ಎದೆ ನೋವಿನಿಂದ ಕಿರುತೆರೆಯ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ನಿಧನ

ನಿನ್ನೆ ಸಂಜೆ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿರುವಾಗಲೇ ಕೃಷ್ಣಮೂರ್ತಿ ನಾಡಿಗ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಕೃಷ್ಣಮೂರ್ತಿ ನಾಡಿಗ್

ಕೃಷ್ಣಮೂರ್ತಿ ನಾಡಿಗ್

 • Share this:
  ಬೆಂಗಳೂರು (ಅ. 18): ಕನ್ನಡ ಧಾರಾವಾಹಿ ಮತ್ತು ಚಿತ್ರರಂಗದ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ನಟನಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಮೂರ್ತಿ ನಾಡಿಗ್ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ. ನಿನ್ನೆ ಸಂಜೆ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿರುವಾಗಲೇ ಕೃಷ್ಣಮೂರ್ತಿ ನಾಡಿಗ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

  ಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 60ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕತೆ ಬರೆದಿದ್ದರು. ಕನ್ನಡದ ಹಲವು ಧಾರವಾಹಿಗಳಲ್ಲಿ ಕೃಷ್ಣಮೂರ್ತಿ ನಾಡಿಗ್ ಅಭಿನಯಿಸಿದ್ದರು. ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ಕೃಷ್ಣಮೂರ್ತಿ ನಾಡಿಗ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಿಲನ, ದೇವಿ, ಪಾರು ಮುಂತಾದ ಧಾರಾವಾಹಿಗಳಲ್ಲಿ ಕೃಷ್ಣಮೂರ್ತಿ ನಾಡಿಗ್ ನಟಿಸಿದ್ದಾರೆ.

  ನಿರ್ದೇಶಕ ಟಿ.ಎನ್. ಸೀತಾರಾಮ್ ಸೇರಿದಂತೆ ಕಿರುತೆರೆಯ ಅನೇಕ ನಿರ್ದೇಶಕರು, ನಟರು ಕೃಷ್ಣಮೂರ್ತಿ ನಾಡಿಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
  Published by:Sushma Chakre
  First published: