HOME » NEWS » State » KAPPATAGUDDA ANONYMOUS SPREADING FIRE IN KAPPATAGUDDA HILL 200 HECTARE FOREST LAND BURNED SCT SKG

ಗದಗದ ಕಪ್ಪತ್ತಗುಡ್ಡಕ್ಕೆ ಪದೇಪದೆ ಬೆಂಕಿ ಹಚ್ಚುತ್ತಿರುವ ಕಿಡಿಗೇಡಿಗಳು!; 200 ಹೆಕ್ಟೇರ್ ಸಸ್ಯ ಸಂಪತ್ತು ನಾಶ

Kappatagudda | ಕಪ್ಪತ್ತಗುಡ್ಡದಲ್ಲಿ ಜನವರಿ ತಿಂಗಳಿಂದ ಈವರೆಗೆ 200 ಹೆಕ್ಟೇರ್ ಪ್ರದೇಶದಲ್ಲಿನ ಅಪರೂಪದ ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಹೀಗಾಗಿ ಗದಗ ಅರಣ್ಯ ಇಖಾಖೆ ಬೆಂಕಿ ಹಚ್ಚಿದವರ ವಿರುದ್ಧ 15 ಪ್ರಕರಣಗಳನ್ನು ದಾಖಸಿಕೊಂಡು ತನಿಖೆ ಕೈಗೊಂಡಿದ್ದಾರೆ.

news18-kannada
Updated:March 26, 2021, 8:26 AM IST
ಗದಗದ ಕಪ್ಪತ್ತಗುಡ್ಡಕ್ಕೆ ಪದೇಪದೆ ಬೆಂಕಿ ಹಚ್ಚುತ್ತಿರುವ ಕಿಡಿಗೇಡಿಗಳು!; 200 ಹೆಕ್ಟೇರ್ ಸಸ್ಯ ಸಂಪತ್ತು ನಾಶ
ಕಪ್ಪತ್ತಗುಡ್ಡದಲ್ಲಿ ಬೆಂಕಿ
  • Share this:
ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ಹೊಂದಿದೆ. ಹೀಗಾಗಿ ಇದನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ. ಆದರೆ, ಇಂತಹ ಅಪರೂಪದ ಸಸ್ಯ ಸಂಪತ್ತು ಬೆಂಕಿಯ ರುದ್ರನರ್ತನಕ್ಕೆ ಬೆಂದು ಹೋಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಬೆಂಕಿ ಹಚ್ಚುವವರ ವಿರುದ್ಧ ಸಮರ ಸಾರಿದೆ. ಹೌದು ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಿದವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹೊಂದಿದೆ. ಸಪ್ತ ಖನಿಜವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಹೀಗಾಗಿ ಕಪ್ಪತ್ತಗುಡದ ಮೇಲೆ ಗಣಿ ಕುಳಗಳು ಕಣ್ಣು ಹಾಕ್ತಾನೆ ಇದ್ದಾರೆ. ಆದ್ರೆ, ಇಂತಹ ಅಮೂಲ್ಯವಾದ ಸಂಪತ್ತಿಗೆ ಕೆಲವು ಅನಾಮಧೇಯ ವ್ಯಕ್ತಿಗಳು ಬೇಕು ಅಂತಲೇ ಬೆಂಕಿಯನ್ನು ಹಚ್ಚುತ್ತಿದ್ದಾರೆ. ಜನವರಿ ತಿಂಗಳಿಂದ ಈವರೆಗೆ 200 ಹೆಕ್ಟೇರ್ ಪ್ರದೇಶದಲ್ಲಿನ ಅಪರೂಪದ ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಹೀಗಾಗಿ ಗದಗ ಅರಣ್ಯ ಇಖಾಖೆ ಬೆಂಕಿ ಹಚ್ಚಿದವರ ವಿರುದ್ಧ 15 ಪ್ರಕರಣಗಳನ್ನು ದಾಖಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೊರೋನಾ 2ನೇ ಅಲೆ; ಸಿಎಂ ಬಿಎಸ್​ವೈಗೆ ಪತ್ರ ಬರೆಯುವ ಮೂಲಕ ಬಿಜೆಪಿ ಸರ್ಕಾರ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಗದಗ ಜಿಲ್ಲೆಯ ದೋಣಿ ತಾಂಡಾ, ಶಿಂಗಟರಾಯನಕೇರಿ, ಅತ್ತಿಕಟ್ಟಿ, ಕೊರ್ಲಹಳ್ಳಿ ಸೇರಿದಂತೆ ಕಪ್ಪತ್ತಗುಡ್ಡದ ಅಂಜಿನಲ್ಲಿರುವ ಗ್ರಾಮದ ಜನ್ರು ಬೆಂಕಿ ಹಚ್ಚುತ್ತಿದ್ದಾರೆ ಎನ್ನುವ ಶಂಕೆ ಕೂಡಾ ವ್ಯಕ್ತವಾಗಿದೆ. ಇನ್ನೂ ಒಂದು ಖಾಸಗಿ ಕಂಪನಿಯ ವಿಂಡ್ ಪ್ಯಾನ್, ನಿಂದ ಬೆಂಕಿ ಹತ್ತಿಕೊಂಡು ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದ್ದು, ಆ ಕಂಪನಿ ವಿರುದ್ಧ ದೂರು ದಾಖಲಾಗಿದೆ. ಹಾಗಾಗಿ ಬೆಂಕಿ ಹಚ್ಚಿದವರ ಕುರಿತು ಮಾಹಿತಿ ಲಭ್ಯವಾದ್ರೆ ಅರಣ್ಯ ಇಲಾಖೆ ತಿಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿ ಸೂರ್ಯಸೇನ್ (ಡಿಎಫ್ಓ) ಅವರ ಮನವಿ ಮಾಡಿಕೊಂಡಿದ್ದಾರೆ.

Kappatagudda: Anonymous Spreading fire in Kappatagudda Hill 200 Hectare Forest Land Burned.
ಕಪ್ಪತ್ತಗುಡ್ಡದಲ್ಲಿ ಬೆಂಕಿ


ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಿದ ನಂತರ ಬೆಂಕಿ ಹಚ್ಚುವ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಪ್ಪತ್ತಗುಡ್ಡದಲ್ಲಿ ಖನಿಜ ಸಂಪತ್ತು ಲೂಟಿ ಮಾಡಬೇಕು ಎನ್ನುವ ಹುನ್ನಾರದಿಂದ ಗಣಿ ಕುಳಗಳು ಸ್ಥಳೀಯ ಜನರನ್ನು ಮುಂದೆ ಬಿಟ್ಟು ಬೆಂಕಿ ಹಚ್ಚಿಸುತ್ತಿದ್ದಾರೆ ಎನ್ನುವ ಅನುಮಾನ ಕೂಡ ದಟ್ಟವಾಗಿದೆ. ಆದರೆ ಈಗ ತಾನೇ ಬೇಸಿಗೆ ಆರಂಭವಾಗಿದ್ದು, ಅಲ್ಪ ಸಮಯದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು, ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಹೀಗಾಗಿ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌ ಕೇವಲ ದೂರು ದಾಖಲು ಮಾಡಿಕೊಂಡರೆ ಸಾಲದು ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಮುಂದೆ ಯಾರೂ ಬೆಂಕಿ ಹಚ್ಚದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಹೀಗಾಗಿ ಬೆಂಕಿ‌ ಹಚ್ಚಿದ್ದವರಲ್ಲಿ ನಡುಕ ‌ಆರಂಭವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ಯಾರ ಮುಲಾಜಿಲ್ಲದೆ ಬೆಂಕಿ ಹಚ್ಚಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಕಪ್ಪತ್ತಗುಡ್ಡಕ್ಕೆ ಬೆಂಕಿ ಹುಚ್ಚುವ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ.

(ವರದಿ: ಸಂತೋಷ ಕೊಣ್ಣೂರ)
Published by: Sushma Chakre
First published: March 26, 2021, 8:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories