ಇಳಿ ವಯಸ್ಸಿನ ಅಸಮರ್ಥ ಮುಖ್ಯಮಂತ್ರಿ ಬಿಎಸ್​ವೈ: ಸಿಎಂ ಆಡಳಿತ ಟೀಕಿಸಿ ವಿಧಾನಸೌಧ ತಲುಪಿದ ಅನಾಮಧೇಯ ಪತ್ರ

ವಯಸ್ಸು ಕುಂದಿರುವುದರಿಂದ ನಿಮಗೆ ವಿಪಕ್ಷಗಳ ಟೀಕೆಗೆ ಸಮರ್ಥ ಉತ್ತರ ನೀಡಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಹಲವಾರು ಬಾರಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದೀರ. ಈ ಇಳಿ ವಯಸ್ಸಿನಲ್ಲಿ ನೀವು ದುರ್ಬಲ ಮುಖ್ಯಮಂತ್ರಿ ಎನ್ನಿಸಿಕೊಳ್ಳುತ್ತಿರುವುದು ನೋವು ಉಂಟು ಮಾಡುತ್ತಿದೆ ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ

Seema.R | news18-kannada
Updated:February 18, 2020, 4:20 PM IST
ಇಳಿ ವಯಸ್ಸಿನ ಅಸಮರ್ಥ ಮುಖ್ಯಮಂತ್ರಿ ಬಿಎಸ್​ವೈ: ಸಿಎಂ ಆಡಳಿತ ಟೀಕಿಸಿ ವಿಧಾನಸೌಧ ತಲುಪಿದ ಅನಾಮಧೇಯ ಪತ್ರ
ಸಿಎಂ ಬಿಎಸ್ ಯಡಿಯೂರಪ್ಪ.
  • Share this:
ಬೆಂಗಳೂರು (ಫೆ.18): ಸಚಿವ ಸ್ಥಾನ ಸಿಗದ ಕೆಲವು ಅತೃಪ್ತ ಶಾಸಕರು ಜಗದೀಶ್​ ಶೆಟ್ಟರ್​ ಮನೆಯಲ್ಲಿ ಸಭೆ ನಡೆಸುವ ಮೂಲಕ ಸಿಎಂ ಬಿಎಸ್​ ಯಡಿಯೂರಪ್ಪ ವಿರುದ್ಧ ಶೀತಲ ಸಮರಕ್ಕೆ ಮುಂದಾಗಿದ್ದಾರೆ. ಇತ್ತ ಇನ್ನೊಂದೆಡೆ ಮುಖ್ಯಮಂತ್ರಿಗಳ ಕಾರ್ಯವೈಖರಿ ಖಂಡಿಸಿ, ಅನಾಮಧೇಯ ಪತ್ರವೊಂದು ಬಂದಿದ್ದು, ಬಿಎಸ್​ ಯಡಿಯೂರಪ್ಪ ಅವರಿಗೆ ಶಾಕ್​ ನೀಡಿದೆ.

ಹೆಸರು, ವಿಳಾಸವಿಲ್ಲದ ಪತ್ರವೊಂದು ಮುಖ್ಯಮಂತ್ರಿ ಕಚೇರಿಗೆ ತಲುಪಿದೆ. ಈ ಪತ್ರದಲ್ಲಿ ಯಡಿಯೂರಪ್ಪ ಅವರ ಆಡಳಿತವನ್ನು ಟೀಕಿಸಲಾಗಿದೆ.

ಸಿಎಂ ಬಿಎಸ್​ವೈ ಅಸಮರ್ಥ ಆಡಳಿತಗಾರ ಎಂದು ಈ ಪತ್ರ ಉಲ್ಲೇಖಿಸಲಾಗಿದೆ. ಪತ್ರದಲ್ಲಿ ಯಡಿಯೂರಪ್ಪ ಒಬ್ಬ ವಯೋವೃದ್ಧ ಮುಖ್ಯಮಂತ್ರಿಯಾಗಿದ್ದು, ನಿಷ್ಕ್ರಿಯ ಸರ್ಕಾರ ನಡೆಸುತ್ತಿದ್ದಾರೆ. 77 ವರ್ಷ ಪೂರೈಸಿದ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ. ನಿಮಗೆ ವಯಸ್ಸಾಗುತ್ತಿದ್ದು, ಕಿವಿಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ನೆನಪಿನ ಶಕ್ತಿ ಕೂಡ ಕ್ಷೀಣಿಸುತ್ತಿದ್ದು, ಕೆಲಸ ಮಾಡಲು ನಿಮ್ಮ ದೇಹ ಸಹಕರಿಸುತ್ತಿಲ್ಲ ಎಂದಿದ್ದಾರೆ.

ಅಲ್ಲದೇ ವಯಸ್ಸು ಕುಂದಿರುವುದರಿಂದ ನಿಮಗೆ ವಿಪಕ್ಷಗಳ ಟೀಕೆಗೆ ಸಮರ್ಥ ಉತ್ತರ ನೀಡಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಹಲವಾರು ಬಾರಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದೀರ. ಈ ಇಳಿ ವಯಸ್ಸಿನಲ್ಲಿ ನೀವು ದುರ್ಬಲ ಮುಖ್ಯಮಂತ್ರಿ ಎನ್ನಿಸಿಕೊಳ್ಳುತ್ತಿರುವುದು ನೋವು ಉಂಟು ಮಾಡುತ್ತಿದೆ ಎಂದು ವ್ಯಂಗ್ಯವಾಗಿ ತಿಳಿಸಿದ್ದಾರೆ.ಹೈ ಕಮಾಂಡ್​ಗೆ ಇಷ್ಟವಿಲ್ಲದೇ ನಿಮ್ಮನ್ನು ಸಿಎಂ ಆಗಿ ಮಾಡಲಾಗಿದೆ. ಇದರಿಂದಾಗಿ ಸಂಪುಟ ರಚನೆ ಸಂದರ್ಭದಲ್ಲಿ ನಿಮಗೆ ಸಹಕಾರ ಸಿಗಲಿಲ್ಲ, ಅಲ್ಲದೇ ಸರ್ಕಾರ ಆಡಳಿತದಲ್ಲಿ ದೃತರಾಷ್ಟ್ರನಂತೆ ಮಕ್ಕಳ ಮೇಲೆ ನಿಮಗೆ ಅಂಧ ಪ್ರೀತಿ ಮೂಡಿದೆ. ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ನಿಮ್ಮ ಸಂಬಂಧಿಕರು, ನೆಂಟರುಗಳೇ ಹಸ್ತಕ್ಷೇಪ ಮಾಡುತ್ತಿದ್ದಾರೆ.

ತಮ್ಮ ಸಮುದಾಯ ಬೆಳೆಸುವ ಬದಲು ವೀರಶೈವ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡುತಿದ್ದೀರ. ಪಕ್ಷದ ತತ್ವ  ಸಿದ್ದಾಂತಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೀರ. ಈ ಇಳಿ ವಯಸ್ಸಿನಲ್ಲಿ ರಾಜ್ಯವನ್ನು ಮುನ್ನಡೆಸುವ ದೈಹಿಕ ಸಾಮರ್ಥ್ಯ ನಿಮ್ಮಲ್ಲಿ ಇಲ್ಲ. ಇದರ ಬದಲು ರಾಜ್ಯಪಾಲರನ್ನಾಗಿ ನಿಮ್ಮನ್ನು ನೇಮಕ ಮಾಡುವುದು ಒಳಿತು ಎಂದು ಟೀಕಿಸಿದ್ದಾರೆ.ಬಿಜೆಪಿ ನಾಯಕರ ಟೀಕೆ

ಇನ್ನು ಈ ಪತ್ರದ ವಿರುದ್ಧ ಬಿಜೆಪಿ ನಾಯಕರು ಟೀಕಿಸಿದ್ದು, ಬೌದ್ಧಿಕವಾಗಿ ದಿವಾಳಿಯಾದ ವಿಪಕ್ಷಗಳವರ ಕೃತ್ಯ ಇದು ಎಂದು ದೂರಿದ್ದಾರೆ. ಬಿಎಸ್​ವೈ ಅನುಭವದ ಮುಂದೆ ಬೇರೇನು ಇಲ್ಲ. ರಾಜಕೀಯವೇ ಒಂದು ದೊಡ್ಡ ಷಡ್ಯಂತ್ರ. ಯಡಿಯೂರಪ್ಪ ಮೂರುವರೆ ವರ್ಷ ಯಶಸ್ವಿಯಾಗಿ ಅಧಿಕಾರ ಪೂರೈಸ್ತಾರೆ ಎಂದು ಸಚಿವ ಸುಧಾಕರ್​ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಸಿಎಂ ಬಿಎಸ್​ವೈಗೆ ಮತ್ತೊಂದು ತಲೆನೋವು; ಶೆಟ್ಟರ್​ ಮನೆಯಲ್ಲಿ ರಾತ್ರೋರಾತ್ರಿ ಭಿನ್ನಮತೀಯರ ಸಭೆ

ಇನ್ನು ನೂತನ ಸಚಿವ ಬಿಸಿ ಪಾಟೀಲ್​ ಈ ಕುರಿತು ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ದಕ್ಷವಾಗಿದ್ದಾರೆ. ಮೂರುಕಾಲು ವರ್ಷ ಅವರೇ ಸಿಎಂ ಆಗಿರ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

(ವರದಿ : ಅಭಿಷೇಕ್​ )
First published: February 18, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading