Koppal: ಮಕ್ಕಳ ಗುಪ್ತಾಂಗ ಮುಟ್ಟುತ್ತಿದ್ದ ಶಿಕ್ಷಕ ಪೊಲೀಸರ ವಶಕ್ಕೆ; ವರ್ಷದ ಹಿಂದೆಯೇ ದೂರು ನೀಡಿದ್ದ ಪತ್ನಿ

ಅಜರುದ್ದಿನ್ 2019 ರಲ್ಲಿ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಸಲ್ಮಾಬೇಗಂ ದೂರು ದಾಖಲಿಸಿದ್ದರು. ಆದ್ರೆ ಇಲಾಖೆ ಮಾತ್ರ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಂಡಿರಲಿಲ್ಲ.

ಶಿಕ್ಷಕ

ಶಿಕ್ಷಕ

  • Share this:
ಪಾಠದ ನೆಪದಲ್ಲಿ ಮಕ್ಕಳನ್ನು (Children) ಸಂಜೆ ಕ್ಲಾಸ್ ಗೆ (Evening Class) ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ (Teacher) ಮಹಮ್ಮದ್ ಅಜರುದ್ಧಿನ್ ನನ್ನು ಧಾರವಾಡ (Dharwad) ಜಿಲ್ಲೆಯಲ್ಲಿ ಪೊಲೀಸರು (Police) ಬಂಧಿಸಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಮಕ್ಕಳ ತಾಯಂದಿರಿಗೆ ಸರ್ಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿ ಅವರ ಜೊತೆ ದೈಹಿಕ ಸಂಪರ್ಕ (Relationship) ಹೊಂದಿದ್ದನು. ಮಕ್ಕಳ ಜೊತೆಗ ಅಸಭ್ಯವಾಗಿ ವರ್ತನೆ ಮತ್ತು ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳು ವೈರಲ್ (Viral Video) ಆಗಿದ್ದವು. ಇತ್ತ ಸಂತ್ರಸ್ತೆ ತನಗಾದ ಮೋಸದ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ (Karatagi Police Station) ದೂರು ಸಹ ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಶಿಕ್ಷಕ ಮಹಮದ್ ಅಜರುದ್ಧಿನ್ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು.

ಸದ್ಯ ಧಾರವಾಡ ಪೊಲೀಸರ ವಶದಲ್ಲಿರುವ ಶಿಕ್ಷಕನನ್ನು ಕಾರಟಗಿ ಪೊಲೀಸ್ ಠಾಣೆಗೆ ಕರೆತರುವ ಸಾಧ್ಯತೆಗಳಿವೆ. ಕಳೆದ ಎರಡು ದಿನಗಳಿಂದ ಇತನ ಕರ್ಮಕಾಂಡದ ವಿಡಿಯೀ ಗಳು ಸೋಶಿಯಲ್ ಮೀಡಿಯಾದಲ್ಲಿ ವೈ ರಲ್ ಆಗಿವೆ.

ವರ್ಷದ ಹಿಂದೆ ದಾಖಲಾಗಿತ್ತು ದೂರು

ವಿಕೃತಕಾಮಿ ಶಿಕ್ಷಕನ ವಿರುದ್ದ ಪತ್ನಿ ಸಲ್ಮಾ ಬೇಗ ವರ್ಷ ಹಿಂದೆಯೇ ಬಿಇಓ (ಶಿಕ್ಷಣಾಧಿಕಾರಿ) ಗೆ ದೂರು ಸಲ್ಲಿಸಿದ್ದರು. ನಾನು ಮನೆಯಲ್ಲಿರುವಾಗಲೇ ವಿವಾಹಿತ, ವಿಧವೆಯರನ್ನು ಕರೆದುಕೊಂಡು ಬರುತ್ತಿದ್ದನು. ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದನು. ಈ ಸಮಯದಲ್ಲಿ ಬೇರೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುತ್ತಿದ್ದ.

ಇದನ್ನೂ ಓದಿ:  Belagavi News: ವಿಶೇಷ ಚೇತನ ಅಭ್ಯರ್ಥಿಗಳೇ, ಸ್ವಯಂ ಉದ್ಯೋಗ ಆರಂಭಿಸಿ, ಈ ಯೋಜನೆಗೆ ಅರ್ಜಿ ಹಾಕಿ

ಇದನ್ನು ಪ್ರಶ್ನಿಸಿದ್ದ ನನಗೆ ಹಿಂಸೆ ಮಾಡುತ್ತಿದ್ದನು. ವಿಕೃತ ಮನಸ್ಸಿನ ಮಹಮದ್ ಅಜರುದ್ದಿನ್ 2019 ರಲ್ಲಿ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಸಲ್ಮಾಬೇಗಂ ದೂರು ದಾಖಲಿಸಿದ್ದರು. ಆದ್ರೆ ಇಲಾಖೆ ಮಾತ್ರ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಂಡಿರಲಿಲ್ಲ.

ಶಿಕ್ಷಕ ಅಮಾನತು

ಮಹಮ್ಮದ್ ಅಜರುದ್ದೀನ್ ಅಮಾನತುಗೊಂಡಿರುವ ಶಿಕ್ಷಕ. ಮಹಮ್ಮದ್ ಅಜರುದ್ಧೀನ್ ಸಿಂಧನೂರು (Sindhanuru) ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿಕೊಂಡು, ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, Koppal) ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಸಂಜೆ ಕ್ಲಾಸ್ ನೆಪದಲ್ಲಿ ಮಕ್ಕಳ ಅಂಗಾಂಗ ಮುಟ್ಟಿ ಶಿಕ್ಷಕ ಅಜರುದ್ದೀನ್ ಪಾಠ ಮಾಡುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಸಂತ್ರಸ್ತೆ ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕ ನಮ್ಮ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದು, ನನಗೆ ಸರಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿದ್ದನು. ಅದೇ ಮಗಳಿಗೆ ಪಾಠ ಹೇಳುತ್ತೇನೆ ಅಂತ ನಂಬಿಸಿದ್ದನು. ಮಗಳಿಗೆ ಪಾಠ ಹೇಳಿ ಕೊಡುವ ನೆಪದಲ್ಲಿ ಮನವೊಲಿಸಿ ನನ್ನ ಸಂಭೋಗ ಮಾಡಿದ್ದಾನೆ.

ಇದನ್ನೂ ಓದಿ:  Kolara: ರಾಹುಲ್ ಗಾಂಧಿ ಪ್ರಚಾರ ಮಾಡಿದ್ರು, ರಮೇಶ್‌ ಕುಮಾರ್ ಸೋಲು ಖಚಿತ ಎಂದ KH ಮುನಿಯಪ್ಪ

ನಂತರ ಈ ವಿಡಿಯೋವನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿ ಮಾನಸಿಕ ಹಿಂದೆ ನೀಡಿರುತ್ತಾನೆ. ಆತನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಕೊಲೆ ಮಾಡೋದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾಲೆಯ ಮುಖ್ಯ ಗುರುಗಳಿಂದ ಸ್ಫೋಟಕ ಮಾಹಿತಿ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಮ್ಮದ್ ಅಜರುದ್ಧೀನ್ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ನ್ಯೂಸ್ 18 ಜೊತೆ ಮಾತನಾಡಿದ್ದಾರೆ. ಶಿಕ್ಷಕ‌ ಅಜರುದ್ದೀನ್ ಹಿಂದೆ ಮುಸ್ಲಿಂ ಸಮುದಾಯ ಆತನ ಜೊತೆಯಲ್ಲಿದೆ. ಅಜರುದ್ದೀನ್ ಅಮಾನತು ಎಂದಾಕ್ಷಣ ಶಾಲೆಗೆ ಬಂದು ಮುಸ್ಲಿಂ ಯುವಕರು ಮುತ್ತಿಗೆ ಹಾಕಿದ್ದರು. ಗ್ರಾಮದಲ್ಲಿ ಸುಮಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ ಎಂಬ ಮಾಹಿತಿಯನ್ನು ಶಿಕ್ಷಕ ಶರಣಪ್ಪ ಹೇಳುತ್ತಾರೆ.
Published by:Mahmadrafik K
First published: