ಹಿರೇಕೆರೂರಿನಲ್ಲಿ ತಲೆಕೆಳಗಾಯ್ತು ಜೆಡಿಎಸ್​ ಮಾಸ್ಟರ್ ಪ್ಲಾನ್; ಇಂದು ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಾಸ್

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಸಲ್ಲಿಕೆಯಿಂದ ಭಕ್ತರಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಂಚಪೀಠ ಸ್ವಾಮೀಜಿಗಳಿಂದ ಶಿವಾಚಾರ್ಯ ಅವರಿಗೆ ಮನವೊಲಿಸಲು ಬಾರಿ ಕಸರತ್ತು ನಡೆದಿತ್ತು.

news18-kannada
Updated:November 20, 2019, 8:34 AM IST
ಹಿರೇಕೆರೂರಿನಲ್ಲಿ ತಲೆಕೆಳಗಾಯ್ತು ಜೆಡಿಎಸ್​ ಮಾಸ್ಟರ್ ಪ್ಲಾನ್; ಇಂದು ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಾಸ್
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ
  • Share this:
ಹಾವೇರಿ (ನ. 20): ಕಾಂಗ್ರೆಸ್ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಅವರಿಂದ ತೆರವಾಗಿದ್ದ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ. 5ರಂದು ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಿ.ಸಿ. ಪಾಟೀಲ್ ಅವರನ್ನು ಮಣಿಸಲು ಜೆಡಿಎಸ್​ ರಣತಂತ್ರ ರೂಪಿಸಿತ್ತು. ಆ ಭಾಗದ ಪ್ರಭಾವಿ ಸ್ವಾಮೀಜಿ ರಟ್ಟಿಹಳ್ಳಿಯ ಕಬ್ಬಿನ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕೊನೆ ಕ್ಷಣದಲ್ಲಿ ಜೆಡಿಎಸ್​ ಅಭ್ಯರ್ಥಿಯೆಂದು ಘೋಷಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದ ಜೆಡಿಎಸ್​ ನಾಯಕರಿಗೆ ಇದೀಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ತಿಳಿದ ಕೂಡಲೆ ಬಿಜೆಪಿಯ ಅನೇಕ ನಾಯಕರು ಅವರನ್ನು ಭೇಟಿ ಮಾಡಿ ಮನವೊಲಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಅದಕ್ಕೆ ಒಪ್ಪದ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಹಠ ಹಿಡಿದಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿರುವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ವಾಪಾಸ್ ಪಡೆಯಲಿದ್ದಾರೆ. ಇದರಿಂದ ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್​ ಸ್ಪರ್ಧಿಗಳೇ ಇಲ್ಲದಂತಾಗಿದೆ.

ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಶಿವಾಚಾರ್ಯ ಸ್ವಾಮೀಜಿ ಸ್ಪರ್ಧೆಯ ಸುತ್ತ ಅನುಮಾನದ ಹುತ್ತ

ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಈ ಬಗ್ಗೆ ನ್ಯೂಸ್​18 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ವಾಪಾಸ್ ಪಡೆಯಲಿದ್ದೇನೆ. ಹಿರಿಯ ಸ್ವಾಮೀಜಿಗಳ ಮಾರ್ಗದರ್ಶನದ ಮೇರೆಗೆ ನಾಮಪತ್ರ ವಾಪಾಸ್ ಪಡೆಯಲು ನಿರ್ಧರಿಸಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್​​ ನಾಯಕರಿಗೆ ಶಾಕ್ ನೀಡಿದ್ದಾರೆ. ಹಿರೇಕೆರೂರಿನಲ್ಲಿ ಬಿಜೆಪಿಯನ್ನು ಮಣಿಸಲು ಸಾಕಷ್ಟು ಲೆಕ್ಕಾಚಾರ ಹಾಕಿದ್ದ ಜೆಡಿಎಸ್​ ದಳಪತಿಗಳ ಮಾಸ್ಟರ್ ಪ್ಲ್ಯಾನ್ ಉಲ್ಟಾ ಹೊಡೆದಂತಾಗಿದೆ.

ಜೈಲಿಂದ ಬಂದಮೇಲೆ ಹೆಚ್ಚಾಯ್ತು ಡಿಕೆಶಿ ವರ್ಚಸ್ಸು; ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯ ಬದಲು ಟ್ರಬಲ್ ಶೂಟರ್ ಜಪ!

ಸ್ವಾಮೀಜಿ ನಾಮಪತ್ರ ಸಲ್ಲಿಕೆಯಿಂದ ಭಕ್ತರಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗೆ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಂಚಪೀಠ ಸ್ವಾಮೀಜಿಗಳಿಂದ ಶಿವಾಚಾರ್ಯ ಅವರಿಗೆ ಮನವೊಲಿಸಲು ಬಾರಿ ಕಸರತ್ತು ನಡೆದಿತ್ತು. ಹೀಗಾಗಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

First published:November 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading