ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಗೆ ಕೈ ಜೋಡಿಸಿದ ವಿನಯ್​ ಗುರೂಜಿ

30 ವರ್ಷಗಳ ಕಾಲ ಮಲೆನಾಡಿನ ಜನರ ಸಂಪರ್ಕ ಸೇವೆ ಕಲ್ಪಿಸಿದ್ದ ಈ ಸಹಕಾರ ಸಾರಿಗೆ ಬಸ್​ ಕಾರ್ಮಿಕರಿಂದಲೇ ಕಟ್ಟಿ ಬೆಳಸಿದ ಸಂಸ್ಥೆ. ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದ ಈ ಸಂಸ್ಥೆ ಮಲೆನಾಡಿಗರ ಜನ ಜೀವನದ ಬೆಸುಗೆಯಾಗಿತ್ತು.

news18-kannada
Updated:February 19, 2020, 1:05 PM IST
ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಗೆ ಕೈ ಜೋಡಿಸಿದ ವಿನಯ್​ ಗುರೂಜಿ
ಅವಧೂತ ವಿನಯ್ ಗುರೂಜಿ.
  • Share this:
ಚಿಕ್ಕಮಗಳೂರು(ಫೆ. 19): ಮಲೆನಾಡಿನ ಜೀವನ ಭಾಗವಾಗಿದ್ದ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸೇವೆ ಬಂದ್​ ಮಾಡಿದ ನೌಕರರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಯಾರದೇ ಬೆಂಬಲ ಸಿಗದಿದ್ದ ಇವರಿಗೆ ಈಗ ಅವಧೂತ ವಿನಯ್ ಗುರೂಜಿ ಅವರು ನೆರವಿಗೆ ಧಾವಿಸಿ ಬಂದಿದ್ದಾರೆ. ಕೆಲ ಸಂಘಟನೆಗಳೂ ಬೆಂಬಲ ಸೂಚಿಸಿವೆ.

30 ವರ್ಷಗಳ ಕಾಲ ಮಲೆನಾಡಿನ ಜನರ ಸಂಪರ್ಕ ಸೇವೆ ಕಲ್ಪಿಸಿದ್ದ ಈ ಸಹಕಾರ ಸಾರಿಗೆ ಬಸ್​ ಕಾರ್ಮಿಕರಿಂದಲೇ ಕಟ್ಟಿ ಬೆಳಸಿದ ಸಂಸ್ಥೆ. ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದ ಈ ಸಂಸ್ಥೆ ಮಲೆನಾಡಿಗರ ಜನ ಜೀವನದ ಬೆಸುಗೆಯಾಗಿತ್ತು.

ಏಷ್ಯಾದಲ್ಲೇ ಉತ್ತಮ ಸಹಕಾರ ಸಂಸ್ಥೆ ಎಂಬ ಹೆಸರಿಗೆ ಪಾತ್ರವಾದ ಈ ಸಂಸ್ಥೆಯನ್ನು ಮುಚ್ಚುವ ಮನಸ್ಸಿಲ್ಲದೇ ಈಗಾಗಲೇ ಸಂಸ್ಥೆ ನೌಕರರು ಸರ್ಕಾರದ ಕದ ತಟ್ಟಿದ್ದರು. ಅಲ್ಲದೇ, ಸಂಸ್ಥೆಗೆ ಆರ್ಥಿಕ ಸಂಕಷ್ಟಕ್ಕೆ 6 ಕೋಟಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಘೋಷಿಸಿದರೂ, ಆರ್ಥಿಕ ಇಲಾಖೆ ಇನ್ನು ಮೀನ-ಮೇಷ ಏಣಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ತಕ್ಷಣಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ನೌಕರರು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಆರ್ಥಿಕ ಸಂಕಷ್ಟ; ಇತಿಹಾಸದ ಪುಟ ಸೇರಿದ ಮಲೆನಾಡಿನ ಸಹಕಾರ ಸಾರಿಗೆ ಬಸ್​

ಇನ್ನು, ಈ ಪ್ರತಿಭಟನೆಗೆ ವಿನಯ್​ ಗುರೂಜಿ ಸೇರಿದಂತೆ ರೈತ ಸಂಘ, ವಿದ್ಯಾರ್ಥಿಗಳ ಸಂಘಟನೆಗಳ ಬೆಂಬಲ ಸೂಚಿಸಿವೆ. ಸರ್ಕಾರ ಈ ಕೂಡಲೇ ಎಚ್ಚೆತ್ತು ಸಹಕಾರಿ ಸಂಘಟನೆಗೆ ಧನಸಹಾಯ ಮಾಡಬೇಕು ಎಂದು ಇವರು ಆಗ್ರಹಿಸಿದ್ದಾರೆ.
First published: February 19, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading