Kannada Rajyotsava: ಅಚ್ಚ ಕನ್ನಡದಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
Kannada Rajyotsava: ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಟ ಕಿಚ್ಚ ಸುದೀಪ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ನಾನಾ ಗಣ್ಯರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

ನರೇಂದ್ರ ಮೋದಿ.
- News18 Kannada
- Last Updated: November 1, 2020, 8:10 AM IST
ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.
— Narendra Modi (@narendramodi) November 1, 2020
ಹಾಗೇ, ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಟ ಕಿಚ್ಚ ಸುದೀಪ್, ಮೈಸೂರು ರಾಜಮನೆತನದ ಯದುವೀರ ಒಡೆಯರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ನಾನಾ ಗಣ್ಯರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸುವ ಪುಣ್ಯದ ಕೆಲಸಕ್ಕೆ ನಮ್ಮನ್ನು ಮತ್ತೆ ಮತ್ತೆ ಸಮರ್ಪಿಸಿಕೊಳ್ಳುವ ದಿನ. ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ, ಬೆಳೆಸಲು ದುಡಿದ, ಮಡಿದ ಹಿರಿಯ ಮಹಾಪುರುಷರಿಗೆ ತಲೆ ಬಾಗುವ ದಿನ. ಆ ಪುಣ್ಯ ಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ. ಕನ್ನಡ ಮೊದಲು, ನಾನು ಮೊದಲು ಕನ್ನಡಿಗ. ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭ ಕೋರಿದ್ದಾರೆ.
ಕನ್ನಡ ರಾಜ್ಯೋತ್ಸವ ಎಂದರೆ..
ನಮ್ಮ ಜನ,ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ
ಕನ್ನಡತನವನ್ನು ಉಳಿಸಿ-ಬೆಳೆಸಲು ದುಡಿದ-ಮಡಿದ ಹಿರಿಯ ಮಹಾಪುರುಷರಿಗೆ ತಲೆಬಾಗುವ ದಿನ.
ಆ ಪುಣ್ಯಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ.
ಕನ್ನಡ ಮೊದಲು,
ನಾನು ಮೊದಲು ಕನ್ನಡಿಗ.#ಕನ್ನಡರಾಜ್ಯೋತ್ಸವ pic.twitter.com/4mhVmi1DQ4
— Siddaramaiah (@siddaramaiah) November 1, 2020
ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ "ಕನ್ನಡ", ಹಾರುತಲಿರಲಿ ನಮ್ಮ ತಾಯ್ನಾಡಿನ ಸಂಸ್ಕೃತಿಯ ಬಣ್ಣಗಳ ಪತಾಕೆ, ಝೇಂಕರಿಸಲಿ ಕರುನಾಡಿನ ಘೋಷ ವಾಕ್ಯ,, ಹರಡಲಿ ಎಲ್ಲೆಡೆ ಕನ್ನಡದ ಕಂಪು. ಕನ್ನಡಾಂಬೆಯ ಸಮಸ್ತ ಕುಲಕೋಟಿಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ "ಕನ್ನಡ", ಹಾರುತಲಿರಲಿ ನಮ್ಮ ತಾಯ್ನಾಡಿನ ಸಂಸ್ಕೃತಿಯ ಬಣ್ಣಗಳ ಪತಾಕೆ, ಝೇಂಕರಿಸಲಿ ಕರುನಾಡಿನ ಘೋಷ ವಾಕ್ಯ,, ಹರಡಲಿ ಎಲ್ಲೆಡೆ ಕನ್ನಡದ ಕಂಪು.,
ಕನ್ನಡಾಂಬೆಯ ಸಮಸ್ತ ಕುಲಕೋಟಿಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು., pic.twitter.com/HGAYf0aKZ9
— Kichcha Sudeepa (@KicchaSudeep) November 1, 2020
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನೆಲ ಜಲ ಭಾಷೆಯ ವಿಷೇಶವಾಗಿ ಯುವಜನತೆಯ ಉದ್ಯೋಗಗಳ ರಕ್ಷಣೆಗೆ ಜನ ಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಬೇಕಾಗಿದೆ ಎಂದು ಯದುವೀರ್ ಒಡೆಯರು ಶುಭ ಹಾರೈಸಿದ್ದಾರೆ.
ಎಲ್ಲಾದರು ಇರು ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.#ಕನ್ನಡರಾಜ್ಯೋತ್ಸವ ದ ಶುಭಾಶಯಗಳು.
ನೆಲ ಜಲ ಭಾಷೆಯ ವಿಷೇಶವಾಗಿ ಯುವಜನತೆಯ ಉದ್ಯೋಗಗಳ ರಕ್ಷಣೆಗೆ ಜನ ಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಬೇಕಾಗಿದೆ.
ಕಳೆದ ವರ್ಷ @isro #ಕರ್ನಾಟಕರಾಜ್ಯೋತ್ಸವದ ಕ್ಷಣ. pic.twitter.com/fKPons3y9O
— Yadhuveer K.C. Wodiyar. (@YaduveerWodiyar) November 1, 2020
ಕನ್ನಡವೇ ಧನಧಾನ್ಯ, ಕನ್ನಡವೇ ಮನೆಮಾನ್ಯ. 'ನುಡಿಯಿಂದ ನಾಡು' ಎಂಬ ಸಂಕಲ್ಪದಿಂದ ಉದಯಿಸಿದ ಚಂದದ ನಾಡಿನ, ಸ್ವಚ್ಛ ಮನಸ್ಸಿನ ಸಮಸ್ತ ಜನತೆಗೆ 65ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. "ಕನ್ನಡ ಕಲಿತು ಬಾಳೋದು ಹಿರಿಮೆ,
ಕನ್ನಡಿಗರೊಂದಿಗೆ ಬೆರೆತು ಬಾಳೋದು ಗರಿಮೆ" ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಶುಭಾಶಯ ಕೋರಿದ್ದಾರೆ.
ಕನ್ನಡವೇ ಧನಧಾನ್ಯ, ಕನ್ನಡವೇ ಮನೆಮಾನ್ಯ
'ನುಡಿಯಿಂದ ನಾಡು' ಎಂಬ ಸಂಕಲ್ಪದಿಂದ ಉದಯಿಸಿದ ಚಂದದ ನಾಡಿನ, ಸ್ವಚ್ಛ ಮನಸ್ಸಿನ ಸಮಸ್ತ ಜನತೆಗೆ 65ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
"ಕನ್ನಡ ಕಲಿತು ಬಾಳೋದು ಹಿರಿಮೆ,
ಕನ್ನಡಿಗರೊಂದಿಗೆ ಬೆರೆತು ಬಾಳೋದು ಗರಿಮೆ".#ಕನ್ನಡರಾಜ್ಯೋತ್ಸವ pic.twitter.com/0CtSgbbByU
— Kamal Pant, IPS (@CPBlr) November 1, 2020
#ಕನ್ನಡ ರಾಜ್ಯೋತ್ಸವ ಇಂದು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.