ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಕುರಿಗಾಹಿಗಳ (Shepherd) ಬದುಕಿನಲ್ಲಿಕಣ್ಣೀರು ತರಿಸಿದೆ. ಏಲಕ್ಕಿ ನಾಡಿನಲ್ಲಿ ಮೂರು ದಿನಗಳ ಕಾಲ ನಡೆದಿದ್ದ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ, ಅಜ್ಜಯನ ಗದ್ದುಗೆ ಮೈದಾನದ ಬಳಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿತ್ತು. ಸಾವಿರಾರು ಕನ್ನಡ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅಲ್ಲದೇ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಭರ್ಜರಿ ಭೋಜನ ಏರ್ಪಡಿಸಲಾಗಿತ್ತು. ಆದರೆ ಕಾರ್ಯಕ್ರಮದ ಬಳಿಕ ಮೈದಾನದಲ್ಲೇ ಉಳಿದುಕೊಂಡಿದ್ದ ಆಹಾರ ಕೊಳೆತು ನಾರುತ್ತಿದೆ. ಈ ಕೊಳತೆ ಆಹಾರವನ್ನು (Food waste) ಸೇವಿಸಿ 12ಕ್ಕೂ ಹೆಚ್ಚು ಕುರಿಗಳು ಫುಡ್ ಪಾಯಿಸನ್ನಿಂದ ಸಾವನ್ನಪ್ಪಿದೆ.
ಫುಡ್ ಪಾಯಿಸನ್ನಿಂದ 12ಕ್ಕೂ ಹೆಚ್ಚು ಕುರಿ ಸಾವು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನವರಾದ ಕುರಿಗಾಹಿಗಳು ತಮ್ಮ ಕುರಿಮಂದೆಯೊಂದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಈ ವೇಳೆ ಮೈದಾನದಲ್ಲಿ ಕೊಳೆತು ನಾರುತ್ತಿದ್ದ ಅನ್ನ, ರೊಟ್ಟಿ, ಚಪಾತಿ, ಪಲಾವ್ ಆಹಾರವನ್ನು ಕುರಿಗಳು ತಿಂದಿದ್ದವು. ಇದರ ಬೆನ್ನಲ್ಲೇ ಕೆಟ್ಟ ಆಹಾರ ತಿಂದ ಕಾರಣ ಕುರಿಗಳು ಫುಡ್ ಪಾಯಿಸನ್ನಿಂದ ಸತ್ತಿವೆ. ಇನ್ನೂ 10ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಚಿಂತಾಜನಕ ಎಂದು ತಿಳಿದು ಬಂದಿದೆ. ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಯಿಗಳ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಇದನ್ನೂ ಓದಿ: PPP Model: ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ
ಸತ್ತ ಕುರಿಗಳ ಎದುರು ಕುಳಿತು ಕಣ್ಣೀರಿಟ್ಟ ಕುರಿಗಾಯಿ ಮಹಿಳೆ
ಸತ್ತ ಕುರಿಗಳ ಎದುರು ಕುಳಿತು ಕುರಿಗಾಹಿ ಮಹಿಳೆ ಕಣ್ಣೀರು ಹಾಕುತ್ತಿದ್ದದ್ದು ನೋಡುಗರ ಮನಕರುವಂತೆ ಮಾಡಿತ್ತು. ಮೃತಪಟ್ಟ ಒಂದು ಕುರಿಗೆ ಸುಮಾರು 15 ರಿಂದ 20 ಸಾವಿರ ರೂಪಾಯಿ ಬೆಲೆ ಇದ್ದು, ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಕುರಿಗಳು ಸಾವನ್ನಪ್ಪಿದೆ. ಸ್ವಂತ ಮನೆಯೂ ಇಲ್ಲದೇ ಊರೂರು ತಿರುಗಾಡುವ ನಮಗೆ ಹೀಗಾದರೆ ಗತಿ ಏನು ಅಂತ ಕುರಿಗಾಹಿ ಮಹಿಳೆ ಲಕ್ಷ್ಮವ್ವ ಕಣ್ಣೀರಿಟ್ಟಿದ್ದಾರೆ.
ಸಹಾಯ ಮಾಡಿ ಅಂತ ಮನವಿ
ಬೆಳೆಗ್ಗೆಯಿಂದ ಕಾಡುಮೇಡುಗಳಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬಂದು ರಾತ್ರಿ ವೇಳೆಗೆ ಬಲೆಗೆ ಹಾಕಿದ್ದೇವು. ಆದರೆ ಅದು ಹೇಗೋ ಬಲೆಯಿಂದ ಹೊರ ಬಂದಿರೋ ಕುರಿಗಳು ಕೊಳೆತ ಆಹಾರ ಸೇವನೆ ಮಾಡಿವೆ. ಈ ವಿಚಾರ ನಮಗೆ ತಿಳಿಯುವ ವೇಳೆ ಹಲವು ಕುರಿಗಳು ಸಾವನ್ನಪ್ಪಿದ್ದವು. ಮನೆ ಕೂಡ ಇಲ್ಲದೇ ಊರೂರು ಅಲೆದು ಕುರಿ ಸಾಕುತ್ತಿದ್ದು, ದಯಮಾಡಿ ನಮಗೆ ಸಹಾಯ ಮಾಡಿ ಎಂದು ಲಕ್ಷ್ಮವ್ವ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Shivamogga: ಚಿಕಿತ್ಸೆ ದೊರೆಯದ್ದಕ್ಕೆ ಸಾವನ್ನಪ್ಪಿದ ಕುರಿಯನ್ನು ಆಸ್ಪತ್ರೆ ಮುಂದೆ ನೇತಾಕಿದ ರೈತ
17 ಮೀನುಗಾರರ ರಕ್ಷಣೆ
ಅರಬ್ಬೀ ಸಮುದ್ರದಲ್ಲಿ (Arabian Sea) ಬಂಡೆಗೆ ತಾಗಿ ಮುಳುಗುತ್ತಿದ್ದ ಬೋಟ್ನಿಂದ (Sea Boat) 17 ಮೀನುಗಾರರನ್ನ (Fisherman) ಕಾರವಾರದಲ್ಲಿ (Karwar) ರಕ್ಷಿಸಲಾಗಿದೆ. ಕುಮಟಾ ತಾಲೂಕಿನ ಕಡ್ಲೆ ಬಳಿ ಆಳ ಸಮುದ್ರದಲ್ಲಿ 17 ಜನ ಮೀನುಗಾರಿಕೆಗೆ ತೆರಳಿದ್ರು. ಮೀನು ಹಿಡಿದುಕೊಂಡು ವಾಪಸ್ಸಾಗುತ್ತಿದ್ದಾಗ ಘಟನೆ ನಡೆದಿದೆ. ಕರಾವಳಿ ಕಾವಲು ಪಡೆ (Coast Guard ) ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ 17 ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ