ಯಾದಗಿರಿಯ ಕಸಾಯಿ ಖಾನೆಯಲ್ಲಿ ಗೋವುಗಳ ಹತ್ಯೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ 

ಜಾನುವಾರುಗಳ ಮಾರಣಹೋಮ ನಡೆಯುತ್ತಿದ್ಧ ಮಾಹಿತಿ ಅರಿತು ಸುರಪುರ ಪೊಲೀಸರು ಸ್ಥಳಕ್ಕೆ ತೆರಳಿ ಮಾಂಸ ಖರೀದಿ ಮಾಡಲು ಬಂದ ಜನರನ್ನು ಓಡಿಸುವ ಕೆಲಸ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

news18-kannada
Updated:August 2, 2020, 8:25 PM IST
ಯಾದಗಿರಿಯ ಕಸಾಯಿ ಖಾನೆಯಲ್ಲಿ ಗೋವುಗಳ ಹತ್ಯೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ 
ಕಸಾಯಿಖಾನೆ ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ಕಸಾಯಿ ಖಾನೆಯಲ್ಲಿ ಯಾವುದೇ ಅನುಮತಿ ಪಡೆಯದೆ ಜಾನುವಾರುಗಳ ಮಾರಣಹೋಮ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಕಸಾಯಿ ಖಾನೆಯಲ್ಲಿ ಎಲ್ಲಿ ನೋಡಿದರೂ ಮೂಕಪ್ರಾಣಿಗಳ ಮೂಳೆಗಳು , ಮಾಂಸ, ರಕ್ತದೋಕಳಿ ಕಂಡುಬರುತ್ತಿದೆ. ಕತ್ತರಿಸಿದ ಜಾನುವಾರುಗಳ ಕುತ್ತಿಗೆ ಭಾಗ ಹಾಗೂ ಇನ್ನಿತರ ಭಾಗ ಕೂಡ ಕಾಣುತ್ತವೆ.

ಜನವಸತಿ ಪ್ರದೇಶದಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಸಾಯಿ ಖಾನೆಯಲ್ಲಿ ಜೀವಂತ ಗೋವುಗಳು ಹಾಗೂ ‌ಕರುಗಳು ಕೂಡ ಇರಿಸಲಾಗಿದೆ. ಇಷ್ಟೆಲ್ಲ ಗೋವುಗಳ ಹತ್ಯೆಗೆ ಸಾಕ್ಷಿಯಾದರೂ ತಪ್ಪಿತಸ್ಥರ ಮೇಲೆ ಇನ್ನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿ ಶರಣು ನಾಯಕ ಮಾತನಾಡಿ, ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವುಗಳ ಹತ್ಯೆ ಮಾಡಲಾಗುತ್ತಿದೆ. ಇದರಿಂದ ದುರ್ವಾಸನೆಯಿಂದ ಸುತ್ತಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಅಧಿಕಾರಿಗಳು ಕಸಾಯಿ ಖಾನೆ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ; ಹೆಣ್ಣುಮರಿಗೆ ಜನ್ಮ ನೀಡಿದ ಆನೆ

ಜಾನುವಾರುಗಳ ಮಾರಣಹೋಮ ನಡೆಯುತ್ತಿದ್ಧ ಮಾಹಿತಿ ಅರಿತು ಸುರಪುರ ಪೊಲೀಸರು ಸ್ಥಳಕ್ಕೆ ತೆರಳಿ ಮಾಂಸ ಖರೀದಿ ಮಾಡಲು ಬಂದ ಜನರನ್ನು ಓಡಿಸುವ ಕೆಲಸ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಇನ್ನೂ ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಜನವಸತಿ ಪ್ರದೇಶದಲ್ಲಿ ಕಸಾಯಿಖಾನೆ ಆರಂಭ ಮಾಡಿ ಜಾನುವಾರುಗಳ ಮಾರಣಹೋಮ ಮಾಡಲಾಗುತ್ತಿದೆ. ಇದರಿಂದ ತ್ಯಾಜ್ಯವು ಸುತ್ತಲೂ ಪ್ರದೇಶದಲ್ಲಿ ಬಿಸಾಡಲಾಗಿದ್ದು ಇದರಿಂದ ಕೆಟ್ಟ ವಾಸನೆ ಬರುತ್ತಿದೆ. ಈಗಾಗಲೇ ಕೊರೊನಾ ಭೀತಿಯಲ್ಲಿ ಹೊರಗಡೆ ಓಡಾಡಲು ಸಾಧ್ಯವಾಗದೆ ಮನೆಯಲ್ಲಿ ವಾಸ ಮಾಡುವ ಸ್ಥಳೀಯರಿಗೆ ಕೆಟ್ಟ ವಾಸನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೆಸರಿಗೆ ಮಾತ್ರ ಲಾಕ್​ಡೌನ್​​ ಪರಿಹಾರ: ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಸಿಕ್ಕಲ್ಲ ಹಣ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸುರಪುರ ನಗರಸಭೆ ಪೌರಾಯುಕ್ತ ಜೀವನ್ ಅವರು  ಮಾತನಾಡಿ, ಕಸಾಯಿ ಖಾನೆ ನಡೆಸಲು ಯಾವುದೇ ಅನುಮತಿ ಇಲ್ಲ.ಈ ಬಗ್ಗೆ ಖುದ್ದು ಭೇಟಿ ನೀಡಿ ಕಸಾಯಿ ಖಾನೆ ಬಂದ್ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಹಾಡಹಗಲೇ ಗೋವುಗಳ ಮಾರಣಹೋಮ ಮಾಡುತ್ತಿದ್ದರು. ಸಂಬಂಧಪಟ್ಟವರು ಮೌನ ವಹಿಸಿದ್ದು ಯಾಕೆ ಈ ದಂಧೆಗೆ ಯಾರ ಕೈವಾಡವಿದೆ. ಈ ಬಗ್ಗೆ ಸಂಬಂಧಪಟ್ಟವರು ತನೀಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
Published by: Sushma Chakre
First published: August 2, 2020, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading