• Home
  • »
  • News
  • »
  • state
  • »
  • Kannada Rajyotsava: ರಾಜ್ಯಾದ್ಯಂತ ಸಂಭ್ರಮದ ಕನ್ನಡ ರಾಜ್ಯೋತ್ಸವ; ಬೆಳಗಾವಿಯಲ್ಲಿ ಶಿವಸೇನೆ ಪುಂಡರಿಗೆ ಬ್ರೇಕ್

Kannada Rajyotsava: ರಾಜ್ಯಾದ್ಯಂತ ಸಂಭ್ರಮದ ಕನ್ನಡ ರಾಜ್ಯೋತ್ಸವ; ಬೆಳಗಾವಿಯಲ್ಲಿ ಶಿವಸೇನೆ ಪುಂಡರಿಗೆ ಬ್ರೇಕ್

ಕನ್ನಡ ಧ್ವಜ

ಕನ್ನಡ ಧ್ವಜ

ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್ ಬಳಿಯ ನೃಪತುಂಗ ಕಲ್ಯಾಣ ಮಂಟಪದಿಂದ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ ಹಾಗೂ ಮೆರವಣಿಗೆ ನಡೆಯಲಿದೆ.

  • News18 Kannada
  • Last Updated :
  • Karnataka, India
  • Share this:

ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ ಮನೆ ಮಾಡಿದೆ. ರಾಜ್ಯೋತ್ಸವ ಜೊತೆಗೆ ಅಪ್ಪು ಆರಾಧನೆ ಕಾರ್ಯಕ್ರಮ ಕೂಡ ನಡೆಯಲಿದೆ. ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದ್ದು, ಪ್ರತಿ ಶಾಲೆ, ಗ್ರಾಮ, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದೆ. ಬೆಂಗಳೂರಿನ (Bengaluru) ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕನ್ನಡ ಧ್ವಜಾರೋಹಣ (Kannada Flag) ಮಾಡಲಿದ್ದಾರೆ. ಬಳಿಕ ರಾಜ್ಯವನ್ನುದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್ ಬಳಿಯ ನೃಪತುಂಗ ಕಲ್ಯಾಣ ಮಂಟಪದಿಂದ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ ಹಾಗೂ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಜೊತೆ ಸಂತೋಷ ಕೂಟ ನಡೆಯಲಿದೆ.


ಮೆರವಣಿಗೆಗೆ ಬಂದ್ರೆ ಹೋಳಿಗೆ ಊಟ


ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಹೋಳಿಗೆ ಊಟ ನೀಡಲಾಗ್ತಿದೆ. ಹಾಗಾಗಿ 1 ಲಕ್ಷ ಹೋಳಿಗೆ ತಯಾರಾಗ್ತಿದೆ.


50 ಸಾವಿರ ಕನ್ನಡಿಗರಿಗೆ ತಲಾ 2 ಹೋಳಿಗೆ ಜೊತೆಗೆ ಅನ್ನ ಸಾಂಬಾರ್, ವಿವಿಧ ಪಲ್ಯಗಳನ್ನ ನೀಡಲು ಸಿದ್ಧತೆ ನಡೆದಿದೆ. ಬೆಳಗಾವಿ ಸರ್ದಾರ್ ಮೈದಾನದಲ್ಲಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಳಿಗೆ ದಾಸೋಹ ನಡೆಯಲಿದೆ. ಯಮಕನಮರಡಿ 200 ಜನ ಬಾಣಸಿಗರಿಂದ ಅಡುಗೆ ಸಿದ್ಧತೆ ಆಗ್ತಿದೆ.


Kannada Rajyothsava celebration in Karnataka today mrq
ಕರ್ನಾಟಕ ರಾಜ್ಯೋತ್ಸವ


ಶಿವಸೇನೆ ಪುಂಡರಿಗೆ ಬ್ರೇಕ್


ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಶಿವಸೇನೆ ಮಾಡಿದ್ದ ಕುತಂತ್ರ ಫೇಲ್ ಆಗಿದೆ. ವಿಜಯ ಜ್ಯೋತಿ ಹಿಡಿದು ಬೆಳಗಾವಿಯತ್ತ ಬರ್ತಿದ್ದ ಶಿವಸೇನೆ ಪುಂಡರಿಗೆ ಬೆಳಗಾವಿ ಪೊಲೀಸರು ಗಡಿಯಲ್ಲೇ ಬ್ರೇಕ್ ಹಾಕಿದ್ದಾರೆ.


ಶಿವಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಮೂಲಕ ಬೆಳಗಾವಿಗೆ ಹೊರಟಿದ್ರು. ಬೆಳಗಾವಿಗೆ ತೆರಳಲು ಬಿಡಬೇಕು ಎಂದು ಕ್ಯಾತೆ ತೆಗೆದು ಪ್ರತಿಭಟನೆಗೆ ಕುಳಿತ್ರು. ಆದ್ರೆ ಪೊಲೀಸರು ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಲಾಗಿದೆ.


ಕರಾಳ ದಿನ ಆಚರಣೆಗೆ ಮುಂದಾಗಿದ್ದ ಎಂಇಎಸ್


ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದ್ದು, ರಾಜ್ಯೋತ್ಸವ ಆಚರಣೆಗೆ ವಿರುದ್ಧವಾಗಿ ಎಂಇಎಸ್ ಕರಾಳ ದಿನ ಆಚರಣೆಗೆ ಮುಂದಾಗಿತ್ತು.


ಇದನ್ನೂ ಓದಿ:  Gandhada Gudi: ಗಂಧದ ಗುಡಿ ಚಿತ್ರವನ್ನು ಶಾಲಾ ಮಕ್ಕಳಿಗೆ ತೋರಿಸಿ; ಚಿಂತಕರಿಂದ ಶಿಕ್ಷಣ ಸಚಿವರಿಗೆ ಮನವಿ


ಬೆಳಗಾವಿಯ ಬಾಚಿ ಗ್ರಾಮದ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಶಿವಸೇನೆ ನಾಯಕರು ರಾಜ್ಯ ಪ್ರವೇಶ ಮಾಡದಂತೆ ತಪಾಸಣೆ ಕೈಗೊಳ್ಳಲಾಗಿದೆ. ಚೆಕ್ ಪೋಸ್ಟ್​ಗೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Kannada Rajyothsava celebration in Karnataka today mrq
ಕರ್ನಾಟಕ ರಾಜ್ಯೋತ್ಸವ


ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರಾತ್ರಿ 12 ಗಂಟಗೆ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯ್ತು.


ಅಪ್ಪುಗೆ ಕರ್ನಾಟಕ ರತ್ನ


ಇಂದು ವಿಧಾನಸೌಧದ ಮುಂದೆ ಅಪ್ಪುಗೆ ಕರ್ನಾಟಕ ರತ್ನ ಗೌರವ ಅರ್ಪಿಸಲು ಎಲ್ಲಾ ಸಿದ್ಧತೆಗಳೂ ಆಗ್ತಿದೆ. ವಿಧಾನಸೌಧಕ್ಕೆ (Vidhanasoudha) ಕಲರ್ ಫುಲ್ ಆಗಿ ಸಿಂಗಾರ ಮಾಡಲಾಗಿದೆ. ಪಾಸ್ ಪಡೆದ ಏಳು ಸಾವಿರ ಜನಕ್ಕೂ ಆಸನಗಳ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ:  Puneeth Rajkumar: ಇಂದು ಅಪ್ಪುಗೆ ಕರ್ನಾಟಕ ರತ್ನ; ಮಧ್ಯಾಹ್ನದಿಂದ ವಿಧಾನಸೌಧ ರಸ್ತೆ ಬಂದ್, ಬದಲಿ ಮಾರ್ಗ ಹೀಗಿದೆ


VIP ಹಾಗೂ VVIP ಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿಎಂ, ಗೃಹ ಸಚಿವರು, ಪುನೀತ್ ಪತ್ನಿ ಅಶ್ವಿನಿ (Ashwini PuneethRajkumar), ರಜನಿಕಾಂತ್ (Rajinikant), ಎನ್​ಟಿಆರ್ (NTR), ಆರ್ ಅಶೋಕ್ (R Ashok) ಸೇರಿ ಆಯ್ದ ಸಚಿವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ.

Published by:Mahmadrafik K
First published: