HOME » NEWS » State » KANNADA SHOULD BE THE LANGUAGE OF BUSINESS EVEN IF SOMEONE ELSE COMES HERE SAYS HS VENKATESHTMURTHY HK

ಬೇರೆಯವರು ಇಲ್ಲಿ ಬಂದು ನೆಲೆಸಿದರೂ ಕನ್ನಡವೇ ವ್ಯವಹಾರ ಭಾಷೆಯಾಗಬೇಕು ; ಎಚ್.ಎಸ್.ವೆಂಕಟೇಶಮೂರ್ತಿ

kannada sahithya sammlelana: ಗಡಿ ಪ್ರಾಂತ್ಯಗಳು ಬಹುಭಾಷಾ ಸಂಸ್ಕೃತಿಯನ್ನು ಒಪ್ಪಿಕೊಳ್ಳೋದು ಅನಿವಾರ್ಯ ಹಾಗೆಯೇ ಗಡಿಯಲ್ಲಿ ನೆಲೆಸಿರುವ ಗ್ರಾಮಗಳಿಸಿ ತುರ್ತಾಗಿ ಗಡಿಗ್ರಾಮ ಮನ್ನಣೆ ನೀಡಬೇಕಿದೆ.

G Hareeshkumar | news18-kannada
Updated:February 5, 2020, 6:15 PM IST
ಬೇರೆಯವರು ಇಲ್ಲಿ ಬಂದು ನೆಲೆಸಿದರೂ ಕನ್ನಡವೇ ವ್ಯವಹಾರ ಭಾಷೆಯಾಗಬೇಕು ; ಎಚ್.ಎಸ್.ವೆಂಕಟೇಶಮೂರ್ತಿ
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ್​ ಕಂಬಾರ್ ಅವರು ಸಮ್ಮೇಳನಾಧ್ಯಕ್ಷ ಎಚ್ ಎಸ್ ವೆಂಕಟೇಶಮೂರ್ತಿಯವರಿಗೆ ಭಾವುಟ ಹಸ್ತಾಂತರಿಸಿದರು​
  • Share this:
ಕಲಬುರ್ಗಿ ಫೆ.05) : ನಾವು ಕಲಿಯ ಬೇಕಾಗಿದ್ದು ಕನ್ನಡದಲ್ಲಿ ಬೇರೆಯವರು ಇಲ್ಲಿ ಬಂದು ನೆಲೆಸಿದರೂ ವ್ಯವಹಾರ ಭಾಷೆ ಕನ್ನಡವಾಗಬೇಕು. ಇಂಗ್ಲೀಷ್‌ ವಿಶ್ವ ಭಾಷೆ ಎನ್ನುವುದು ಕಟ್ಟುಕತೆ. ಹಣ ಸಂಪಾದನೆಗಾಗಿ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್‌ ಕಲಿಕೆಯನ್ನು ದಂಧೆಯನ್ನಾಗಿಸಿ ಕೊಂಡಿದ್ದಾರೆ ಎಂದು ಅಖಿಲ ಭಾರತ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್.ಎಸ್.ವೆಂಕಟೇಶಮೂರ್ತಿ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡುತ್ತಾ ಅವರು, ಕರ್ನಾಟಕದಲ್ಲಿ ಇನ್ನೂ ಗಡಿ ವಿವಾದಗಳು ಬಗೆಹರಿದಿಲ್ಲ. ಕನ್ನಡದ ಪರವಾಗಿ ಬಂದ ವರದಿಗಳು ಅನುಷ್ಠಾನಗೊಂಡಿಲ್ಲ ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿಹಾಕಲು ಯತ್ನಿಸಬಾರದು ಎಂದರು.

ಗಡಿ ಪ್ರಾಂತ್ಯಗಳು ಬಹುಭಾಷಾ ಸಂಸ್ಕೃತಿಯನ್ನು ಒಪ್ಪಿಕೊಳ್ಳೋದು ಅನಿವಾರ್ಯ ಹಾಗೆಯೇ ಗಡಿಯಲ್ಲಿ ನೆಲೆಸಿರುವ ಗ್ರಾಮಗಳಿಸಿ ತುರ್ತಾಗಿ ಗಡಿಗ್ರಾಮ ಮನ್ನಣೆ ನೀಡಬೇಕಿದೆ. ಬಹುಭಾಷಾ ಸಂಸ್ಕೃತಿಯನ್ನು ನಾವು ಮಾನ್ಯ ನೀಡಬೇಕಿದೆ. ಅದರಲ್ಲಿಯೇ ಅಖಂಡ ಭಾರತದ ಹಿತವಿದೆ ಎಂದು ತಿಳಿಸಿದರು.

ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಕವಿಜನಮಾರ್ಗ ಸ್ಮರಣ ಸಂಚಿಕೆ ಹಾಗೂ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಅವರ ಕೃತಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇತರರಿಂದ ಬಿಡುಗಡೆ ಮಾಡಿದರು.

ನಾಳೆ ಬೆಳಗ್ಗೆ 10.30ಕ್ಕೆ ಪಂಚಾಂಗದ ಪ್ರಕಾರ ಸಂಪುಟ ವಿಸ್ತರಣೆ; ಎಷ್ಟು ಮಂದಿಗೆ ಸಚಿವ ಸ್ಥಾನ ಎಂಬುದು ಸಿಎಂಗೂ ಗೊತ್ತಿಲ್ಲ

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ಭಾರತ ತಾಯಿ ವಿರುದ್ಧ ಕನ್ನಡ ತಾಯಿಯನ್ನು ಎತ್ತಿಕಟ್ಟೋ ಕೆಲಸ ನಡೆದಿದೆ. ದೇಶದ ಪ್ರಶ್ನೆ ಬಂದಾಗ ಭಾರತ ಮಾತಾಕಿ ಜೈ ಅನ್ನಬೇಕಾಗುತ್ತದೆ. ರಾಜ್ಯದ ಪ್ರಶ್ನೆ ಬಂದಾಗ ನಾವ್ಯಾರೂ ಸುಮ್ಮನಿರಲ್ಲ. ಇಂಗ್ಲೀಷ್ ಅನ್ನ ಕೊಡುವ ಭಾಷೆ ಅಂತ ಭ್ರಮೆ ಹುಟ್ಟಿಸಲಾಗುತ್ತಿದೆ. ಇದೊಂದು ಹುಚ್ಚು ಭ್ರಮೆ. ಇಂಗ್ಲೀಷ್ ಅಳವಡಿಸಿಕೊಳ್ಳದ ಎಷ್ಟು ಭಾಷೆಗಳು ವಿಶ್ವದಲ್ಲಿಲ್ಲ. ಇಂಗ್ಲೀಷ್‌ ಭ್ರಮೆಯಿಂದ ಹೊರಬರಬೇಕು. ಭಾಷಾ ಮಾಧ್ಯಮದ ಕುರಿತು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಚಿವರು ಹೇಳಿದರು
Youtube Video
 
First published: February 5, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories