ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಸರ್ಕಾರಿ ಜಾಗ ಅತಿಕ್ರಮಣ ಆರೋಪ ಮಾಡಿದ ಕರವೇ

ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿರುವ ಶಾಸಕರನ್ನು ತಕ್ಷಣವೇ ಶಾಸಕ ಸ್ಥಾನವನ್ನು ಸ್ಪೀಕರ್ ಅನರ್ಹಗೊಳಿಸಬೇಕು. ಅತಿಕ್ರಮಣ ಜಾಗದಲ್ಲಿರುವ ಕಾಲೇಜು ಕಟ್ಟಡ ತೆರವುಗೊಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಆಗ್ರಹಿಸಿದ್ದಾರೆ.

ಶಾಸಕ ವೀರಣ್ಣ ಚರಂತಿಮಠ

ಶಾಸಕ ವೀರಣ್ಣ ಚರಂತಿಮಠ

  • Share this:
ಬಾಗಲಕೋಟೆ (ಸೆಪ್ಟೆಂಬರ್ 29) : ಬಾಗಲಕೋಟೆ ಬಿಜೆಪಿ ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ವಿರುದ್ಧ ಸರ್ಕಾರಿ ಜಾಗ ಅತಿಕ್ರಮಣ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ಆರೋಪ ಮಾಡಿದೆ. ಚರಂತಿಮಠ ಅಧ್ಯಕ್ಷತೆಯಲ್ಲಿ ಮಾ ಶ್ರೀ ವಿಜಯ ಮಹಾಂತೇಶ ಶಿಕ್ಷಣ ಸಂಸ್ಥೆ ನಡೆಯುತ್ತಿದ್ದು ಈ ಸಂಸ್ಥೆ ಸರ್ಕಾರಿ ಜಾಗವನ್ನು ಅತಿಕ್ರಮಿಸಿದೆ ಎಂದು ಹುನಗುಂದ ಕರ್ನಾಟಕ ರಕ್ಷಣ ವೇದಿಕೆ ಆರೋಪಿಸಿದ್ದು, ಈ ಸಂಬಂಧ ತಹಶೀಲ್ದಾರ್​ಗೂ ದೂರು ನೀಡಿದ್ದಾರೆ. 

ಏನಿದು ಆರೋಪ?: 

ಸಂಸ್ಥೆಯ ಜಾಗಕ್ಕೆ ಹೊಂದಿಕೊಂಡಂತೆ ಲೋಕೋಪಯೋಗಿ ಇಲಾಖೆಗೆ ಸೇರಿದ ಸರ್ವೇ ನಂಬರ್ 162ರಲ್ಲಿ 3ಎಕರೆ 18ಗುಂಟೆ ಹಾಗೂ 220 ಸರ್ವೇ ನಂಬರ್ ದಲ್ಲಿ 22ಗುಂಟೆಯಲ್ಲಿ ಮರಳು ಗಣಿಗಾರಿಕೆಗೆ ಜಾಗ ಮೀಸಲಿದೆ. ಆದರೆ ಶಾಸಕರ ಶಿಕ್ಷಣ ಸಂಸ್ಥೆ ಇದನ್ನು ಅತಿ ಕ್ರಮಿಸಿದೆ.   1983ರಲ್ಲಿ ಸಿ ವಿ ಚರಂತಿಮಠ ರೂರಲ್ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವನ್ನು ಸರ್ಕಾರಿ ಜಾಗದಲ್ಲಿ ಅತಿಕ್ರಮಿಸಿ ಕಟ್ಟಿದ್ದಾರೆ. ತಹಶೀಲ್ದಾರ್,ಕಂದಾಯ ಅಧಿಕಾರಿಗಳು,ಮೋಜಿನಿ ಮಾಡಿ, ಲೋಕೋಪಯೋಗಿ ಇಲಾಖೆ ಜಾಗದಲ್ಲಿ 4ಎಕರೆ ಪೈಕಿ 1ಎಕರೆ 20ಗುಂಟೆ ಅತಿಕ್ರಮಣವಾಗಿರುವುದು ಸಾಬೀತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಹಕ್ಕಿನಡಿ ದಾಖಲಾತಿ ಮಾಹಿತಿ ಕೇಳಿದರೆ ಕೊಡುತ್ತಿಲ್ಲ ಎನ್ನುತ್ತಾರೆ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್.ಇದಲ್ಲದೇ  2020 ಫೆಬ್ರವರಿ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 4ಎಕರೆ ಜಾಗವನ್ನು ನಮ್ಮ ಸಂಸ್ಥೆಗೆ ಲೀಜ್ ಕೊಡಬೇಕೆಂದು ಲೋಕೋಪಯೋಗಿ ಸಚಿವ ಡಿಸಿಎಂ ಗೋವಿಂದ ಕಾರಜೋಳಗೆ ಪತ್ರ ಬರೆದು, ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಶಾಸಕರ ಪತ್ರದ ಉಲ್ಲೇಖದನ್ವಯ ಇಲಾಖೆ ಅಧಿಕಾರಿಗಳು ಲೀಜ್ ಮೌಲ್ಯಮಾಪನ ಮಾಡಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಸರ್ವೆ ನಂಬರ್ 162ಬಿ 3ಎಕರೆ 18ಗುಂಟೆ,ಹಾಗೂ ಸರ್ವೇ ನಂಬರ್ 220, ಇದರ ಕ್ಷೇತ್ರ 0.22ಗುಂಟೆ ಜಾಗ ಖಾಸಗಿ ಸಂಸ್ಥೆಗೆ ಜಾಗ ಬಿಟ್ಟು ಕೊಡಲು ಲೋಕೋಪಯೋಗಿ ಸಂಹಿತೆಯಲ್ಲಿ ಅವಕಾಶ ಇರುವುದಿಲ್ಲ.ಆದ್ಯಾಗೂ ಕೂಡಾ ಸರ್ಕಾರಿ ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದ್ದರಿಂದ ಲೀಜ್ ಗೆ ಕೊಡಬಹುದು ಎಂದು ಲೀಜ್ ಮೊತ್ತ ,5 ಲಕ್ಷ 88ಸಾವಿರ ಹಣ ನಮೂದಿಸಿ, 20ವರ್ಷದ ಲೀಜ್ ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಸಿಎಂ ಯಡಿಯೂರಪ್ಪ ಮಂಡ್ಯದಿಂದ ಶಿವಮೊಗ್ಗಕ್ಕೆ ನಿಂಬೆಹಣ್ಣು ಮಾರುವುದಕ್ಕೆ ಬಂದವರು ; ಬೇಳೂರು ಗೋಪಾಲಕೃಷ್ಣ

ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿರುವ ಶಾಸಕರನ್ನು ತಕ್ಷಣವೇ ಶಾಸಕ ಸ್ಥಾನವನ್ನು ಸ್ಪೀಕರ್ ಅನರ್ಹಗೊಳಿಸಬೇಕು. ಅತಿಕ್ರಮಣ ಜಾಗದಲ್ಲಿರುವ ಕಾಲೇಜು ಕಟ್ಟಡ ತೆರವುಗೊಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಆಗ್ರಹಿಸಿದ್ದಾರೆ.

ಗಂಭೀರ ಆರೋಪದ ಬಗ್ಗೆ ಖುದ್ದು ಭೇಟಿನೀಡಿದಾಗ ನ್ಯೂಸ್ 18 ಗೆ ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯೆಗೆ ನಿರಾಕರಿಸಿದರು.ಇನ್ನು ಬಾಗಲಕೋಟೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಪ್ರಶಾಂತ್ ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ನಾನು ಬೆಳಗಾವಿಗೆ ಹೊರಟಿದ್ದೇನೆ ಎಂದು ಜಾರಿಕೊಂಡರು.

ಒಟ್ಟಿನಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಸರ್ಕಾರಿ ಜಾಗ ಅತಿಕ್ರಮಣದ ಗಂಭೀರ ಆರೋಪ ಕೇಳಿಬಂದಿದ್ದು, ಅತಿಕ್ರಮಣದ ಪ್ರಕರಣ ಸರ್ಕಾರ ತನಿಖೆ ನಡೆಯಿಸಿ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ.
Published by:Seema R
First published: