ಬೆಂಗಳೂರು: ನಮಗೆ ನಂದಿನಿಗೆ (Nandini) ಬೇಕು, ಅಮೂಲ್ (Amul) ಬೇಡವೇ ಬೇಡ. ಅಮೂಲ್ನೊಂದಿಗೆ ನಂದಿನಿ ವಿಲೀನ ಮಾಡಬೇಡಿ ಎಂದು ಬೆಂಗಳೂರಲ್ಲಿ ಕನ್ನಡ ಸಂಘಟನೆಗಳು (Kannada Organization) ಪ್ರತಿಭಟನೆ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಗೋ ಬ್ಯಾಕ್ ಅಮೂಲ್ ಅಭಿಯಾನ (Go Back Amul Campaign) ಮಾಡಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗಿದ್ದು, ಅಮೂಲ್ ಉತ್ಪನ್ನಗಳನ್ನು ಒಡೆದು ಹಾಕಿ ಆಕ್ರೋಶ ಹೊಹಾಕಲಾಯ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯಿಂದಾಗಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಟ್ರಾಫಿಕ್ ಉಂಟಾಗಿತ್ತು.
ಅಮೂಲ್ಗೆ ಡಿಕೆಶಿ ವಿರೋಧ
ರಾಜ್ಯದ ಹಾಲು ಮಾರುಕಟ್ಟೆಯನ್ನು, ಗುಜರಾತ್ನ ಅಮುಲ್ ಕಂಪನಿ ಅತಿಕ್ರಮಿಸಿಕೊಳ್ಳಲು ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ.
ಚುನಾವಣೆ ಹೊಸ್ತಿಲಿನಲ್ಲಿ ಪ್ರತಿಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಂಡಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಸನದ ಕೆಎಂಎಫ್ ನಂದಿನಿ ಹಾಲಿನ ಕೇಂದ್ರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೋದಿ ಬಿಟ್ರೆ ಬೇರೆ ಏನೂ ಕಾಣಲ್ಲ
ಬಿಜೆಪಿ ಅವರಿಗೆ ಅಮುಲ್ ಪರಿಣಾಮದ ಮಾಹಿತಿ ಇಲ್ಲ. ಬಿಜೆಪಿ ಅವರ ಕಣ್ಣಿಗೆ ಮೋದಿ ಬಿಟ್ಟರೆ ಏನೂ ಕಾಣಲ್ಲ. ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೆ ಇದ್ರೆ ನಂದಿನಿ ಮುಳುಗಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ಸ್ಪಷ್ಟನೆ
"ನಂದಿನಿ"ಕರ್ನಾಟಕದ ಹೆಮ್ಮೆಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ನಂಬರ್ 1 ಆಗಿಸಲು, ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿದಂತೆ, ಮೆಗಾ ಡೈರಿಗಳ ಸ್ಥಾಪನೆ ಸಹ ನಮ್ಮ ಅವಧಿಯ ಸಾಧನೆಯಾಗಿದೆ. ನಂದಿನಿಯ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: BJP Government: ಕೇಂದ್ರೀಯ ಮೀಸಲು ಪಡೆ ಪರೀಕ್ಷೆಯಲ್ಲಿಲ್ಲ ಕನ್ನಡಕ್ಕೆ ಅವಕಾಶ; ಸಿದ್ದರಾಮಯ್ಯ, ಹೆಚ್ಡಿಕೆ ಕಿಡಿ
ಕಾಂಗ್ರೆಸ್ ಪಕ್ಷ ಎಲ್ಲದರಲ್ಲೂ ರಾಜಕೀಯ ಮಾಡುವುದು ರಾಜ್ಯದ ಪ್ರಗತಿಯ ದೃಷ್ಟಿಯಿಂದ ಸೂಕ್ತವಾದುದಲ್ಲ ಎಂದು ವಿಪಕ್ಷ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ