ಹಸಿರಿನಿಂದ ಕಂಗೊಳಿಸುತ್ತಿದೆ ಸಸ್ಯ ಕಾಶಿ ಕಪ್ಪತಗುಡ್ಡ; ಬರದ ನಾಡಿನಲ್ಲಿ ಮಲೆನಾಡಿನ ವೈಭವ

483ಕ್ಕೂ ಹೆಚ್ಚು ಔಷಧಿ ಸಸ್ಯರಾಶಿಯೂ ಇಲ್ಲಿದೆ. ಅಷ್ಟೇ ಅಲ್ಲ ಕಪ್ಪತಗುಡ್ಡದ ಮಣ್ಣೂ ಸಹ ಔಷಧಿಯ ಗುಣ ಹೊಂದಿದೆ. ಇಲ್ಲಿನ ಪ್ರತಿ ಹುಲ್ಲು ಕಡ್ಡಿಯೂ ಸಹ ತನ್ನದೇ ಮಹತ್ವದ ಔಷಧಿಯ ಗುಣದಿಂದ ವೈದ್ಯವನ್ನರಸಿ ಬರುವ ಅನಾರೋಗ್ಯ ಪೀಡಿತರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ.

news18-kannada
Updated:September 23, 2020, 10:56 AM IST
ಹಸಿರಿನಿಂದ ಕಂಗೊಳಿಸುತ್ತಿದೆ ಸಸ್ಯ ಕಾಶಿ ಕಪ್ಪತಗುಡ್ಡ; ಬರದ ನಾಡಿನಲ್ಲಿ ಮಲೆನಾಡಿನ ವೈಭವ
ಕಪ್ಪತಗುಡ್ಡ
  • Share this:
ಗದಗ(ಸೆ.23): ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಹೆಸರಾಗಿರೋ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡವೀಗ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೆಳ್ಳಂಬೆಳಗ್ಗೆಯೇ ಕಪ್ಪತಗುಡ್ಡಕ್ಕೆ ಮುತ್ತಿಡುವ ಮೋಡಗಳ ಸಾಲು, ಮೋಡಗಳ ನಡುನಡುವೆ ಇಣುಕಿ ನೋಡುವ ಹಸಿರ ಗುಡ್ಡ. ಅಬ್ಬಾ ಎಂಥಾ ಸೌಂದರ್ಯ. ಹೌದು, ಇದು ಗದಗ  ಜಿಲ್ಲೆಯ ಕಪ್ಪತಗುಡ್ಡದ ಸೌಂದರ್ಯದ ಸೊಬಗು. ಗದಗ ಜಿಲ್ಲೆಯ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಸುಮಾರು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೈಚಾಚಿಕೊಂಡಿರುವ ಕಪ್ಪತಗುಡ್ಡದ ಸೌಂದರ್ಯವೀಗ ಮಳೆಯಿಂದಾಗಿ ಅಂದ ಹೆಚ್ಚಿಸಿಕೊಂಡಿದೆ. ಕಪ್ಪತ್ತಗುಡ್ಡದಲ್ಲಿ ಎತ್ತ ನೋಡಿದರೂ, ಬೆಳ್ಳಗಿನ ಮೋಡಗಳು ಗುಡ್ಡವನ್ನು ಆವರಿಸಿಕೊಂಡಿರುವ ರಮಣೀಯ ದೃಶ್ಯಗಳೇ ಕಣ್ಣಿಗೆ ರಾಚುತ್ತವೆ. ಮಳೆಯಿಂದಾಗಿ ಉಂಟಾದ ತಂಪಾದ ವಾತಾವರಣದಲ್ಲಿ ಮೋಡದ ಮರೆಯಲ್ಲಿ ಮಾಯವಾಗಿದ್ದೇವೇನೋ ಎನ್ನುವ ಅನುಭವಾಗುತ್ತದೆ.

ಈ ಬಗ್ಗೆ ಪ್ರವಾಸಿಗರು ಹೇಳೋದು ಹೀಗೆ. ಸುಂದರವಾಗಿ ಮೈತೆಳೆದು ನಿಂತಿರೋ ಕಪ್ಪತಗುಡ್ಡ ತನ್ನೊಡಲಲ್ಲಿ ನೈಸರ್ಗಿಕವಾಗಿಯೇ ಬೆಳೆದಿರೋ ಔಷಧೀಯ ಸಸ್ಯಗಳನ್ನು ಇಟ್ಟುಕೊಂಡಿದೆ. ಅಲ್ಲದೆ ಸೀಸ, ಮ್ಯಾಂಗನೀಸ್, ಕಬ್ಬಿಣ, ಬಂಗಾರ ಹೀಗೆ ಒಂದಲ್ಲ ಎರಡಲ್ಲ 18 ಬಗೆಯ ಖನಿಜಗಳು ಕಪ್ಪತಗುಡ್ಡದ ಗರ್ಭದಲ್ಲಿದೆ. ಇಲ್ಲಿ ದೊರೆಯೋ ಬಾರಿ ಹಣ್ಣು, ನೆಲ್ಲಿಕಾಯಿ, ಊಟದ ಎಲೆ, ಬಿಕ್ಕಿ ಹಣ್ಣು, ಪೇರಲ, ಪೂಜೆಗಾಗಿ ಲೋಬಾನ, ಬೆತ್ತ, ಹಾಗೂ ಜೇನು ತುಪ್ಪ ಇತರೆ ದೈನಂದಿನ ವಸ್ತುಗಳನ್ನು ಇಲ್ಲಿನ ಜನರು ದಿನನಿತ್ಯದ ಬಳಕೆಗಾಗಿ ಉಪಯೋಗಿಸುತ್ತಿದ್ದಾರೆ.

Coronavirus India Updates: ಭಾರತದಲ್ಲಿ 56 ಲಕ್ಷ ದಾಟಿದ ಕೊರೋನಾ‌ ಸೋಂಕಿತರ ಸಂಖ್ಯೆ

483ಕ್ಕೂ ಹೆಚ್ಚು ಔಷಧಿ ಸಸ್ಯರಾಶಿಯೂ ಇಲ್ಲಿದೆ. ಅಷ್ಟೇ ಅಲ್ಲ ಕಪ್ಪತಗುಡ್ಡದ ಮಣ್ಣೂ ಸಹ ಔಷಧಿಯ ಗುಣ ಹೊಂದಿದೆ. ಇಲ್ಲಿನ ಪ್ರತಿ ಹುಲ್ಲು ಕಡ್ಡಿಯೂ ಸಹ ತನ್ನದೇ ಮಹತ್ವದ ಔಷಧಿಯ ಗುಣದಿಂದ ವೈದ್ಯವನ್ನರಸಿ ಬರುವ ಅನಾರೋಗ್ಯ ಪೀಡಿತರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಅದೆಷ್ಟೋ ದಿನಗಟ್ಟಲೆ ಇಲ್ಲಿ ಉಳಿದು ತಮ್ಮ ಅನಾರೋಗ್ಯವನ್ನೂ ಸರಿಪಡಿಸಿಕೊಂಡು ಹೋಗಿದ್ದಾರಂತೆ ಅಸಂಖ್ಯಾತರು.

ಇಲ್ಲಿ ಬೆಳೆದಿರುವ ಪ್ರತಿಯೊಂದು ಗಿಡಮರಗಳು ಸಹ ಸ್ಥಳೀಯರಿಷ್ಟೇ ಅಲ್ಲದೆ, ಪ್ರವಾಸಿಗರಿಗೂ ಸಹ ಖುಷಿಯನ್ನು ಉಂಟುಮಾಡುತ್ತಿವೆ. ಹೀಗೆ ಅನೇಕಾನೇಕ ರಹಸ್ಯಗಳನ್ನು ಕಪ್ಪತಗುಡ್ಡ ಹೊಂದಿದೆ. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬಿಎಎಂಎಸ್ ವಿದ್ಯಾರ್ಥಿಗಳು ಸಂಶೋಧನೆಗಾಗಿ ಕಪ್ಪತಗುಡ್ಡಕ್ಕೆ ತಂಡೋಪ ತಂಡವಾಗಿ ಬರುತ್ತಾರೆ.

ಇಡೀ ಗುಡ್ಡವನ್ನೇ ಆವರಿಸಿಕೊಳ್ಳೋ ಮೋಡ, ಗುಡ್ಡದಿಂದ ಹಾದು ಹೋಗೋ ಮೇಘರಾಜನ ಸಾಲುಗಳನ್ನು ನೋಡೋಕೆ ಎರಡು ಕಣ್ಣೂ ಸಹ ಸಾಲದು ಎನ್ನುವಂತಹ ರಮಣೀಯ ವಾತಾವರಣವೀಗ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡದಲ್ಲಿ ನಿರ್ಮಾಣವಾಗಿದೆ. ಈ ಹಸಿರ ಸಿರಿಯಲ್ಲಿ ನಮ್ಮ ಮನಸ್ಸು ಮರೆಯೋ ಹಾಗೆ ಕಾಲ ದೂಡಬೇಕಾದ್ರೆ ಕಪ್ಪತಗುಡ್ಡಕ್ಕೆ ಬರಲೇಬೇಕು.
Published by: Latha CG
First published: September 23, 2020, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading