿದೆ. ವೈದ್ಯರ ಪ್ರತಿಭಟನೆ ಹಿನ್ನೆಲೆ ರೋಗಿಗಳ ಹಿತಾಸಕ್ತಿಯಿಂದ ಕರವೇ ಕಾರ್ಯಕರ್ತರು ಬಂಧನವಾಗಲು ನಿರ್ಧರಿಸಿದ್ದರು.

ashwini-gowda
ಶರಣಾದ ಕರವೇ ಮಹಿಳಾ ಅಧ್ಯಕ್ಷೆ ಅಶ್ಚಿನಿ ಗೌಡ


ಹಲ್ಲೆ ಪ್ರಕರಣದ ಆರೋಪಿತ ಅಶ್ವಿನಿ ಗೌಡ ಸೇರಿ 15 ಕರವೇ ಕಾರ್ಯಕರ್ತರಾದ ರಮಾದೇವಿ, ಗಾಯತ್ರಿ, ಶಶಿಕಲಾ, ವಿನೋದ್, ಮನುಗೌಡ, ಮಧುಸೂದನ್, ಲೋಕೇಶ್, ವಿಶಾಲ್, ಕಿರಣ್, ಮಧಸೂದನ್ ಯಾದವ್ ಮೇಲೆ ಜಾಮೀನು ರಹಿತ ಪ್ರಕರಣ ಅಡಿ ಬಂಧಿಸಲಾಗಿದೆ.

ಇದನ್ನು ಓದಿ: ಅನರ್ಹ ಶಾಸಕರಿಗೆ ಹಿನ್ನೆಡೆ: ಉಪಚುನಾವಣೆ ಮುಂದೂಡುವಂತೆ ಆಯೋಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ

ಡಿಸಿಪಿ ಕಚೇರಿಯಿಂದ ಆರೋಪಿಗಳನನ್ನು ವಿವಿ ಪುರಂ ಠಾಣೆಗೆ ಕರೆತರಲಾಗಿದ್ದು, ಬಂಧನ ಪ್ರಕ್ರಿಯೆ ಮುಂದುವರೆದಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಪೊಲೀಸರನ್ನು ಒಳಪಡಿಸಲಾಗಿದ್ದು, 11 ಕಾರ್ಯಕರ್ತರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧಿತ ಕಾರ್ಯಕರ್ತರನ್ನು ಮಧ್ಯಾಹ್ನ 3ಗಂಟೆಗೆ ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

First published: November 8, 2019, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading