ಪಟೇಲ್ ಮ್ಯೂಸಿಯಂ ವಿನ್ಯಾಸದಲ್ಲಿ ಕನ್ನಡಿಗರ ಕಮಾಲ್​

Seema.R | news18
Updated:October 31, 2018, 11:41 AM IST
ಪಟೇಲ್ ಮ್ಯೂಸಿಯಂ ವಿನ್ಯಾಸದಲ್ಲಿ ಕನ್ನಡಿಗರ ಕಮಾಲ್​
  • News18
  • Last Updated: October 31, 2018, 11:41 AM IST
  • Share this:
 ನ್ಯೂಸ್​ 18 ಕನ್ನಡ

ಬೆಂಗಳೂರು (ಅ.31): ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 143ನೇ ಜನ್ಮದಿನದ ಅಂಗವಾಗಿ ಇಂದು ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ಅವರ ಬೃಹತ್​ ಏಕತಾ ಪ್ರತಿಮೆ ಅನಾವರಣಗೊಳ್ಳುತ್ತಿದೆ.

ವಿಶ್ವದ ಅತಿ ಎತ್ತರದ  182 ಮೀಟರ್ ​ ಪ್ರತಿಮೆಯನ್ನು ಪ್ರಧಾನಿಗಳು ಇಂದು ಲೋಕಾರ್ಪಣೆ ಮಾಡಲಿದ್ದಾರೆ.ನರ್ಮದಾ ನದಿಯ ಸಾದುಬೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಮೂರ್ತಿ ಕೆಳಗೆ ಪಟೇಲ್​ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಈ ಮ್ಯೂಸಿಯಂನಲ್ಲಿ ಪಟೇಲರ ಸಾಧನೆ ಬಿಂಬಿಸುವ 10 ಗ್ಯಾಲರಿ ಕೂಡ ಇದೆ. ಈ ಮ್ಯೂಸಿಯಂ ವಿನ್ಯಾಸ ಮಾಡುವಲ್ಲಿ ಹುಬ್ಬಳ್ಳಿ ಹೈದ ಹಾಗೂ ಪ್ರತಿಮೆ ನಿರ್ಮಾಣದಲ್ಲಿ ದಾವಣಗೆರೆಯ ಸಿವಿಲ್​ ಇಂಜಿಯರ್​ ಕೆ.ಎಂ ಜಗದೀಶ್​ ಕೂಡ ಭಾಗಿಯಾಗಿದ್ದು ತಮ್ಮ ಕೈಚಳಕ ತೋರಿಸಿದ್ದಾರೆ.

ಹುಬ್ಬಳ್ಳಿ ಮೂಲದ ರಾಹುಲ್​ ಧಾರವಾಡಕರ್​ ಎಂಬ ಕನ್ನಡಿಗ ಈ ಮ್ಯೂಸಿಯಂ ವಿನ್ಯಾಸ ಮಾಡುವುದರಲ್ಲಿ ಶ್ರಮವಹಿಸಿರುವುದು ಕರ್ನಾಟಕದ ಜನರಿಗೆ ಹೆಮ್ಮೆಯನ್ನು ಮೂಡಿಸಿದೆ.

ಇದನ್ನು ಓದಿ: ಉಕ್ಕಿನ ಮನುಷ್ಯನಿಗೆ ಉಕ್ಕಿನ ಪ್ರತಿಮೆ; ‘ಸ್ಟ್ಯಾಚು ಆಫ್ ಯುನಿಟಿ’ ಬಗ್ಗೆ ನಿಮಗೆ ಗೊತ್ತಿಲ್ಲದ ಅಂಶಗಳುಮ್ಯೂಸಿಯಂ ವಿನ್ಯಾಸ ಹೇಗಿರಬೇಕು. ಯಾವ ರೀತಿ ಆಕರ್ಷಣಿಯವಾಗಿ ಪಟೇಲರ ಜೀವನವನ್ನು ಜನರಿಗೆ ಮುಟ್ಟಿಸಬಹುದು ಎಂಬ ಕುರಿತು ಮ್ಯೂಸಿಯಂ ನಿರ್ಮಾಣ ಮಾಡುವಲ್ಲಿ ರಾಹುಲ್​ ಪಾತ್ರ ದೊಡ್ಡದಿದೆ. 

ಫೈನ್​ ಆರ್ಟ್ಸ್​ ಪದವಿ ಹೊಂದಿರುವ ರಾಹುಲ್​ ಧಾರವಾಡಕರ್​ ಬೆಂಗಳೂರು ಮೂಲದ ಇಡಿಸಿ ಕ್ರಿಯೇಟಿವ್ ಡಿಸೈನ್ ಅಂಡ್ ಮಲ್ಟಿಮೀಡಿಯಾ ಕಂಪನಿಯಲ್ಲಿ ಕಳೆದ 12 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಮ್ಯೂಸಿಯಂ ನಿರ್ಮಾಣದಲ್ಲಿ ಅನುಭವವನ್ನು ಹೊಂದಿದ್ದಾರೆ.

ಗುಜರಾತ್‌ ಸೇರಿದಂತೆ ವಿವಿಧೆಡೆ ಮ್ಯೂಸಿಯಂ ನಿರ್ಮಿಸಿದ ಅನುಭವ ಹೊಂದಿರುವ ರಾಹುಲ್​ ಸರ್ದಾರ್​ ಪಟೇಲ್​ ಮ್ಯೂಸಿಯಂ ನಿರ್ಮಾಣಕ್ಕೆ ಕೂಡ ಆಯ್ಕೆಯಾಗಿದ್ದು, ಅಲ್ಲಿ ಕೂಡ ತಮ್ಮ ಕಮಾಲ್​ ತೋರಿಸಿದ್ದಾರೆ.

ಪ್ರತಿಮೆ ನಿರ್ಮಾಣದಲ್ಲಿ ಭಾಗಿಯಾದ ದಾವಣಗೆರೆ ಇಂಜಿನಿಯರ್​

ಬೃಹತ್​ ಪ್ರತಿಮೆ ನಿರ್ಮಾಣದಲ್ಲಿ ಭಾಗಿಯಾದ 200 ಪರಿಣಿತ ಆರ್ಕಿಟೆಕ್ಟ್​ ಇಂಜಿನಿಯರ್​ ತಂಡದಲ್ಲಿ  ದಾವಣಗೆರೆ ಸಿವಿಲ್ ಇಂಜಿನಿಯರ್ ಭಾಗಿಯಾಗಿರುವುದು ಕೂಡ ಕನ್ನಡಿಗರಿಗೆ ಸಂತಸ ತಂದಿದೆ.

ಕಳೆದ ಒಂದು ವರ್ಷದಿಂದ ಗುಜರಾತ್ ನಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ಪ್ರತಿಮೆಗೆ ಬೇಕಾದ ಪರಿಕರಗಳ ಕ್ವಾಲಿಟಿ ಪರೀಶಿಲಿಸುವ ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸಿದ್ದಾರೆ.ಗುಜರಾತ್ ನ ಗಾಂಧಿನಗರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಪ್ರತಿಮೆ ನಿರ್ಮಾಣಕ್ಕೆ ಯಾವ ರೀತಿಯ ಉತ್ಪನ್ನಗಳು ಬೇಕು, ಅದರ ಗುಣಮಟ್ಟ ಹೇಗಿರಬೇಕು ಎಂಬ ಬಗ್ಗೆ ಕಂಪ್ಯೂಟರ್ ಡಿಸೈನ್ ಮಾಡಿ ಮೇಲಾಧಿಕಾರಿಗಳಿಗೆ ಇಂತಹದ್ದೇ ಪರಿಕರ ಬಳಸುವಂತೆ ಸಲಹೆ ನೀಡಿದ್ದಾರೆ.

 

 

 

First published: October 31, 2018, 10:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading