ಹಾವೇರಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia-Ukraine War) ಸಾವನ್ನಪ್ಪಿದ್ದ ಕನ್ನಡಿಗ ನವೀನ್ (Naveen) ಕನಸು ನನಸಾಗಿದೆ. ನವೀನ್ ವೈದ್ಯನಾದ (Doctor) ಮೇಲೆ ಹೆತ್ತವರಿಗಾಗಿ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿದ್ದರು. ಶೆಡ್ನಲ್ಲಿ ವಾಸವಾಗಿದ್ದ ನವೀನ್ ಪೋಷಕರು ಮಗನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಟ್ಟಿದ್ದರು. ಮಗನ ವಿದ್ಯಾಭ್ಯಾಸಕ್ಕಾಗಿ (Son Education) ತೆಗೆದಿರಿಸಿದ್ದ ಹಣದಲ್ಲೀಗ ಮನೆಯನ್ನು ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ (Chalageri, Haveri) ಗ್ರಾಮದಲ್ಲಿ ನಿರ್ಮಾಣವಾಗಿರುವ ಮನೆಗೆ ‘ನವೀನ್ ನಿವಾಸ’ (Naveen Nivas) ಎಂದು ಹೆಸರಿಡಲಾಗಿದೆ. ಮನೆ ಪ್ರವೇಶ ದ್ವಾರದ ಬಳಿ ನವೀನ್ ಫೋಟೋ ಸಹ ಹಾಕಲಾಗಿದೆ. ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಮಗನ ನೆನಪು ಶಾಶ್ವತವಾಗಿರಲಿ ಎಂದು ಗ್ರ್ಯಾನೈಟ್ ಕಲ್ಲಿನಲ್ಲಿ ನವೀನ್ ಭಾವಚಿತ್ರ ಕೆತ್ತಿಸಲಾಗಿದೆ.
ಮಗನ ಮೊದಲ ವರ್ಷದ ಪುಣ್ಯ ತಿಥಿಯಂದು ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಗಿದೆ. ಎಲ್ಲರನ್ನೂ ಕರೆದು ಊಟ ಹಾಕಿಸಿ ಮಗನ ಕನಸನ್ನು ನವೀನ್ ತಂದೆ ಶೇಖರಗೌಡ ಬಿಚ್ಚಿಟ್ಟರು.
ಗಳಗಳನೇ ಕಣ್ಣೀರಿಟ್ಟ ನವೀನ್ ತಂದೆ
ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಶೇಖರಗೌಡ, ವೈದ್ಯನಾದ ಮೇಲೆ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದನು. ವೈದ್ಯನಾದ ಮೇಲೆ ಹೇಗೆಲ್ಲಾ ಕೆಲಸ ಮಾಡಬೇಕು ಅಂತ ನಮ್ಮ ಜೊತೆ ಚರ್ಚೆ ಮಾಡಿದ್ದೇವೆ. 2021ರಲ್ಲಿ ಬಂದಾಗ ಮನೆ ನಾವೇ ಕಟ್ಟಿಸುತ್ತೇವೆ ಅಂತ ಹೇಳಿದ್ದನು. ಇದೀಗ ಅವನ ಆಸೆಯಂತೆ ಮನೆಯನ್ನೇ ಕಟ್ಟಿದ್ದೇವೆ. ಆದ್ರೆ ಇಂದು ಆ ಮನೆಯಲ್ಲಿ ಅವನೇ ಇಲ್ಲ ಎಂದು ಗಳಗಳನೇ ಕಣ್ಣೀರು ಹಾಕಿದರು.
ಬಡವರ ಸೇವೆಯ ಕನಸು ಕಂಡಿದ್ದ
ಮನೆ ನಿರ್ಮಾಣದ ಕುರಿತು ಮಾತನಾಡಿದ ನವೀನ್ ತಾಯಿ, ಮಗ ಬೆಟ್ಟದಷ್ಟು ಆಸೆಗಳನ್ನು ಕಂಡಿದ್ದನು. ಮನೆಯನ್ನು ಕಟ್ಟಿಸಿ ನಮ್ಮನ್ನು ಇಲ್ಲಿ ಇರಿಸುತ್ತೇನೆ. ಶೆಡ್ ಇರೋ ಜಾಗದಲ್ಲಿ ಆಸ್ಪತ್ರೆ ಕಟ್ಟಿಸೋದಾಗಿ ಹೇಳುತ್ತಿದ್ದನು. ಆಸ್ಪತ್ರೆ ಕಟ್ಟಿಸಿ ಬಡವರ ಸೇವೆ ಮಾಡಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಇಂದು ನಾವು ಆತನ ಅರ್ಧ ಆಸೆಯನ್ನ ಪೂರೈಸಿದ್ದೇವೆ. ಇನ್ನರ್ಧ ಪೂರ್ಣ ಮಾಡಲು ನಮ್ಮಿಂದ ಆಗಲ್ಲ ಎಂದು ಕಣ್ಣೀರಿಟ್ಟರು.
ಇಂದು ಅವನ ಹೆಸರನ್ನೇ ನಮ್ಮ ಮನೆಗೆ ಇರಿಸಲಾಗಿದೆ. ಮಗನ ನೆರಳಿನಲ್ಲಿ ನಾವಿದ್ದೇವೆ ಎಂದು ಹೇಳುತ್ತಾ ಗದ್ಗದಿತರಾದ ಶೇಖರಗೌಡ ಮತ್ತು ವಿಜಯಲಕ್ಷ್ಮಿ ಕಣ್ಣೀರು ಹಾಕುತ್ತಾ ಕೈ ಮುಗಿದರು.
ಇದನ್ನೂ ಓದಿ: Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ
PSI ಕೇಸ್ - ಮತ್ತೋರ್ವ ಅರೆಸ್ಟ್
PSI ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ. ಅಸಿಸ್ಟೆಂಟ್ ಪ್ರೊಫೆಸರ್ ವಿಜಯ್ ಕುಮಾರ್ ಹೆಬ್ಬಾಳ್ಕರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಕಲಬುರಗಿ ಸರ್ಕಾರಿ ಪದವಿ ಕಾಲೇಜಿನ ಎಕನಾಮಿಕ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾನೆ. ಪಿಎಸ್ಐ ಪರೀಕ್ಷೆ ಹಿಂದಿನ ದಿನ ಕಾಲೇಜು ಕಟ್ಟಡಕ್ಕೆ ಅಕ್ರಮವಾಗಿ ಪ್ರವೇಶಿಸಿ ಬ್ಲೂಟೂತ್ ಇಡಲು ಸಹಾಯ ಮಾಡಿದ್ದ ಎನ್ನಲಾಗಿದೆ. RD ಪಾಟೀಲ್ ಸೂಚನೆ ಪ್ರಕಾರ ವಿಜಯ್ ಕುಮಾರ್ ಅಭ್ಯರ್ಥಿಗಳಿಗೆ ಸಹಾಯ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಬಿಸಿಎ ವಿದ್ಯಾರ್ಥಿಗೆ ಚಾಕು ಇರಿತ
ಬಾಗಲಕೋಟೆ ವಿದ್ಯಾಗಿರಿಯಲ್ಲಿ ಶನಿವಾರ ರಾತ್ರಿ ಬಿಸಿಎ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ. ವಿದ್ಯಾಗಿರಿಯ ಸಿಬಿಎಸ್ಸಿ ಶಾಲಾ ರಸ್ತೆಯ ಈರಣ್ಣನ ಗುಡಿಯ ಹತ್ತಿರ ಘಟನೆ ನಡೆದಿದೆ. ರಾತ್ರಿ ಬೈಕ್ನಲ್ಲಿ ಪ್ರಶಾಂತ ಹಾಗೂ ಪ್ರಕಾಶ್ ಎಂಬವರು ಬಂದು ಬಿಸಿಎ ವಿದ್ಯಾರ್ಥಿ ಕೃಷ್ಣಾ ಹೆಳವರ್ ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಜಯಪ್ರಕಾಶ್ ದೌಡಾಯಿಸಿ ಪರಿಶೀಲನೆ ನಡೆಸಿದ್ರು. ಚಾಕು ಇರಿತಕ್ಕೆ ಒಳಗಾದ ಕೃಷ್ಣಾ ಜೀವಕ್ಕೆ ಅಪಾಯ ಇಲ್ಲ ಅಂತಾ ಎಸ್ಪಿ ಜಯಪ್ರಕಾಶ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ