ಅಪ್ಪ ಅಮ್ಮನ ಜಗಳಕ್ಕೆ ಮೋರಿ ಪಾಲಾದ ಆರು ತಿಂಗಳ ಕೂಸು, ಸ್ಥಳೀಯರಿಂದ ರಕ್ಷಣೆ

ಹೆಣ್ಣು ಮಗು ಆದ ಕಾರಣ ಯಾರೋ ನಿರ್ದಯಿ ಪೋಷಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಈ ಕುರಿತು ಪೊಲೀಸರಿಗೆ ಕೂಡ ದೂರು ನೀಡಲಾಗಿತ್ತು. ಇದಾದ ಗಂಟೆಯೊಳಗೆ ಮಗುವನ್ನು ಹುಡುಕಿಕೊಂಡು ತಂದೆ ಬಂದಿದ್ದು, ಈ ಘಟನೆಗೆ ಹೊಸ ಟ್ವಿಸ್ಟ್​ ಸಿಕ್ಕಿದೆ. 

news18-kannada
Updated:February 18, 2020, 4:23 PM IST
ಅಪ್ಪ ಅಮ್ಮನ ಜಗಳಕ್ಕೆ ಮೋರಿ ಪಾಲಾದ ಆರು ತಿಂಗಳ ಕೂಸು, ಸ್ಥಳೀಯರಿಂದ ರಕ್ಷಣೆ
ಸಾಂದರ್ಭಿಕ ಚಿತ್ರ
  • Share this:
ಮೈಸೂರು (ಫೆ.18): ಗಂಡ-ಹೆಂಡತಿ ಜಗಳಕ್ಕೆ ಆರು ತಿಂಗಳ ಮಗುವೊಂದು ಮೋರಿ ಪಾಲಾಗಿರುವ ಘಟನೆ ನಗರದ ವಿದ್ಯಾರಣ್ಯಪುರಂನ ಸೂಯೆಜ್​ ಫಾರಂನಲ್ಲಿ ನಡೆದಿದೆ. ಇಂದು ಬೆಳಗ್ಗೆ ಸೂಯೆಜ್​ ಫಾರಂ ಪ್ರದೇಶದ ಮೋರಿಯಲ್ಲಿ ಆರು ತಿಂಗಳ ಮಗುವಿನ ಚೀರಾಟ ಕೇಳಿದೆ. ಮಗು ಅಳು ಶಬ್ಧ ಕೇಳಿ ಆಂತಕ ಗೊಂಡು ಹೊರ ಬಂದ ನಿವಾಸಿಗಳಿಗೆ ಆರು ತಿಂಗಳ ಹೆಣ್ಣು ಮಗುವೊಂದು ಕಂಡಿದೆ. ತಕ್ಷಣಕ್ಕೆ ಸ್ಥಳೀಯರು ಆ ಮಗುವನ್ನು ರಕ್ಷಿಸಿ ಹತ್ತಿರದ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಹೆಣ್ಣು ಮಗು ಆದ ಕಾರಣ ಯಾರೋ ನಿರ್ದಯಿ ಪೋಷಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಈ ಕುರಿತು ಪೊಲೀಸರಿಗೆ ಕೂಡ ದೂರು ನೀಡಲಾಗಿತ್ತು. ಇದಾದ ಗಂಟೆಯೊಳಗೆ ಮಗುವನ್ನು ಹುಡುಕಿಕೊಂಡು ತಂದೆ ಬಂದಿದ್ದು, ಈ ಘಟನೆಗೆ ಹೊಸ ಟ್ವಿಸ್ಟ್​ ಸಿಕ್ಕಿದೆ.

ಗಂಡ ಹೆಂಡತಿ ಜಗಳ ತಾರಕಕ್ಕೆ ಹೋದ ಹಿನ್ನೆಲೆ ಹೆತ್ತ ತಾಯಿಯೇ ಮಗುವನ್ನು ಸಿಟ್ಟಿನಲ್ಲಿ ಮೋರಿಗೆ ಬಿಸಾಡಿ ಹೋಗಿರುವುದು ತಿಳಿದು ಬಂದಿದೆ. ಘಟನೆ ನಡೆದು ಸುಮಾರು ಹೊತ್ತಿನ ಬಳಿಕ ಮಗುವನ್ನು ಹುಡುಕಿಕೊಂಡು ತಂದೆ ಬಂದಿದ್ದು, ಮಗುವಿಗಾಗಿ ಸಾರ್ವಜನಿಕರಲ್ಲಿ ಅಂಗಲಾಚಿದ್ದಾರೆ. ಈ ವೇಳೆ ಸಾರ್ವಜನಿಕರು ತಂದೆಗೆ ತರಾಟೆ ತೆಗೆದುಕೊಂಡಿದ್ದಾರೆ.

ಮಗುವನ್ನು ಸಾಕಲು ಯೋಗ್ಯತೆ ಇಲ್ಲದಿದ್ದರೆ ಮಗುವನ್ನು ನಮಗೆ ಕೊಡಿ. ಈ ರೀತಿ ಮಗುವನ್ನು ಬಿಸಾಡಲು ಮನಸ್ಸು ಹೇಗೆ ಬಂತು ಎಂದು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಈ ವೇಳೆ ಹೆಂಡತಿ ಈ ಕೃತ್ಯ ಎಸಗಿದ್ದು, ಆಕೆಗೆ ಥಳಿಸಿದ್ದೇನೆ. ದಯಮಾಡಿ ಮಗು ವಾಪಸ್ಸು ನೀಡಿ ಎಂದು ತಂದೆ ಅತ್ತಿದ್ದಾನೆ.

ಇದನ್ನು ಓದಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್

ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ್ದು ಮಗುವಿನ ತಾಯಿ ಬುದ್ಧಿಮಾಂದ್ಯಳಂತೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಮಗುವನ್ನು ಮರಳಿಸುವಂತೆ ತಂದೆ ಪೊಲೀಸರ ಬಳಿ ಅಲವತ್ತು ಕೊಂಡಿದ್ದಾನೆ. ಬಳಿಕ ತಂದೆ ತಾಯಿ ಇಬ್ಬರಿಗೂ ಪೊಲೀಸರು ಬುದ್ದಿ ಹೇಳಿ, ಮಗು ವಾಪಸ್ ನೀಡುವ ಭರವಸೆ ನೀಡಿದ್ದಾರೆ.
First published: February 18, 2020, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading