HOME » NEWS » State » KANNADA SAHITYA SAMMELANA GORGEOUS BEGINS FOR THE PARADE AT KALABURAGI HK

ಕಲಬುರ್ಗಿಯಲ್ಲಿ ಅದ್ಧೂರಿ ಕನ್ನಡಮ್ಮನ ಜಾತ್ರೆ; ಕಳೆಗಟ್ಟಿದ ಕಲಾತಂಡಗಳ ಮೆರವಣಿಗೆ, ಕನ್ನಡಪ್ರೀತಿ

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕಲಾತಂಡಗಳು ನೃತ್ಯ ಮೆರವಣಿಗೆ ವಿಶೇಷ ಮೆರುಗು ನೀಡಿದವು. ಸ್ವಯಂಪ್ರೇರಿತವಾಗಿ ರಾಜ್ಯದುದ್ದಗಲದಿಂದ ಆಗಮಿಸಿದ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಕನ್ನಡ ಪ್ರೀತಿ ಮೆರೆದರು.

news18-kannada
Updated:February 5, 2020, 7:02 PM IST
ಕಲಬುರ್ಗಿಯಲ್ಲಿ ಅದ್ಧೂರಿ ಕನ್ನಡಮ್ಮನ ಜಾತ್ರೆ; ಕಳೆಗಟ್ಟಿದ ಕಲಾತಂಡಗಳ ಮೆರವಣಿಗೆ, ಕನ್ನಡಪ್ರೀತಿ
ಸಮ್ಮೇಳನದಲ್ಲಿ ಕಲಾತಂಡಗಳ ಮೆರವಣಿಗೆ
  • Share this:
 ಕಲಬುರ್ಗಿ(ಫೆ.05) :  ಉರ್ದು ಪ್ರಭಾವವಿರುವ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲರವ ಜೋರಾಗಿ ನಡೆಯುತ್ತಿದೆ. ಸಮ್ಮೇಳನದ ಮೊದಲನೆಯ ದಿನವಾದ ಇಂದು ಕನ್ನಡದ ಡಿಂಡಿಮ ಮೊಳಗಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಅಕ್ಷರ ಜಾತ್ರೆ ತೇರನ್ನ ಎಳೆಯಲು ಅರವತ್ತಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಭಾಗವಹಿಸಿದ್ದರೆ, ಮೆರವಣಿಗೆಯಲ್ಲಿ ಕನ್ನಡಾಭಿಮಾನಿಗಳ ಪ್ರೀತಿ ಮನಸೂರೆಗೊಳ್ಳುವಂತಿತ್ತು.

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ವಿಶೇಷವಾಗಿ ಅಲಂಕಾರಿಸಿದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹಾಗೂ 10 ಸಾರೋಟದಲ್ಲಿ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೆರವೆಣಿಗೆ ಅದ್ದೂರಿಯಾಗಿ ನಡೆಯಿತು.

ಸಮ್ಮೇಳನದ ಹಿನ್ನಲೆಯಲ್ಲಿ ಕಲಬುರ್ಗಿ ರಂಗಮಂದಿರದಿಂದ ಹೊರವಲಯದ ವಿಶ್ವವಿದ್ಯಾಲಯದ ಬಳಿ ಆಯೋಜಿಸಿದ ಸಮ್ಮೇಳನದ ಮುಖ್ಯ ವೇದಿಕೆ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ 60 ಕಲಾ ತಂಡಗಳಿಂದ ಡೊಳ್ಳು ಕುಣಿತ, ದೊಡ್ಡಾಟ. ಕಡರಿ ಮಜಲು ಕುಣಿತ ಮತ್ತು ಚಮವಾದ್ಯ, ಲಂಬಾಣಿ ಕುಣಿತ. ಪುರವಂತಿಕೆ, ಪೋತರಾಜ ಕುಣಿತ, ಗೊಂಬೆ ಕುಣಿತ, ಮಹಿಳಾ ವೀರಗಾಸೆ, ವೀರಭದ್ರನ ಕುಣಿತ ಮನಸೆಳೆಯಿತು.

ಬೇರೆಯವರು ಇಲ್ಲಿ ಬಂದು ನೆಲೆಸಿದರೂ ಕನ್ನಡವೇ ವ್ಯವಹಾರ ಭಾಷೆಯಾಗಬೇಕು ; ಎಚ್.ಎಸ್.ವೆಂಕಟೇಶಮೂರ್ತಿ

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕಲಾತಂಡಗಳು ನೃತ್ಯ ಮೆರವಣಿಗೆ ವಿಶೇಷ ಮೆರುಗು ನೀಡಿದವು. ಸ್ವಯಂಪ್ರೇರಿತವಾಗಿ ರಾಜ್ಯದುದ್ದಗಲದಿಂದ ಆಗಮಿಸಿದ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಕನ್ನಡ ಪ್ರೀತಿ ಮೆರೆದರು. 85 ಮೀಟರ್ ಉದ್ದ ಕನ್ನಡದ ಧ್ವಜ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಕನ್ನಡ ಘೋಷಣೆಗಳು ಸಾಹಿತ್ಯಾಸಕ್ತರನ್ನು ಖುಷಿಗೊಳಿಸಿದವು.

ಮೆರವಣಿಗೆ ಭಾಗವಹಿಸಿದವರಿಗೆ ನೀರಿನ ದಾಹ ತಿರಿಸಲು ನೀರಿನ ವ್ಯವಸ್ಥೆ, ಸ್ವಯಂ ಸೇವೆ ಸಂಘಗಳಿಂದ ಚಾಕಲೇಟ್ ವಿತರಣೆ, ಸ್ಥಳೀಯರಿಂದ ಸ್ವಯಂ ಪ್ರೇರಿತವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು. ನಮ್ಮೂರಿನಲ್ಲಿ ನಡೆಯುತಿರುವ ಜಾತ್ರೆ ಗಮನೆ ಸೆಳೆಯುವ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮನೆಯ ಮುಂದೆ ವಿಶೇಷ ರಂಗೋಲಿಯ ಚಿತ್ತಾರವನ್ನ ಬಿಡಿಸಿದರು. 6 ಕಿಲೋ ಮೀಟರ್ ದೂರು ಕ್ರಮಿಸಬೇಕಾದ ಕೆಲವರ ದಾರಿಯ ಮಧ್ಯ ದಣಿದು ಕೆಲ ವಾಹನಗಳು ಹೇರಿ ಹೋಗುವ ದೃಶ್ಯ ಕಂಡು ಬಂದಿತು.

ಅಕ್ಷರ ಜಾತ್ರೆಗೆ ಸಾರಿಗೆ ಇಲಾಖೆಯಿಂದ ಬಂಪರ್​ ಕೊಡುಗೆ - ಎಲ್ಲೆ ಸಂಚರಿಸಿದ್ರೂ ಕೇವಲ 5 ರೂ ಮಾತ್ರಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಕನ್ನಡಾಭಿಮಾನಿಗಳು ವಿಶೇಷ ಉಡುಪು ಧರಿಸಿರುವುದು, ಮೈಸೂರು ಮಹಿಳೆಯ ಸೈಕ್ಟಿಂಗ್, ಬೆಳಗಾವಿ ಮೂಲದ ವ್ಯಕ್ತಿ ವಿಶೇಷ ಉಡುಪು ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುಜಾಗ್ರತ ಕ್ರಮ ವಹಿಸುವ ಮೂಲಕ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
Youtube Video
First published: February 5, 2020, 5:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories