ಹಿಂದಿ ದಿವಸ್​​ ವಿರುದ್ಧ ಸೆ.14ಕ್ಕೆ ಕರಾಳ ದಿನಾಚರಣೆ; ಕನ್ನಡಿಗರ ಬೃಹತ್​​ ಹಕ್ಕೊತ್ತಾಯ ಮೆರವಣಿಗೆ

ಇಲ್ಲಿ ಒಂದು ಭಾಷೆಗೆ ಹೆಚ್ಚು ಮನ್ನಣೆ ಸಿಗುವಂತೆ ಮಾಡುವುದು ಹೇರಿಕೆ ಮಾಡಿದಂತೆ. ಹಿಂದಿಯನ್ನು ಹಿಂದಿಯೇತರರ ಮೇಲೆ ಹೇರಿಕೆ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಮಾದೇಶ ಗೌಡ.

Ganesh Nachikethu | news18
Updated:September 13, 2019, 12:09 PM IST
ಹಿಂದಿ ದಿವಸ್​​ ವಿರುದ್ಧ ಸೆ.14ಕ್ಕೆ ಕರಾಳ ದಿನಾಚರಣೆ; ಕನ್ನಡಿಗರ ಬೃಹತ್​​ ಹಕ್ಕೊತ್ತಾಯ ಮೆರವಣಿಗೆ
ಕನ್ನಡ ಧ್ವಜ
  • News18
  • Last Updated: September 13, 2019, 12:09 PM IST
  • Share this:
ಬೆಂಗಳೂರು(ಸೆ.13): ದೇಶಾದ್ಯಂತ ಪ್ರತಿ ವರ್ಷದಂತೆಯೇ ನಾಳೆ(ಸೆ.14) ಕೂಡ ಹಿಂದಿ ದಿವಸ್ ಆಚರಿಸಲಾಗುತ್ತದೆ. ಈ ಹಿಂದಿ ದಿವಸ್​​​ ರದ್ದಿಗೆ ಆಗ್ರಹಿಸಿ ಕನ್ನಡಿಗರು ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ. ಹೀಗಾಗಿಯೇ ನಾಳೆ ನಗರದ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಹಿಂದಿ ಬದಲಿಗೆ ಕನ್ನಡ ಭಾಷೆಯನ್ನು ಭಾರತ ಸರ್ಕಾರದ ಆಡಳಿತ ಭಾಷೆಯಾಗಿ ಮಾಡಬೇಕೆಂದು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಿದ್ದಾರೆ.

ಹಿಂದಿ ದಿವಸ್​​ ಬೇಡ ಎಂದು ಆಗ್ರಹಿಸಿ ಇಂದು ಸಂಜೆ ಕನ್ನಡಿಗರು ​​ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದ್ದಾರೆ. ಕೇಂದ್ರ ಸರಕಾರವು ಹಿಂದಿ ಭಾಷೆಯನ್ನು ಮಾತ್ರ ಒಕ್ಕೂಟದ ಆಡಳಿತ ಭಾಷೆಯೆಂದು ಕರೆಯುತ್ತಿದೆ. ಅಲ್ಲದೇ ಹಿಂದಿ ಭಾಷೆಯನ್ನು ಮೇಲ್ದರ್ಜೆಯಲ್ಲಿ ಕೂರಿಸಿ ಹಿಂದಿಯೇತರ ಭಾಷೆಗಳನ್ನು ಕಡೆಗಣಿಸುತ್ತಿದೆ. ಹಿಂದಿ ಭಾಷೆಯಂತೇ ಎಲ್ಲಾ ಭಾಷೆಗಳಿಗೂ ಹೆಚ್ಚಿನ ಮನ್ನಣೆ ಸಿಗಬೇಕು. ಹಾಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಅನ್ನು ರಾಜಭಾಷಾ ದಿವಸ್ ಎಂದು ಆಚರಿಸುವುದನ್ನು ನಿಲ್ಲಿಸಬೇಕೆಂದು ಕನ್ನಡಪರ ಹೋರಾಟಗಾರರು ಆಗ್ರಹಿಸಲಿದ್ದಾರೆ.ಭಾರತವೂ ಭಾಷಾ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ. ಒಕ್ಕೂಟ ವ್ಯವಸ್ಥೆ ಹೊಂದಿರುವ ಬೇರೆ ದೇಶಗಳಂತೆ ಭಾರತೀಯ ಸಂವಿಧಾನ ರಾಜ್ಯಗಳಿಗೆ ಭಾರತದ ಒಕ್ಕೂಟದಿಂದ ಹೊರಹೋಗುವ ಅಧಿಕಾರ ನೀಡಿಲ್ಲ. ಇಲ್ಲಿ ಒಂದು ಭಾಷೆಗೆ ಹೆಚ್ಚು ಮನ್ನಣೆ ಸಿಗುವಂತೆ ಮಾಡುವುದು ಹೇರಿಕೆ ಮಾಡಿದಂತೆ. ಹಿಂದಿಯನ್ನು ಹಿಂದಿಯೇತರರ ಮೇಲೆ ಹೇರಿಕೆ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಮಾದೇಶ ಗೌಡ.

ಇನ್ನು ಕೇಂದ್ರ ಸರ್ಕಾರದ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದ್ದೇವೆ. ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ. ಸಂವಿಧಾನದ 8 ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನು ಒಕ್ಕೂಟದ ಆಡಳಿತ ಭಾಷೆ ಎಂದು ಘೋಷಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸೋಣ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್​​ ಜಾವಗಲ್​​​ ಕರೆ ನೀಡಿದ್ದಾರೆ.

ಇದನ್ನೂ ಓದಿ: ಬ್ಯಾಂಕಿಂಗ್ ಪರೀಕ್ಷೆ; ಕನ್ನಡಕ್ಕೆ ಕಿಮ್ಮತ್ತು ನೀಡದ ಕೇಂದ್ರ ಸರ್ಕಾರ; ಹಿಂದಿ-ಇಂಗ್ಲೀಷ್​​ಗೆ ಮಾತ್ರ ಅವಕಾಶ

ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ 14 ರಂದು ಹಿಂದಿ ದಿನವನ್ನು ಆಚರಿಸಲಾಗುತ್ತದೆ. ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು, ಸರಕಾರಿ ಕಚೇರಿಗಳು, ಸಂಸ್ಥೆಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಆಚರಣೆ ಮಾಡಲಾಗುತ್ತದೆ. ಹಿಂದಿ ಭಾಷೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡು ಈ ದಿನದ ಪ್ರಾಮುಖ್ಯತೆಯನ್ನು ತೋರಿಸಲಾಗುತ್ತದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading