ಗದಗ (ಅ. 7): ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ಇರುವ ಅಮೂಲ್ಯವಾದ ಪಂಚ ಖನಿಜಗಳನ್ನು ಕಬ್ಬಳಿಸಲು ಗಣಿಕುಳಗಳು ಹೊಂಚುಹಾಕಿ ಕುಳಿತುಬಿಟ್ಟಿವೆ. ಹೌದು, ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ದಶಕಗಳಿಂದ ಕಪ್ಪತ್ತಗುಡ್ಡ ಪ್ರದೇಶದಲ್ಲಿನ ಚಿನ್ನ ಲೂಟಿಗೆ ಗಣಿ ಕುಳಗಳು ಕುತಂತ್ರ ನಡೆಸಿವೆ. ರಾಜ್ಯ, ಕೇಂದ್ರ ಸರ್ಕಾರಗಳ ಮೇಲೆ ಪ್ರಭಾವ ಬೀರಿ ಗಣಿ ಕಂಪನಿಗಳು ಕಪ್ಪತ್ತಗುಡ್ಡದಲ್ಲಿನ ಸಂಪತ್ತು ಬಗೆಯಬೇಕು ಅಂತ ಕುತಂತ್ರ ನಡೆಸಿವೆ. ಈ ಹಿಂದೆ ಬಲ್ದೋಟಾ ಕಂಪನಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆದಿತ್ತು. ಆದರೆ, ಅಂದು ಗದಗ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರು, ಪರಿಸರ ಪ್ರೇಮಿಗಳ ಹೋರಾಟ ಮಾಡಿದ್ದರು. ಜೊತೆಗೆ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಮಾಡಬೇಕು ಅಂತ ಹೋರಾಟ ಮಾಡಿದ್ದರು. ಹೀಗಾಗಿ, ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಪ್ಪತ್ತಗುಡ್ಡ ವನ್ಯಜೀವಿ ಜೀವಿಧಾಮ ಅಂತ ಘೋಷಣೆ ಮಾಡಿತ್ತು. ಅಂದು ಬಲ್ದೋಟಾ ಕಂಪನಿಗೆ ಚಿನ್ನದ ಗಣಿಗಾರಿಕೆ ನೀಡಿದ ಅನುಮತಿ ಕೂಡ ರದ್ದಾಗಿತ್ತು.
ಆದರೂ ಕೂಡ ಬಲ್ದೋಟಾ ಕಂಪನಿ ತನ್ನ ಪ್ರಯತ್ನ ಮಾತ್ರ ನಿಲ್ಲಿಸಿಲ್ಲ. ಯಾಕೆಂದರೆ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅಪಾರ ಚಿನ್ನದ ಖನಿಜ ಇದೆ. ಹೀಗಾಗಿ, ಕಪ್ಪತ್ತಗುಡ್ಡದಲ್ಲಿನ ಚಿನ್ನ ಬಗೆಯಲೇ ಬೇಕು ಎಂದು ಸತತ ಪ್ರಯತ್ನ ನಡೆಸಿದೆ. ಅಂದು ಮಠಾಧೀಶರು ಹೋರಾಟ ಮಾಡಿ ಬಲ್ದೋಟಾ ಕಂಪನಿ ಓಡಿಸಿದ್ದರು. ಆದರೆ, ಈಗ ಮತ್ತೆ ಬಲ್ದೋಟಾ ಕಂಪನಿ ಕಪ್ಪತ್ತಗುಡ್ಡ ವನ್ಯಜೀವಿಧಾಮ ಪ್ರದೇಶದ ಜಲ್ಲಿಗೇರಿ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆಗೆ 40 ಹೆಕ್ಟೇರ್ ಭೂಮಿ ನೀಡುವಂತೆ ಗದಗ ಅರಣ್ಯ ಇಲಾಖೆಗೆ ಹೊಸ ಅರ್ಜಿ ಸಲ್ಲಿಸಿದೆ. ಇದು ಈಗ ಡಿಎಫ್ಓ ಸೂರ್ಯಸೇನಾ ಅವರ ಹಂತದಲ್ಲಿ ಪರಿಶೀಲನೆಯಲ್ಲಿದೆ.
ಇದನ್ನೂ ಓದಿ: ಮಾಸ್ಕ್ ಹಾಕದಿದ್ದರೆ ಇಂದಿನಿಂದ ಪೊಲೀಸರೂ ವಸೂಲಿ ಮಾಡ್ತಾರೆ 1,000 ರೂ. ದಂಡ!
ಕಪ್ಪತ್ತಗುಡ್ಡ ಲೂಟಿಗೆ ಬಲ್ದೋಟಾ ಕಂಪನಿ ಮತ್ತೆ ವನ್ಯಜೀವಿ ಧಾಮ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗೆ 40 ಹೆಕ್ಟೇರ್ ಭೂಮಿ ನೀಡಿ ಅಂತ ಅರ್ಜಿ ಹಾಕಿದೆ. ಒಂದು ವರ್ಷ ಸುಮ್ಮನಾದ ಕಪ್ಪತ್ತಗುಡ್ಡ ನುಂಗುವ ಪ್ಲಾನ್ ಮತ್ತೆ ಈಗ ತಲೆ ಎತ್ತಿದೆ. ಇದಕ್ಕೆ ಮಠಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಚಿನ್ನದ ಸೇರಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದು. ಇದಕ್ಕೆ ಅವಕಾಶ ನೀಡಲ್ಲ. ಒಂದು ವೇಳೆ ಸರ್ಕಾರ ಏನಾದ್ರೂ ಗಣಿ ಕುಳಗಳಿಗೆ ಮಣಿದು ಅನುಮತಿ ಕೊಟ್ಟರೆ ಹುಷಾರ್ ಅಂತ ಎಚ್ಚರಿಕೆ ನೀಡಿದ್ದಾರೆ. ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಎಲ್ಲಮಠಾಧೀಶರು ಉತ್ತರ ಕರ್ನಾಟಕ ಸಹ್ಯಾದ್ರಿ ಕಪ್ಪತ್ತಗುಡ್ಡ ರಕ್ಷಣೆಗೆ ಹೋರಾಟ ಮಾಡುತ್ತೇವೆ ಅಂತ ನಂದೀವೇರಿ ಶ್ರೀಗಳು, ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ