84ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರ ದೋಷ

ಇದು ಸರ್ಕಾರದ ಅಧಿಕೃತ ವೆಬ್​ಸೈಟ್​ ಆಗಿದ್ದು, ಸಚಿವ ಆರ್​.ವಿ.ದೇಶಪಾಂಡೆ ಉದ್ಘಾಟನೆ ಮಾಡಿದ್ದಾರೆ. ಕನ್ನಡ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರಗಳನ್ನೇ ತಪ್ಪಾಗಿ ಬರೆದಿದ್ದು ಆಭಾಸವೆನಿಸುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

HR Ramesh | news18
Updated:November 17, 2018, 12:23 PM IST
84ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರ ದೋಷ
ಇದು ಸರ್ಕಾರದ ಅಧಿಕೃತ ವೆಬ್​ಸೈಟ್​ ಆಗಿದ್ದು, ಸಚಿವ ಆರ್​.ವಿ.ದೇಶಪಾಂಡೆ ಉದ್ಘಾಟನೆ ಮಾಡಿದ್ದಾರೆ. ಕನ್ನಡ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರಗಳನ್ನೇ ತಪ್ಪಾಗಿ ಬರೆದಿದ್ದು ಆಭಾಸವೆನಿಸುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
HR Ramesh | news18
Updated: November 17, 2018, 12:23 PM IST
ಬೆಂಗಳೂರು (ನ.17): ಮುಂದಿನ ವರ್ಷದ ಜನವರಿ 4ರಂದು ಧಾರವಾಡದಲ್ಲಿ ನಡೆಯಲಿರುವ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರಗಳು ತಪ್ಪು ತಪ್ಪಾಗಿ ಮುದ್ರಣಗೊಂಡಿವೆ.

ಸಮ್ಮೇಳನದ ವೆಬ್​ಸೈಟ್​ www.abkssdwd.org ತೆರೆದರೆ ಆರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಹಾಗೂ ಹುಬ್ಬಳ್ಳಿ-ಧಾರವಾಡದ ಪ್ರಸಿದ್ಧ ಸ್ಥಳಗಳ ಚಿತ್ರಗಳನ್ನು ಪ್ರಕಟಿಸಲಾಗಿದೆ. ಅವುಗಳಿಗೆ ನೀಡಿರುವ ಚಿತ್ರ ಶೀರ್ಷಿಕೆಯಲ್ಲಿ ಅಕ್ಷರ ದೋಷ ಕಂಡು ಬಂದಿದೆ.

ಜ್ಞಾನಪೀಠ ಪುರಸ್ಕೃತರ ಚಿತ್ರದಲ್ಲಿ 'ಕವಿಗಳ ಬೀಡು, ಸಾಹಿತಿಗಳ ಹಿರಿನಾಡು - ಇದುವೇ ನಮ್ಮ ಧಾರವಾಡ ಸೋಗಡು' ಎಂದು ಬರೆಯಲಾಗಿದೆ. ಇಲ್ಲಿ 'ಸೊಗಡು' ಎಂದು ಬರೆಯಬೇಕಾಗಿತ್ತು. ಕರ್ನಾಟಕ ಕಾಲೇಜು ಎಂದು ಬರೆಯುವ ಬದಲು 'ಕರ್ನಾಟಕ ಕಾಲೇಜ', 'ಐಟಿ ಪಾರ್ಕ' ಎಂದು ಪ್ರಕಟಿಸಿದೆ. ಹಾಗೆಯೇ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಎಂಬುದನ್ನು 'ಕನಾಠಕ ಜಾನಪದ ವಿಶ್ವವಿದ್ಯಾಲಯ' ಎಂದು ಬರೆಯಲಾಗಿದೆ. ಇದಷ್ಟೇ ಅಲ್ಲದೇ, ಇನ್ನು ಹಲವು ಅಕ್ಷರ ದೋಷಗಳು ವೆಬ್​ಸೈಟ್​ನಲ್ಲಿ ಕಂಡು ಬಂದಿದೆ.

ಇದನ್ನು ಓದಿ: ಜನವರಿ 6ರಿಂದ ಧಾರವಾಡದಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಕ್ಷರ ಜಾತ್ರೆ ಮುಂದೂಡಿಕೆಗೆ ಕಾರಣವೇನು?

ಇದು ಸರ್ಕಾರದ ಅಧಿಕೃತ ವೆಬ್​ಸೈಟ್​ ಆಗಿದ್ದು, ಸಚಿವ ಆರ್​.ವಿ.ದೇಶಪಾಂಡೆ ಉದ್ಘಾಟನೆ ಮಾಡಿದ್ದಾರೆ. ಕನ್ನಡ ಸಮ್ಮೇಳನದ ವೆಬ್​ಸೈಟ್​ನಲ್ಲಿ ಕನ್ನಡ ಅಕ್ಷರಗಳನ್ನೇ ತಪ್ಪಾಗಿ ಬರೆದಿದ್ದು ಆಭಾಸವೆನಿಸುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

First published:November 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ