ಪೈಲ್ವಾನ್ ಸಿನಿಮಾ ಪೈರಸಿ, ದರ್ಶನ್ ಅಭಿಮಾನಿ ಅರೆಸ್ಟ್; ಬುಡಮುಟ್ಟುವ ತನಕ ಸುಮ್ಮನೆ ಕೂರಲ್ಲ; ನಟ ಸುದೀಪ್ ಆವಾಜ್!

ಇದೀಗ ಕೊನೆಗೂ ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ ಆರೋಪದ ಮೇಲೆ ಪೊಲೀಸರು ದರ್ಶನ್ ಅಭಿಮಾನಿಯೊಬ್ಬನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರೆ. ಈ ಪ್ರಸಂಗ ಇದೀಗ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.

MAshok Kumar | news18-kannada
Updated:September 20, 2019, 10:10 PM IST
ಪೈಲ್ವಾನ್ ಸಿನಿಮಾ ಪೈರಸಿ, ದರ್ಶನ್ ಅಭಿಮಾನಿ ಅರೆಸ್ಟ್; ಬುಡಮುಟ್ಟುವ ತನಕ ಸುಮ್ಮನೆ ಕೂರಲ್ಲ; ನಟ ಸುದೀಪ್ ಆವಾಜ್!
ಇದೀಗ ಕೊನೆಗೂ ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ ಆರೋಪದ ಮೇಲೆ ಪೊಲೀಸರು ದರ್ಶನ್ ಅಭಿಮಾನಿಯೊಬ್ಬನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರೆ. ಈ ಪ್ರಸಂಗ ಇದೀಗ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.
  • Share this:
ಬೆಂಗಳೂರು (ಸೆಪ್ಟೆಂಬರ್.20); ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದವರ ಹಿಂದಿರುವ ಶಕ್ತಿ ಯಾವುದು? ಎಂದು ಬುಡಮುಟ್ಟುವ ತನಕ ನಾನು ಸುಮ್ಮನೆ ಕೂರುವುದಿಲ್ಲ ಎಂದು ಚಿತ್ರನಟ ಸುದೀಪ್ ಟ್ವಿಟರ್​ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಎಸ್.ಕೃಷ್ಣ ನಿರ್ದೇಶಿಸಿ ನಾಯಕ ನಟ ಸುದೀಪ್ ಅಭಿನಯಿಸಿದ್ದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಕಳೆದ ವಾರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ, ಈ ನಡುವೆ ಮೊಬೈಲ್​ಗಳಲ್ಲಿ ಈ ಚಿತ್ರದ ಪೈರಸಿ ಕಾಪಿ ಓಡಾಡುತ್ತಿದ್ದು ಚಿತ್ರತಂಡವನ್ನು ದಂಗುಬಡಿಸಿದೆ.

ಕನ್ನಡದ ಪೈಕಿ ದೊಡ್ಡ ಬಜೆಟ್ ಸಿನಿಮಾ ಆಗಿರುವ ಪೈಲ್ವಾನ್ ಪೈರಸಿ ಸುದ್ದಿ ಚಿತ್ರತಂಡವನ್ನು ಬಹುದೊಡ್ಡ ಆತಂಕಕ್ಕೆ ದೂಡಿತ್ತು. ಹೀಗಾಗಿ ಇದರ ಹಿಂದಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಿಗಿಸುವಂತೆ ಚಿತ್ರತಂಡ ಪೊಲೀಸರ ಬಳಿ ದೂರು ದಾಖಲಿಸಿತ್ತು.

ಆದರೆ, ಈ ನಡುವೆ ಪೈಲ್ವಾನ್ ಚಿತ್ರದ ಪೈರಸಿ ಮಾಡಿದ್ದು ದರ್ಶನ್ ಅಭಿಮಾನಿಗಳೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀಪ್-ದರ್ಶನ್ ಅಭಿಮಾನಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಕೆಸರೆರಚಾಟಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಕಿಚ್ಚ-ದಚ್ಚು ಫ್ಯಾನ್ಸ್ ಪೈರಸಿ ಫೈಟ್: ಪೈಲ್ವಾನ್ ಹುಡುಗರಿಗೆ ಖಡಕ್ ಉತ್ತರ ಕೊಟ್ರು ದಾಸನ ಅಭಿಮಾನಿಗಳು

ಇದೀಗ ಕೊನೆಗೂ ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ ಆರೋಪದ ಮೇಲೆ ಪೊಲೀಸರು ದರ್ಶನ್ ಅಭಿಮಾನಿಯೊಬ್ಬನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರೆ. ಈ ಪ್ರಸಂಗ ಇದೀಗ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.

ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ನಾಯಕ ನಟ ಸುದೀಪ್, “ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳ ಮಾತ್ರ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ “ಈಗ ಪೈರಸಿ ವಿಷಯ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಅದರ ಬುಡವನ್ನು ಮುಟ್ಟುವ ತನಕ ನಾನಿನ್ನು ಸುಮ್ಮನೆ ಕೂರುವುದಿಲ್ಲ. ಯಾರೆಲ್ಲಾ ನಮ್ಮ ಶ್ರಮದ ಜತೆ ಆಟವಾಡಿದ್ದಾರೋ ಅವರೆಲ್ಲರೂ ಬೆಲೆ ತೆರಲೇಬೇಕು. ಪೈರಸಿಗಿಂತ ಹೆಚ್ಚಾಗಿ ಪೈರಸಿ ಮಾಡಿರುವವರ ಬಗ್ಗೆ ನನಗೆ ಹೆಚ್ಚು ಕುತೂಹಲ ಇದೆ” ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಸುದೀಪ್ ಹೀಗೆ ಟ್ವೀಟ್ ಮಾಡುವ ಮೂಲಕ ನಟ ದರ್ಶನ್​ಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸುತ್ತಿದ್ದಾರೆ ಎಂದು ಗಾಂಧಿ ನಗರದ ವಠಾರಗಳು ಮಾತನಾಡುತ್ತಿವೆ. ಅಲ್ಲದೆ, ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಸುತ್ತಿನ ಸುದೀಪ್-ದರ್ಶನ್ ಕೆಸರೆರಚಾಟ ಆರೋಪ-ಪ್ರತ್ಯಾರೋಪಕ್ಕೂ ವೇದಿಕೆ ಕಲ್ಪಿಸಿದೆ.

ಆದರೆ, ನಿಜಕ್ಕೂ ಈ ಪೈರಸಿ ಭೂತದ ಹಿಂದಿನ ಕಾಣದ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಪೊಲೀಸರ ವಿಚಾರಣೆ ಮಾತ್ರ ಸೂಕ್ತ ಉತ್ತರ ನೀಡಲು ಸಾಧ್ಯ.

ಇದನ್ನೂ ಓದಿ : ಪೈರಸಿಯನ್ನು ಮೆಟ್ಟಿನಿಂತ ಪೈಲ್ವಾನ್: ಮೊದಲ ವಾರದಲ್ಲೇ 100 ಕೋಟಿ ಕ್ಲಬ್​ಗೆ ಕಿಚ್ಚ

First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading